– ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ಬಿಬಿಎಲ್
– ಮೊದಲ ಬಾರಿಗೆ ಭಾರತದಲ್ಲಿ ವಿದೇಶಿ ಪ್ರೀಮಿಯರ್ ಲೀಗ್
ಮೆಲ್ಬೋರ್ನ್: ಭಾರತ (India) ಮತ್ತು ಆಸ್ಟ್ರೇಲಿಯಾ(Australia) ನಡುವಿನ ಕ್ರಿಕೆಟ್ ಮತ್ತು ರಾಜತಾಂತ್ರಿಕ ಬಾಂಧವ್ಯದಲ್ಲಿ ಮತ್ತೊಂದು ಐತಿಹಾಸಿಕ ಅಧ್ಯಾಯ ಬರೆಯಲಾಗಿದೆ. ಆಸ್ಟ್ರೇಲಿಯಾದ ಅತ್ಯಂತ ಜನಪ್ರಿಯ ಟಿ20 ಕ್ರಿಕೆಟ್ ಟೂರ್ನಿ ಬಿಗ್ ಬ್ಯಾಷ್ ಲೀಗ್ (BBL) ಇತಿಹಾಸದಲ್ಲೇ ಮೊದಲ ಬಾರಿಗೆ ತನ್ನ ಗಡಿ ದಾಟುತ್ತಿದ್ದು, 2026-27ರ ಋತುವಿನ ಭವ್ಯ ಉದ್ಘಾಟನಾ ಪಂದ್ಯಕ್ಕೆ ಭಾರತದ ಚೆನ್ನೈ (Chennai) ಆತಿಥ್ಯ ವಹಿಸಲಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಮೂರು ದಿನಗಳ ಆಸ್ಟ್ರೇಲಿಯಾ ಭೇಟಿಯ ಕೊನೆಯ ದಿನದಂದು ಆಸೀಸ್ ಪ್ರಧಾನಿ ಆಂಥೋನಿ ಅಲ್ಬನೀಸ್(Anthony Albanese) ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಈ ವೇಳೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಲ್ಬನೀಸ್, ಬರುವ ಡಿಸೆಂಬರ್‌ನಲ್ಲಿ ಬಿಗ್ ಬ್ಯಾಷ್ ಲೀಗ್‌ನ ಉದ್ಘಾಟನಾ ಪಂದ್ಯ ಭಾರತದ ಚೆನ್ನೈನಲ್ಲಿ ನಡೆಯಲಿದೆ. ಇದು ಎರಡೂ ದೇಶಗಳ ನಡುವೆ ವಿಸ್ತರಿಸುತ್ತಿರುವ ಕ್ರೀಡಾ ಸಂಬಂಧದ ಸಂಕೇತವಾಗಿದೆ ಎಂದು ಹೆಮ್ಮೆಯಿಂದ ಪ್ರಕಟಿಸಿದರು.
ವಿಶ್ವದ ಪ್ರಮುಖ ಮತ್ತು ಅತ್ಯಂತ ಯಶಸ್ವಿ ಫ್ರಾಂಚೈಸಿ ಟಿ20 ಕ್ರಿಕೆಟ್ ಸ್ಪರ್ಧೆಗಳಲ್ಲಿ ಒಂದಾದ ಬಿಬಿಎಲ್, ಆಸ್ಟ್ರೇಲಿಯಾದ ಹೊರಗೆ ಅಧಿಕೃತ ಪಂದ್ಯವನ್ನು ಆಯೋಜಿಸುತ್ತಿರುವುದು ಇದೇ ಮೊದಲು. ಈ ಹಿಂದೆ ಭಾರತದ ಐಪಿಎಲ್ (IPL) ಪಂದ್ಯಗಳು ಯುಎಇ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆಗೊಂಡಿದ್ದವು. ಆದರೆ, ವಿದೇಶಿ ಪ್ರೀಮಿಯರ್ ಲೀಗ್‌ವೊಂದು ಭಾರತದ ಮಣ್ಣಿನಲ್ಲಿ ಅಧಿಕೃತವಾಗಿ ಪಂದ್ಯವನ್ನು ಆಡುತ್ತಿರುವುದು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಮೊದಲ ಘಟನೆಯಾಗಿದೆ.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ (MCG) ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಎಂಸಿಜಿ ಮೈದಾನಕ್ಕೆ ಕಾಲಿಡುವುದು ಯಾವುದೇ ಒಬ್ಬ ಭಾರತೀಯನಲ್ಲಿ ಏಕಕಾಲದಲ್ಲಿ ಎರಡು ಭಾವನೆಗಳನ್ನು ಹುಟ್ಟುಹಾಕುತ್ತದೆ. ಮೊದಲನೆಯದಾಗಿ, ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದ ರೋಮಾಂಚನವಾದರೆ; ಎರಡನೆಯದಾಗಿ, ನಮ್ಮ ಎರಡೂ ರಾಷ್ಟ್ರಗಳಲ್ಲಿ ಕ್ರಿಕೆಟ್ ಕೇವಲ ಕ್ರೀಡೆಯಲ್ಲ, ಬದಲಾಗಿ ನಮ್ಮನ್ನು ಬೆಸೆಯುವ ಹಂಚಿಕೆಯ ಉತ್ಸಾಹ ಮತ್ತು ಸಂಸ್ಕೃತಿಯಾಗಿದೆ ಎಂಬ ಅರಿವು ಮೂಡಿಸುತ್ತದೆ ಎಂದು ಭಾವನಾತ್ಮಕವಾಗಿ ನುಡಿದರು. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಹೀನಾಯ ಸೋತು 3 ಕೆಟ್ಟ ಸಾಧನೆ ಬರೆದ ಭಾರತ
Wonderful to visit the Melbourne Cricket Ground with PM Albanese. The passion for sport continues to bring the people of India and Australia closer.@AlboMP https://t.co/4agouUbx69
— Narendra Modi (@narendramodi) July 10, 2026
ಭಾರತದತ್ತ ಚಿತ್ತ ಹರಿಸಿದ್ದು ಏಕೆ?
ಪ್ರಸಕ್ತ ವರ್ಷ ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ಟಿ0 ವಿಶ್ವಕಪ್ (T20 World Cup 2026) ಟೂರ್ನಿ ನಡೆದಿತ್ತು. ಭಾರತದ ಮೈದಾನಗಳಲ್ಲಿ ನಡೆಯುತ್ತಿರುವ ಜಿಂಬಾಬ್ವೆ, ಕೆನಡಾ, ಯುಎಇ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ತಂಡಗಳ ಪಂದ್ಯ ವೀಕ್ಷಣೆಗೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಸೇರಿದ್ದರು. ಹೀಗಾಗಿ ಆಸ್ಟ್ರೇಲಿಯಾ ಭಾರತದಲ್ಲಿ ಬಿಬಿಎಲ್ ಉದ್ಘಾಟನೆ ನಡೆಸಲು ಮುಂದಾಗಿದೆ.
ಈಗಾಗಲೇ ಆಸ್ಟ್ರೇಲಿಯಾದ ರಾಷ್ಟ್ರೀಯ ರಗ್ಬಿ ಲೀಗ್ (NRL) ಲಾಸ್ ವೇಗಾಸ್‌ನಲ್ಲಿ ನಡೆಯುತ್ತಿದೆ. 5 ವರ್ಷಗಳ ಕಾರ್ಯತಂತ್ರದ ಭಾಗವಾಗಿ 2028ರ ವರೆಗೆ ಪಂದ್ಯಗಳನ್ನ ಆಯೋಜಿಸುವ ಹಕ್ಕು ಪಡೆದುಕೊಂಡಿದೆ. ಇದು ಕ್ರೀಡಾ ಬೆಟ್ಟಿಂಗ್ ಮಾರುಕಟ್ಟೆ ಪ್ರವೇಶಿಸುವ ಜೊತೆಗೆ ಭವಿಷ್ಯದ ಅಂತಾರಾಷ್ಟ್ರೀಯ ಪ್ರಸಾರದ ಹಕ್ಕುಗಳನ್ನು ಪಡೆಯಲು ಅನುಕೂಲವಾಗಿದೆ. ಅದೇ ರೀತಿ ಆರಂಭದಲ್ಲಿ ದೇಶಿಯ ಪ್ರೇಕ್ಷಕರನ್ನೊಳಗೊಂಡು ಟೂರ್ನಿ ಆರಂಭಿಸಿದ ಆಸ್ಟ್ರೇಲಿಯಾ ಬಳಿಕ ಐಪಿಎಲ್ ಮಾದರಿಯಲ್ಲೇ ವಿದೇಶಿ ಆಟಗಾರರು ಪಾಲ್ಗೊಳ್ಳಲು ವಿಸ್ತರಿಸಿತು. ಇದೀಗ ದಕ್ಷಿಣ ಏಷ್ಯಾದ ಪ್ರೇಕ್ಷಕರನ್ನ ಸೆಳೆಯಲು ಭಾರತದಲ್ಲಿ ಬಿಬಿಎಲ್ ಆಯೋಜನೆಗೆ ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ: ಭಾರತದಲ್ಲಿ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ – ಪಾಕ್ ಆಟಗಾರರ ಕಥೆ ಏನು?
Sport is a key pillar of the India-Australia partnership, bringing our people closer through shared passion and mutual respect.
Delighted to visit the iconic Melbourne Cricket Ground (MCG) with PM Albanese.
More sporting exchanges, youth engagement and collaboration can… pic.twitter.com/o90MSPIswm
— Narendra Modi (@narendramodi) July 10, 2026
ಏನಿದು ಬಿಗ್ ಬ್ಯಾಷ್ ಲೀಗ್?
ಇಂಡಿಯನ್ ಪ್ರೀಮಿಯರ್ ಲೀಗ್‌ನಂತೆ ಬಿಗ್ ಬ್ಯಾಷ್ ಲೀಗ್ (BBL) ಕೂಡ ಆಸ್ಟ್ರೇಲಿಯಾದ ಪ್ರಮುಖ ವೃತ್ತಿಪರ ಟಿ20 (T20) ಕ್ರಿಕೆಟ್ ಟೂರ್ನಿಯಾಗಿದೆ. 2011 ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಸ್ಥಾಪಿತವಾದ ಈ ಲೀಗ್, ಪ್ರತಿವರ್ಷ ಡಿಸೆಂಬರ್-ಫೆಬ್ರವರಿ ನಡುವೆ ನಡೆಯುತ್ತದೆ. ಎಂಟು ಫ್ರಾಂಚೈಸಿಗಳು ಇದರಲ್ಲಿ ಭಾಗವಹಿಸುತ್ತವೆ. ಇದು ವಿಶ್ವದ ಜನಪ್ರಿಯ ಟಿ20 ಲೀಗ್‌ಗಳಲ್ಲಿ ಒಂದಾಗಿದೆ. ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಮನರಂಜನೆಗೆ ಹೆಸರುವಾಸಿಯಾದ ಟೂರ್ನಿಯಾಗಿದೆ.
ಬಿಬಿಎಲ್‌ನ ಫ್ರ್ಯಾಂಚೈಸಿಗಳು ಯಾವುದು?
ಮೆಲ್ಬೋರ್ನ್ ಸ್ಟಾರ್ಸ್, ಮೆಲ್ಬೋರ್ನ್ ರೆನೆಗೇಡ್ಸ್, ಸಿಡ್ನಿ ಸಿಕ್ಸರ್ಸ್, ಸಿಡ್ನಿ ಥಂಡರ್, ಪರ್ತ್ ಸ್ಕಾರ್ಚರ್ಸ್, ಅಡಿಲೇಡ್ ಸ್ಟ್ರೈಕರ್ಸ್, ಬ್ರಿಸ್ಬೇನ್ ಹೀಟ್ ಮತ್ತು ಹೋಬರ್ಟ್ ಹರಿಕೇನ್ಸ್.
