ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯ ಸರ್ಕಾರವೇ ಇಲ್ಲ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ (Araga Jnanendra) ಸರ್ಕಾರದ (Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿಎಂ-ಡಿಸಿಎಂ ಕುರ್ಚಿ ಕಿತ್ತಾಟ ದೆಹಲಿಗೆ ಶಿಫ್ಟ್ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದಲ್ಲಿ (Karnataka) ರಾಜ್ಯ ಸರ್ಕಾರ ಇಲ್ಲ. ನಿನ್ನೆಯಿಂದ ದೆಹಲಿಗೆ ಕರ್ನಾಟಕ ಸರ್ಕಾರ ಸ್ಥಳಾಂತರ ಆಗಿದೆ. ಕರ್ನಾಟಕ ಸರ್ಕಾರ ದೆಹಲಿಯಿಂದ ಕಾರ್ಯ ನಿರ್ವಹಿಸುವ ದುಸ್ಥಿತಿಗೆ ಇಳಿದಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಡಿಕೆಶಿ ಹೇಳಿಕೆಗೆ ವಿರೋಧ – ಮೋದಿಗೆ ಪತ್ರ ಬರೆದು ಮೇಕೆದಾಟು DPR ತಿರಸ್ಕರಿಸುವಂತೆ ವಿಜಯ್ ಒತ್ತಾಯ
ಅಧಿಕಾರಕ್ಕೆ ಬಂದು ಮೂರು ವರ್ಷ ಆಗಿದೆ. ಅಧಿಕಾರದ ಹಪಹಪಿಯಲ್ಲಿ ಕಚ್ಚಾಡುತ್ತಿದ್ದಾರೆ. ಯಾರು ಸಿಎಂ ಆಗಬೇಕು, ಯಾವಾಗ ಆಗಬೇಕು ಅಂತ ಚರ್ಚೆ ನಡೆಯುತ್ತಿದೆ. ಜನರಿಗೆ ತೆರಿಗೆ ಹೊರೆ ಹಾಕಿ ಜನರನ್ನ ಸುಲಿಗೆ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: 80% ಮಳೆ ಭೀತಿ: ಆರ್‌ಸಿಬಿ vs ಜಿಟಿ ಪಂದ್ಯ ರದ್ದಾದ್ರೆ ಯಾರಿಗೆ ಸಂಕಷ್ಟ?
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮಣ್ಣು ಪಾಲು ಆಗಿದೆ. ಪೊಲೀಸರನ್ನ ಹೊಡೆದವರ ಕೇಸ್ ವಿತ್ ಡ್ರಾ ಮಾಡಿದ್ದಾರೆ. ಸ್ಪೀಕರ್ ಲೆಟರ್ ಕೊಟ್ಟರು ಅಂತ ಕೇಸ್ ವಾಪಸ್ ಪಡೆದಿದ್ದಾರೆ. ನಾನೇ ಅಂದು ಸಚಿವ ಆಗಿದ್ದಾಗ ಕೇಸ್ ಹಾಕಿಸಿದ್ದೆ. ಅಂತಹವರ ಕೇಸ್ ವಾಪಸ್ ಪಡೆದಿದ್ದಾರೆ. ಇದೊಂದು ದುರಂತ ಸನ್ನಿವೇಶ. ಮುಸ್ಲಿಮರ ತುಷ್ಟೀಕರಣ ಮಾಡುವ ಕೆಲಸ ಸದಾ ಮಾಡುತ್ತಿದ್ದಾರೆ. ಮೊನ್ನೆ ಭಟ್ಕಳದಲ್ಲಿ ಇದರ ಪರಿಣಾಮ ಮತ್ತೆ ನೋಡಿದ್ದೇವೆ. ಪುನಃ ಪೊಲೀಸರ ಮೇಲೆ ಹಲ್ಲೆ ಮಾಡುವ ಕೆಲಸ ಆಗಿದೆ ಎಂದು ಗುಡುಗಿದರು. ಇದನ್ನೂ ಓದಿ: ಬೆಂಗಳೂರು – ಚೆನ್ನೈ ಎಕ್ಸ್‌ಪ್ರೆಸ್ ವೇಯಲ್ಲಿ ಡಿವೈಡರ್‌ಗೆ ಇನ್ನೋವಾ ಕಾರು ಡಿಕ್ಕಿ – ಬಾಲಕ ಸಾವು
ಈ ಸರ್ಕಾರ ಇರೋ ಒಂದೊಂದು ದಿನವೂ ಕರ್ನಾಟಕದ ಜನರಿಗೆ ಹಿಂಸೆ ಮತ್ತು ತೊಂದರೆ. ಸಿಎಂ ಕುರ್ಚಿಗಾಗಿ ಕಿತ್ತಾಟ ಆಗುತ್ತಿದೆ. ಯಾರಿಗಾಗಿ, ಯಾವತ್ತು ಅಂತ ಕಿತ್ತಾಟ ಆಗುತ್ತಿದೆ. ಎಲ್ಲರೂ ಡೆಲ್ಲಿಗೆ ಹೋಗಿದ್ದಾರೆ. ಮಂತ್ರಿಗಳು ಯಾರು ಇಲ್ಲ. ಅಧಿಕಾರಿಗಳು ಯಾರು ಕೆಲಸ ಮಾಡುತ್ತಿಲ್ಲ. ಇದೊಂದು ದುರಂತದ ಸನ್ನಿವೇಶ. ಈ ಕಾಂಗ್ರೆಸ್ ಪಕ್ಷ ತೊಲಗಬೇಕು. ಒಳ್ಳೆಯ ಆಡಳಿತ ಬರಬೇಕು ಅಂತ ಜನ ನಿರೀಕ್ಷೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಂಪಿ ಆನೆ ಲಕ್ಷ್ಮಿ ಸ್ಥಳಾಂತರಕ್ಕೆ ಭಾರಿ ವಿರೋಧ – ಮಾವುತನ ಕುಟುಂಬದ ಕಣ್ಣೀರು, ಸ್ಥಳೀಯರಿಂದ ಪ್ರತಿಭಟನೆ!
