ಗದಗ, ಹಾಸನ: ಹವಾಮಾನ ಇಲಾಖೆ ಮುನ್ಸೂಚನೆ ನೀಡಿದಂತೆ ರಾಜ್ಯದ (Karnataka) ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ.
ಗದಗ (Gadag) ಬೆಟಗೇರಿಯ ಕೆಲವೆಡೆ ಮಳೆಯಿಂದ (Heavy Rain) ಅವಾಂತರವಾಗಿದ್ದು ಗಾಳಿಗೆ ಅಂಗಡಿಗಳ ಬೋರ್ಡ್ ಹಾರಿ ಹೋಗಿದೆ.
ಮುಳಗುಂದ ನಾಕಾ ಬಳಿ ಮಳೆ ಗಾಳಿ ರಭಸಕ್ಕೆ ಮರ ಧರೆಗೆ ಬಿದ್ದಿದೆ. ಅರ್ಧಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಕೆಲವೆಡೆ ಅನೇಕ ಅವಾಂತರ ಸೃಷ್ಟಿಯಾಗಿದೆ. ಇದನ್ನೂ ಓದಿ: 6,000 ಮೆಟ್ರಿಕ್ ಟನ್ ಕಚ್ಚಾ ಡಾಂಬರ್ ತುಂಬಿದ ಹಡಗು ಯುಎಇ ಯಿಂದ ಕಾರವಾರಕ್ಕೆ ಆಗಮನ
ಹಾಸನ (Hassana) ನಗರ ಸೇರಿ ಹಲವೆಡೆ ಸಿಡಿಲು, ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಬಿರುಗಾಳಿಯ ರಭಸಕ್ಕೆ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ಹಾಸನ ನಗರದ ಗೌರಿಕೊಪ್ಪಲು, ವಿದ್ಯಾನಗರದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳ ಮೇಲೆ ಮರಗಳು ಬಿದ್ದು ಜಖಂಗೊಂಡಿವೆ.

