ರಾಹುಕಾಲ – 7:32 ರಿಂದ 9:08
ಗುಳಿಕಕಾಲ – 1:56 ರಿಂದ 3:32
ಯಮಗಂಡಕಾಲ – 10:44 ರಿಂದ 12:20
ವಾರ : ಸೋಮವಾರ, ತಿಥಿ : ಪಾಡ್ಯ, ನಕ್ಷತ್ರ: ಜೇಷ್ಠ
ಶ್ರೀ ಪರಾಭವ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಅಧಿಕ ಜೇಷ್ಠ ಮಾಸ, ಕೃಷ್ಣ ಪಕ್ಷ
ಮೇಷ: ಈ ದಿನ ಸ್ಥಳ ಬದಲಾವಣೆ, ಹಣ ಸಂಪಾದನೆ ಬಯಕೆ, ವ್ಯಾಸಂಗದಲ್ಲಿ ಹಿನ್ನಡೆ, ಚಂಚಲ ಸ್ವಭಾವ, ಮಾತಿನ ಚಕಮಕಿ.
ವೃಷಭ: ನಂಬಿದ ಜನರಿಂದ ಮೋಸ, ಅಶಾಂತಿ, ದಾಯಾದಿ ಕಲಹ, ಶತ್ರು ಭಾದೆ, ಅನಾರೋಗ್ಯ, ಋಣ ಭಾದೆ.
ಮಿಥುನ: ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ, ಕುಟುಂಬ ಸೌಖ್ಯ, ಸಾಲ ಭಾದೆ, ಸ್ಥಾನ ಹಾನಿ.
ಕಟಕ: ಈ ದಿನ ಉದ್ಯೋಗದಲ್ಲಿ ಅಭಿವೃದ್ಧಿ, ಮಾನಹಾನಿ, ಇಲ್ಲಸಲ್ಲದ ತಕರಾರು, ತಂದೆಗೆ ಅನಾರೋಗ್ಯ.
ಸಿಂಹ: ಈ ದಿನ ದ್ರವ್ಯ ಲಾಭ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಪರಸ್ಥಳವಾಸ, ಪ್ರಯಾಣದಿಂದ ಆಯಾಸ,
ಕನ್ಯಾ: ಈ ದಿನ ನಂಬಿಕೆ ದ್ರೋಹ, ಅಲ್ಪ ಆದಾಯ ಅಧಿಕ ಖರ್ಚು, ಸ್ತ್ರೀಯಿಂದ ತೊಂದರೆ, ಮಾನಸಿಕ ಚಿಂತೆ.
ತುಲಾ: ಈ ದಿನ ಹಿತ ಶತ್ರುಗಳಿಂದ ತೊಂದರೆ, ಮನಸ್ಸಿನಲ್ಲಿ ಭಯ, ರಾಜ ವಿರೋಧ, ಮಾತಿನ ಚಕಮಕಿ.
ವೃಶ್ಚಿಕ: ಈ ದಿನ ನಾನಾ ವಿಚಾರಗಳಲ್ಲಿ ಆಸಕ್ತಿ, ತಾಯಿಯಿಂದ ಸಹಾಯ, ಮನಶಾಂತಿ, ಕೋರ್ಟ್ ವ್ಯವಹಾರಗಳಲ್ಲಿ ಮುನ್ನಡೆ.
ಧನಸ್ಸು: ಧೈರ್ಯದಿಂದ ಕೆಲಸಕಾರ್ಯಗಳಲ್ಲಿ ಮುನ್ನುಗ್ಗುವಿರಿ, ಮನ:ಶಾಂತಿ, ಕುಟುಂಬದಲ್ಲಿ ನೆಮ್ಮದಿ, ತೀರ್ಥಯಾತ್ರದರ್ಶನ.
ಮಕರ: ನಿವೇಶನ ಕೊಳ್ಳುವ ಸಂಭವ, ಅಧಿಕ ತಿರುಗಾಟ, ವಾದ ವಿವಾದಗಳಿಂದ ದೂರವಿರಿ, ಚಂಚಲ ಮನಸ್ಸು.
ಕುಂಭ: ಈ ದಿನ ಧಾನ್ಯ ವ್ಯಾಪಾರಿಗಳಿಗೆ ಲಾಭ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಅನಿರೀಕ್ಷಿತ ಖರ್ಚು, ಮಾನಸಿಕ ಒತ್ತಡ.
ಮೀನ: ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ, ಆದಾಯಕ್ಕಿಂತ ಖರ್ಚು ಜಾಸ್ತಿ, ಮನಶಾಂತಿ, ಉದ್ಯೋಗದಲ್ಲಿ ಬಡ್ತಿ.
