– ತಮಿಳುನಾಡಿನಲ್ಲಿ ಫಸ್ಟ್ ಶೋ, ಮಧ್ಯಾಹ್ನ ಶೋಗಳು ರದ್ದು, ಸಂಜೆ ರಿಲೀಸ್ ಸಾಧ್ಯತೆ
ತಮಿಳುನಾಡು ಸಿಎಂ ವಿಜಯ್ ವಿಶೇಷ ಅನುಮತಿಯಿದ್ದರೂ ಕೊನೆ ಕ್ಷಣದಲ್ಲಿ ತ್ರಿಶಾ, ಸೂಯ ಅಭಿನಯದ ‘ಕರುಪ್ಪ್’ (Karuppu) ಫಸ್ಟ್ ಶೋಗಳು ರದ್ದಾಗಿವೆ.
ಸೂರ್ಯ ಮತ್ತು ತ್ರಿಶಾ ಅಭಿನಯದ ‘ಕರುಪ್ಪ್’ ಸಿನಿಮಾಗೆ ತಮಿಳುನಾಡಿನಲ್ಲಿ (Tamilnadu) ಬೆಳಗಿನ ಶೋಗೆ ವಿಶೇಷ ಅನುಮತಿ ನೀಡಲಾಗಿತ್ತು. ಆದರೆ ಏಕಾಏಕಿ ಕೊನೆಕ್ಷಣದಲ್ಲಿ ಬೆಳಗಿನ ಜಾವದ ಶೋಗಳು ರದ್ದಾಗಿವೆ. ಇದನ್ನೂ ಓದಿ: ಸಿಎಂ ಆದ ಬೆನ್ನಲ್ಲೇ ನಟಿ ತ್ರಿಶಾ ಸಿನೆಮಾಗೆ ವಿಜಯ್ ಬಿಗ್ ಗಿಫ್ಟ್..!
Bro, this is completely a producers’ side issue, so the final call depends on them. We are also eagerly waiting along with all the fans and sincerely hoping things get sorted out quickly. Let’s stay positive and hope the evening shows happen smoothly 🤞#Karuppu @prabhu_sr… https://t.co/aJfaf9w1Zt
— Vishnu Kamal (@kamala_cinemas) May 14, 2026
ಈ ಕುರಿತು ಬುಧವಾರ (ಮೇ 13) ರಾತ್ರಿ ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಸಂಸ್ಥೆಯ ಸಹ-ಮಾಲೀಕ ಹಾಗೂ ನಿರ್ಮಾಪಕ ಎಸ್.ಆರ್.ಪ್ರಭು ಅವರು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅನಿವಾರ್ಯ ಕಾರಣಗಳಿಂದಾಗಿ 9 ಗಂಟೆಯ ಶೋಗಳನ್ನು ರದ್ದುಗೊಳಿಸಲಾಗಿದೆ ಎಂದು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಜೊತೆಗೆ ವಿಷ್ಣು ಕಮಲ್ ಅವರು, ನಿರ್ಮಾಪಕರ ಕಡೆಯಿಂದ ಉಂಟಾದ ಹಣಕಾಸಿನ ತೊಂದರೆಗಳಿಂದಾಗಿ ಬೆಳಿಗ್ಗೆ 9:00 ಮತ್ತು 9:30ರ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ. ಟಿಕೆಟ್ ಕಾಯ್ದಿರಿಸಿದವರಿಗೆ ಹಣ ಮರುಪಾವತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಮಧ್ಯಾಹ್ನದ ಶೋಗಳೂ ಸಹ ರದ್ದಾಗಿದ್ದು, ಸಿನಿಮಾ ಸಂಜೆಯಿಂದಷ್ಟೇ ಪ್ರದರ್ಶನಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
Just received a call from the distributor side @SakthiFilmFctry informing us that #Karuppu release is now expected only from this evening. Hence, the noon & matinee shows will be cancelled and refunds will be initiated shortly.
This is truly heartbreaking for everyone who had…
— Vishnu Kamal (@kamala_cinemas) May 14, 2026
‘ಕರುಪ್ಪ್’ ನಿರ್ದೇಶಕ ಆರ್.ಜೆ. ಬಾಲಾಜಿ ಪ್ರತಿಕ್ರಿಯಿಸಿ, ನಿರ್ಮಾಪಕರು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ. ಕಳೆದ 32 ತಿಂಗಳುಗಳಿಂದ ಈ ಚಿತ್ರವು ಹಲವು ಅಡೆತಡೆಗಳನ್ನು ಎದುರಿಸಿದೆ. ಈ ಸಮಸ್ಯೆಯಿಂದಲೂ ಆದಷ್ಟು ಬೇಗ ದೇವರು ನಮ್ಮನ್ನು ಪಾರು ಮಾಡುತ್ತಾನೆ ಎಂದು ಬರೆದುಕೊಂಡಿದ್ದಾರೆ.
Due to financial issues from the producers’ side, the 9:00 AM (Screen 1) and 9:30 AM (Screen 2) shows of #Karuppu have been cancelled. Refunds for all bookings were initiated at midnight itself and will be processed shortly.
We are currently awaiting clarity regarding the 12:00…
— Vishnu Kamal (@kamala_cinemas) May 14, 2026
ಪತ್ನಿ ಸಂಗೀತಾ ಡೈವೋರ್ಸ್ ಪ್ರಕರಣ ಕೋರ್ಟ್‌ನಲ್ಲಿರುವಾಗಲೇ ನಟಿ ತ್ರಿಶಾ ಮತ್ತು ವಿಜಯ್ ಮದುವೆ ಸಮಾರಂಭವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ವಿಜಯ್ ಗೆಲುವಿನ ಬಳಿಕ ವಿಜಯ್ ನಿವಾಸಕ್ಕೆ ಆಗಮಿಸಿ ಶುಭ ಕೋರಿದ್ದರು. ಅಲ್ಲದೇ ವಿಜಯ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಅಮ್ಮನ ಜೊತೆ ಆಗಮಿಸಿದ್ದ ತ್ರಿಶಾ ವೀಡಿಯೋಗಳುವೈರಲ್ ಆಗಿತ್ತು
ಸಿನಿಮಾಗೆ ಮೊದಲ ದಿನವೇ ಸುಮಾರು 7.2 ಕೋಟಿ ರೂ. ಮುಂಗಡ ಬುಕ್ಕಿಂಗ್ ಆಗಿತ್ತು ಎನ್ನಲಾಗಿದೆ.ಇದನ್ನೂ ಓದಿ: ಕೆಜಿಎಫ್ ನಟಿ ಮೌನಿ ರಾಯ್ ದಾಂಪತ್ಯದಲ್ಲಿ ಬಿರುಕು – ಪತಿಯ ವಿರುದ್ಧ ಆರ್ಥಿಕ ವಂಚನೆ ಆರೋಪ?

