ಹಾಸನ: ತಮ್ಮ ಮಗನೊಂದಿಗೆ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಯುವಕನ ಪೋಷಕರು ನಿಂದಿಸಿದ್ದಕ್ಕೆ ಮನನೊಂದು ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಹಾಸನದ ಸಮುದ್ರವಳ್ಳಿಯಲ್ಲಿ ನಡೆದಿದೆ.
ಗ್ರಾಮದ ಆಶಾ (35) ಆತ್ಮಹತ್ಯೆಗೆ ಶರಣಾದ ಮಹಿಳೆ. ಕಂಚನಹಳ್ಳಿ ಗ್ರಾಮದ ಸಚಿನ್ ಜೊತೆ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಆರೋಪಿಸಿ ಆತನ ಪೋಷಕರು ಗಲಾಟೆ ಮಾಡಿದ್ದರು. ಯುವಕನನ್ನು ಮಾತನಾಡಿಸದಂತೆ ಬೆದರಿಕೆ ಹಾಕಿದ್ದರು. ಇದನ್ನೂ ಓದಿ: 2 ಕೋಟಿ ವಿಮೆ ಹಣಕ್ಕಾಗಿ ಮಾಜಿ ಸೈನಿಕನ ಕೊಲೆ – ಗ್ಲೂಕೋಸ್ ಬಾಟಲ್‌ನಲ್ಲಿ ವಿಷ ಹಾಕಿ ಪತ್ನಿಯಿಂದ ಹತ್ಯೆ?
ಜೂ.1 ರಂದು ಮಹಿಳೆ ವಿಷ ಸೇವಿಸಿದ್ದಳು. ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾಳೆ. ಸಚಿನ್ ಹಾಗೂ ಆತನ ಪೋಷಕರ ವಿರುದ್ಧ ಕ್ರಮಕ್ಕೆ ಮಹಿಳೆಯ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಸಚಿನ್ ಸೇರಿ ಆರು ಮಂದಿ ವಿರುದ್ಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಅಪ್ರಾಪ್ತೆಗೆ ಬ್ಲ್ಯಾಕ್‌ಮೇಲ್ ಮಾಡಿ ಸಾಮೂಹಿಕ ಅತ್ಯಾಚಾರ ಆರೋಪ – ಐವರ ಬಂಧನ
