ವಾಷಿಂಗ್ಟನ್: ರಷ್ಯಾಕ್ಕೆ ವಾಯುಮಾರ್ಗವನ್ನು ಮುಚ್ಚಿದ ಅಮೆರಿಕ, ಪುಟಿನ್ ಅವರ ಕ್ರಮಗಳು ಪೂರ್ವಯೋಜಿತವಾಗಿದ್ದು, ಅಪ್ರಚೋದಿತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಿಡಿಕಾರಿದರು.
ಮಾಧ್ಯಮಗಳ ಜೊತೆ ಮಾತನಾಡುತ್ತಾ ಉಕ್ರೇನ್‍ನ ಮೇಲೆ ಕೈಗೊಂಡ ಪುಟಿನ್‍ನ ಕ್ರಮಗಳನ್ನು ಖಂಡಿಸಿದರು. ಪುಟಿನ್ ಪಶ್ಚಿಮ ಹಾಗೂ ನ್ಯಾಟೋ ಒಕ್ಕೂಟಗಳು ಇದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದುಕೊಂಡಿದ್ದರು. ಆದರೆ ಅವರು ಅಂದುಕೊಂಡಿರುವುದು ತಪ್ಪು. ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂದು ತಿಳಿಸಿದರು.
Advertisement
Advertisement
ಪುಟಿನ್ ಯುದ್ಧಭೂಮಿಯಲ್ಲಿ ಲಾಭವನ್ನು ಗಳಿಸಬಹುದು. ಆದರೆ ಭವಿಷ್ಯದಲ್ಲಿ ಅವರು ಹೆಚ್ಚಿನ ಬೆಲೆಯನ್ನು ತೆರಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿದ ಭಾರತೀಯರನ್ನು ಸ್ಥಳಾಂತರಿಸಲು ಕಾರ್ಯತಂತ್ರ ರೂಪಿಸಿ: ರಾಹುಲ್ ಗಾಂಧಿ
Advertisement
ತಮ್ಮ ದೇಶವು ಯುಎಸ್ ಮಿತ್ರರಾಷ್ಟ್ರಗಳೊಂದಿಗೆ ನ್ಯಾಟೋ ಪ್ರದೇಶಗಳನ್ನು ರಕ್ಷಿಸುತ್ತದೆ. ಅಮೆರಿಕ ಹಾಗೂ ನಮ್ಮ ಮಿತ್ರ ರಾಷ್ಟ್ರಗಳು ಒಗ್ಗಟ್ಟಿನ ಬಲದಿಂದ ನ್ಯಾಟೋ ಪ್ರದೇಶದ ಪ್ರತೀ ಇಂಚನ್ನು ರಕ್ಷಿಸುತ್ತಿದೆ. ಉಕ್ರೇನ್‍ನವರು ಧೈರ್ಯದಿಂದ ಹೋರಾಡುತ್ತಿದ್ದಾರೆ ಎಂದರು.
Advertisement
ಉಕ್ರೇನ್ ನೆಲದಲ್ಲಿ ಅಮೆರಿಕದ ಪಡೆಗಳು ರಷ್ಯಾದೊಂದಿಗೆ ತೊಡಗಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಮ್ಮ ಪಡೆಗಳು ಉಕ್ರೇನ್‍ಗಾಗಿ ಹೋರಾಡುತ್ತಿಲ್ಲ. ಆದರೆ ನಮ್ಮ ನ್ಯಾಟೋ ಮಿತ್ರರಾಷ್ಟ್ರಗಳನ್ನು ರಕ್ಷಿಸಲು ಮತ್ತು ಪುಟಿನ್ ಪಶ್ಚಿಮಕ್ಕೆ ಚಲಿಸುವುದನ್ನು ತಡೆಯಲು ಪೋಲೆಂಡ್, ರೊಮೇನಿಯಾ, ಲಾಟ್ವಿಯಾ, ಲಿಥುವೇನಿಯಾ ಮತ್ತು ಎಸ್ಟೋನಿಯಾ ಸೇರಿದಂತೆ ನ್ಯಾಟೋ ದೇಶಗಳನ್ನು ರಕ್ಷಿಸಲು ಸಿದ್ಧಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಉಕ್ರೇನ್‍ಗೆ ಮುಂದಿನ ಕೆಲವು ದಿನಗಳು, ವಾರಗಳು ಮತ್ತು ತಿಂಗಳುಗಳು ಕಠಿಣವಾಗಿರುತ್ತವೆ. ಪುಟಿನ್ ಕೈವ್ ಅನ್ನು ಟ್ಯಾಂಕ್‍ಗಳೊಂದಿಗೆ ಸುತ್ತಬಹುದು. ಆದರೆ ಅವರು ಎಂದಿಗೂ ಉಕ್ರೇನಿನ ಜನರನ್ನು ಗೆಲ್ಲಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ನನ್ನ ತಮ್ಮನಿಗೆ ಬಹಳಷ್ಟು ಕನಸುಗಳಿದ್ದವು: ನವೀನ್ ಸಹೋದರ