ಬೆಂಗಳೂರು: ಆಗಸ್ಟ್ 13ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ (Karnataka Bandh) ಆಚರಣೆ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳ(Kannada Organisation) ನಡುವೆ ತೀವ್ರ ಭಿನ್ನಾಭಿಪ್ರಾಯ ಹಾಗೂ ದ್ವಂದ್ವ ನಿಲುವು ವ್ಯಕ್ತವಾಗಿದೆ.
ಬಂದ್ ನಡೆಸಲೇಬೇಕೆಂದು ವಾಟಾಳ್ ನಾಗರಾಜ್ (Vatal Nagaraj) ಪಟ್ಟು ಹಿಡಿದಿದ್ದರೆ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಪ್ರಮುಖ ಸಂಘಟನೆಗಳು ಹಿಂದೆ ಸರಿದಿರುವುದರಿಂದ ಬಂದ್ ಯಶಸ್ಸಿನ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.
ಈಗ ಬಂದ್ ಯಾಕೆ?
ತಮಿಳುನಾಡು (Tamil Nadu) ಕ್ಯಾತೆಗೆ ಈಗಾಗಲೇ 10 ಟಿಎಂಸಿಗೂ ಹೆಚ್ಚು ನೀರು ಹರಿಸಲಾಗಿದ್ದು, ಕೇಳಿದ್ದಕ್ಕಿಂತ ಹೆಚ್ಚಿನ ನೀರು ಹರಿದುಹೋಗಿದೆ. ಅಲ್ಲದೆ ರಾಜ್ಯದಲ್ಲಿಯೂ ಉತ್ತಮ ಮಳೆಯಾಗಿದೆ.
ನೀರು ಹರಿದು ಹೋದ ಮೇಲೆ ಈಗ ಬಂದ್ ಮಾಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಇದು ಸಾರ್ವಜನಿಕರಿಗೆ ಅನಗತ್ಯ ತೊಂದರೆ ಉಂಟುಮಾಡುತ್ತದೆ” ಎನ್ನುವುದು ಬಂದ್ ವಿರೋಧಿಸುತ್ತಿರುವ ಸಂಘಟನೆಗಳ ವಾದ. ಇದನ್ನೂ ಓದಿ: ಕರ್ನಾಟಕದಿಂದ 4.5 TMC ಕಾವೇರಿ ನೀರು ಬಿಡುಗಡೆಗೆ ಆಗ್ರಹ: ಗುರುವಾರ ಸುಪ್ರೀಂನಲ್ಲಿ ತಮಿಳುನಾಡು ಅರ್ಜಿ ವಿಚಾರಣೆ
ಪ್ರವೀಣ್ ಶೆಟ್ಟಿ ಹಾಗೂ ಶಿವರಾಮೇಗೌಡ ಬಣಗಳು ಬಂದ್ ನಿರ್ಧಾರದಿಂದ ಸಂಪೂರ್ಣ ಯು-ಟರ್ನ್ ಹೊಡೆದಿದ್ದು, ಬಂದ್ ವ್ಯರ್ಥ ಎಂಬ ತೀರ್ಮಾನಕ್ಕೆ ಬಂದಿವೆ. ಈ ಗೊಂದಲಗಳ ನಡುವೆ, ಇಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ. ಇದನ್ನೂ ಓದಿ: ಅಕ್ರಮ ಬಾಂಗ್ಲ ವಲಿಸಿಗರೆಂಬ ಶಂಕೆ – KSRTC ಬಸ್ ತಡೆದ ಹಿಂದೂ ಕಾರ್ಯಕರ್ತರು
ಬಂದ್ ಬೆಂಬಲಿಸಿದ್ಯಾರು, ವಿರೋಧಿಸಿದ್ಯಾರು?
ವಾಟಾಳ್ ನಾಗರಾಜ್ (ಕನ್ನಡ ಒಕ್ಕೂಟ) ಬಂದ್ ನಡೆಸಲೇಬೇಕೆಂದು ಬಿಗಿಪಟ್ಟು ಹಿಡಿದಿದ್ದರೆ ಪ್ರವೀಣ್ ಶೆಟ್ಟಿ ಹಾಗೂ ಶಿವರಾಮೇಗೌಡ ಬಣ ಯು-ಟರ್ನ್ ಹೊಡೆದಿದ್ದು ಬಂದ್ ವ್ಯರ್ಥ ಎಂದು ನಿರ್ಧಾರ ಎಂದು ಹೇಳಿವೆ. ಹೋಟೆಲ್ ಸಂಘಟನೆ, ಓಲಾ-ಉಬರ್ ನೈತಿಕ ಬೆಂಬಲ ನೀಡಿವೆ.
ಬಂದ್ ಘೋಷಣೆಯಾದ ಸಮಯದಲ್ಲೇ ಕರವೇ ನಾರಾಯಣಗೌಡ (Narayana Gowda) ಅವರು ಆಗಸ್ಟ್ 13 ರ ಬಂದ್ಗೆ ಬೆಂಬಲ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸುವ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದರು.
ಬಂದ್ ಯಶಸ್ಸು ಅನುಮಾನ?
ದೆಡೆ ವಾಟಾಳ್ ನಾಗರಾಜ್ ಅವರು ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರೆ, ಮತ್ತೊಂದೆಡೆ ಪ್ರಮುಖ ಕನ್ನಡ ರಕ್ಷಣಾ ವೇದಿಕೆಗಳು ಬೆಂಬಲ ಹಿಂತೆಗೆದುಕೊಂಡಿರುವುದು ಬಂದ್ ಹೋರಾಟವನ್ನು ಕ್ಷೀಣಿಸುವಂತೆ ಮಾಡಿದೆ. ಪ್ರಮುಖ ಸಂಘಟನೆಗಳ ಬೆಂಬಲವಿಲ್ಲದೆ ಆಗಸ್ಟ್ 13ರ ಬಂದ್ ಸಂಪೂರ್ಣ ಯಶಸ್ವಿಯಾಗುವುದು ಕಷ್ಟಸಾಧ್ಯ ಎಂಬ ಮಾತುಗಳು ಕೇಳಿಬರುತ್ತಿವೆ.

