Connect with us

Districts

ಆಡು ಮೇಯಿಸಲು ಹೋಗಿದ್ದಾಗ ವಿದ್ಯುತ್ ತಂತಿ ತಗುಲಿ ಸಹೋದರಿಬ್ಬರ ದುರ್ಮರಣ

Published

on

ಕಲಬುರಗಿ: ವಿದ್ಯುತ್ ತಂತಿ ತಗುಲಿ ಇಬ್ಬರು ಸಹೋದರರು ಹಾಗೂ ಮೂರು ಆಡುಗಳು ಸಾವನಪ್ಪಿರುವ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದಲ್ಲಿ ನಡೆದಿದೆ.

ಇಜೇರಿ ಗ್ರಾಮದ ದೇವಪ್ಪಾ(14) ಹಾಗೂ ರಾಜು (10) ಮೃತ ಸಹೋದರರಾಗಿದ್ದಾರೆ. ಇಂದು ಇಬ್ಬರು ಬಾಲಕರು ಹೊಲದಲ್ಲಿ ಆಡುಗಳನ್ನು ಮೇಯಿಸಲು ಹೋದಾಗ, ಹೊಲದಲ್ಲಿರುವ ತಂತಿ ಬೇಲಿಯನ್ನು ದಾಟುವ ವೇಳೆ ವಿದ್ಯುತ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ಜೊತೆ ಮೂರು ಆಡುಗಳು ಸಹ ಸಾವನ್ನಪ್ಪಿವೆ.

ಪಂಪಸೆಂಟ್ ಗೆ ಸಂಪರ್ಕಿಸಿದ್ದ ವಿದ್ಯುತ್ ತಂತಿಯೊಂದು ತಂತಿ ಬೇಲಿ ಮೇಲೆ ಬಿದ್ದಿದ್ದು, ಇದನ್ನು ಗಮನಿಸದ ಬಾಲಕರು ತಂತಿ ದಾಟಲು ಮುಂದಾಗಿದ್ದಾರೆ. ಈ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://www.youtube.com/watch?v=dEXIrYzGlRY