ಉಡುಪಿ: ಪ್ರಧಾನಿ ನರೇಂದ್ರಮೋದಿ (Narendra Modi) ಅವರಿಗಿಂತಲೂ ಅಭಿಮಾನಿಗಳೇ ಅವರ ಹುಟ್ಟುಹಬ್ಬದ (Birthday) ಸಂಭ್ರಮದಲ್ಲಿದ್ದಾರೆ. ವಿವಿಧ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು (Social Activities) ಮಾಡುವ ಮೂಲಕ ತಮ್ಮ ಅಭಿಮಾನ ತೋರುತ್ತಿದ್ದಾರೆ. ಹಾಗೆಯೇ ಉಡುಪಿಯ ಅಭಿಮಾನಿ ಶಿಲ್ಪಾ ಸಾಲಿಯಾನ್ (Shilpa Saliyan) ಅವರು ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದೇಹದಾನ ಮಾಡಿದ್ದಾರೆ.
Advertisement
ಮೋದಿಗಾಗಿ ಪೂಜೆ ಹೋಮ ಹವನ:
ಪ್ರಧಾನಿ ಮೋದಿ (Prime Minister) ಹುಟ್ಟುಹಬ್ಬ ದೇಶದಲ್ಲಿ ಒಂದು ವಾರ ಆಚರಣೆಯಾಗಲಿದೆ. ಪ್ರಧಾನಿ ಮೋದಿಗೆ ದೇಶಾದ್ಯಂತ ಹುಚ್ಚು ಅಭಿಮಾನಿಗಳಿದ್ದಾರೆ. ಈ ನಡುವೆ ಉಡುಪಿಯ ಅಪ್ಪಟ ಅಭಿಮಾನಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ದಿನ ತನ್ನ ದೇಹವನ್ನು ದಾನ ಮಾಡಿದ್ದಾರೆ. ಮಣಿಪಾಲ ಕೆಎಂಸಿ (Manipala KMC Hospital) ವೈದ್ಯಕೀಯ ವಿಭಾಗಕ್ಕೆ ತನ್ನ ದೇಹದಾನ ಮಾಡುವುದಾಗಿ ಸಹಿ ಹಾಕಿದ್ದಾರೆ. ಇದನ್ನೂ ಓದಿ: ಮಹತ್ತರವಾದ ಕಾರಣಕ್ಕಾಗಿ ಮತ್ತೆ ಕ್ರಿಕೆಟ್ ಆಡಲು ಮೈದಾನಕ್ಕಿಳಿದ ಲೆಜೆಂಡ್ ಕ್ರಿಕೆಟಿಗರು
Advertisement
Advertisement
ದೇಹದಾನಕ್ಕಿದೆ ಕಟ್ಟುನಿಟ್ಟಿನ ನಿಯಮ:
ಪ್ರಧಾನಿ ನರೇಂದ್ರ ಮೋದಿಯ ದೊಡ್ಡ ಅಭಿಮಾನಿಯಾಗಿರುವ ಶಿಲ್ಪಾ ಸಾಲಿಯಾನ್ ದೇಹ ದಾನಕ್ಕೆ ನಿರ್ಧಾರ ಮಾಡಿದಾಗ ಸಾಕಷ್ಟು ನಿಯಮಗಳು ಅಡ್ಡಿಯಾದವು. ಗಂಡ, ತಂದೆ – ತಾಯಿ ಮತ್ತು ಕುಟುಂಬಸ್ಥರ ಸಹಿ ಇಲ್ಲದೇ ದೇಹ ದಾನ ಮಾಡಲು ಸಾಧ್ಯವಿಲ್ಲ ಎಂದು ಕೆಎಂಸಿಯ ವೈದ್ಯರು (Doctors) ಹೇಳಿದ್ದರು. ಬಳಿಕ ಇಡೀ ಕುಟುಂಬವನ್ನು ಒಪ್ಪಿಸಿ, ದೇಹ ದಾನದಿಂದ ಮುಂದೆ ವೈದ್ಯಕೀಯ ಲೋಕಕ್ಕೆ ಆಗಬಹುದಾದ ಉಪಯೋಗಗಳನ್ನು ತಿಳಿಸಿ ಒಪ್ಪಿಗೆ ಪಡೆದು ದೇಹದಾನಕ್ಕೆ ಸಹಿ ಮಾಡಿದ್ದಾರೆ. ಇದನ್ನೂ ಓದಿ: ನೇಪಾಳದಲ್ಲಿ ಭೂಕುಸಿತ – 14 ಸಾವು, 10 ಮಂದಿ ನಾಪತ್ತೆ
Advertisement
ದೇಹದಾನದ ಬಳಿಕ ಪಬ್ಲಿಕ್ ಟಿವಿಯೊಂದಿಗೆ (Public TV) ಮಾತನಾಡಿರುವ ಶಿಲ್ಪಾ ಸಾಲಿಯಾನ್, ನಾನು ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿ. ಪ್ರಧಾನಿ ಮೋದಿ ಜೀವನವನ್ನೇ ದೇಶಕ್ಕೋಸ್ಕರ ಮುಡಿಪಾಗಿಟ್ಟಿದ್ದಾರೆ. ಈ ದೇಹ ಸತ್ತ ಮೇಲೆ ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೆ. ನಾಲ್ಕು ಜನಕ್ಕೆ ಉಪಯೋಗ ಆಗಲಿ ಎಂದು ದೇಹದಾನ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅಂತಹ ವ್ಯಕ್ತಿ ಹಿಂದೆ ದೇಶದ ಪ್ರಧಾನಿಯಾಗಿಲ್ಲ. ಮುಂದೆ ಆಗಲು ಸಾಧ್ಯವಿಲ್ಲ. 75 ವರ್ಷ ಆದ ನಂತರ ಅವರು ನಿವೃತ್ತಿ ಆಗಬಾರದು. ಅವರ ದೇಹದಲ್ಲಿ ಶಕ್ತಿ ಇರುವ ತನಕ ಅವರು ಪ್ರಧಾನಿಯಾಗಿ ಇರಬೇಕು ಎಂದು ಎಂದು ಆಶಿಸಿದ್ದಾರೆ.
ಮುಂದುವರಿದು ದೇಶಾದ್ಯಂತ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಮೃತ ದೇಹಗಳ ಕೊರತೆ ಇದೆ. ಬೇರೆ ಬೇರೆ ಸಂದರ್ಭಗಳಲ್ಲಿ ನೀವೂ ದೇಹದಾನ ಮಾಡಿದರೆ ಅಧ್ಯಯನಕ್ಕೂ ಅನುಕೂಲವಾಗಲಿದೆ ಎಂದು ಶಿಲ್ಪಾ ಸಾಲಿಯಾನ್ ಸಲಹೆ ನೀಡಿದ್ದಾರೆ.