ಬೊಗೋಟಾ: ಪಶ್ಚಿಮ ಕೊಲಂಬಿಯಾದಲ್ಲಿ (Colombia) ಸಂಭವಿಸಿದ 7.4 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ (Earthquake) ಸಾವಿನ ಸಂಖ್ಯೆ 132ಕ್ಕೆ ಏರಿಕೆಯಾಗಿದೆ.
ಈ ಭೂಕಂಪವು ಭಾರೀ ಪ್ರಮಾಣದ ಹಾನಿಯನ್ನುಂಟು ಮಾಡಿದ್ದು, ಇದುವರೆಗೆ 132 ಜನರು ಪ್ರಾಣ ಕಳೆದುಕೊಂಡಿದ್ದು, 570ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪೆರೇರಾ ನಗರದಲ್ಲಿ ತೀವ್ರವಾಗಿ ಹಾನಿಯಾಗಿದ್ದು, ಈ ನಗರವೊಂದಲ್ಲೇ 60 ಜನರು ಸಾವನ್ನಪ್ಪಿದ್ದಾರೆ. ಸದ್ಯ ರಕ್ಷಣಾ ಕಾರ್ಯ ಮುಂದುವರಿದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ – 50 ಮಂದಿ ಸಾವು
Colombia’s civil aviation authority, Aeronáutica Civil, says operations have been suspended at least seven airports in Colombia following the earthquake.
It says damage has been reported at Pereira, Manizales, Quibdó, Armenia, Cartago, and Buenaventura airports, and so… pic.twitter.com/rhKcJUxK84
— Breaking Aviation News & Videos (@aviationbrk) August 10, 2026
ಇನ್ನೂ 1,500ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, ಕೆಲ ಕಟ್ಟಡಗಳು ಕುಸಿದುಬಿದ್ದಿವೆ. ಅಲ್ಲದೇ 18 ಆರೋಗ್ಯ ಕೇಂದ್ರಗಳು ಮತ್ತು 52 ಶಾಲೆಗಳಿಗೂ ಹಾನಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಒಟ್ಟು ಏಳು ವಿಮಾನ ನಿಲ್ದಾಣಗಳಲ್ಲಿ ಹಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಭೂಕಂಪದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೈ ಝುಮ್ ಎನ್ನುವಂತಿದೆ.
COLOMBIA EARTHQUAKE
More scary visuals continue to emerge from Colombia after it was hit by an earthquake of 7.4 magnitude on Richter scale at the depth of 100+km. https://t.co/5Flhe2e4VV pic.twitter.com/Eqciep8shT
— India Strikes YT 🇮🇳 (@IndiaStrikes_) August 10, 2026
ಪರಿಸ್ಥಿತಿಯನ್ನು ಎದುರಿಸಲು ಅಧ್ಯಕ್ಷರು ತುರ್ತು ಸಭೆ ನಡೆಸಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ತಾವೇ ಖುದ್ದಾಗಿ ಮೇಲ್ವಿಚಾರಣೆ ಮಾಡುವುದಾಗಿ ತಿಳಿಸಿದ್ದಾರೆ. ರಾಜಧಾನಿ ಬೊಗೋಟಾದಿಂದ 100 ಜನರ ತಜ್ಞರ ರಕ್ಷಣಾ ತಂಡವನ್ನು ಮತ್ತು ಅಗತ್ಯ ಪರಿಹಾರ ಸಾಮಗ್ರಿಗಳನ್ನು ಸಂತ್ರಸ್ತ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಟರ್ಕಿಯಿಂದ ರಹಸ್ಯ ವಿಮಾನದಲ್ಲಿ ಪ್ರಯಾಣಿಸಿದ್ದ ಟ್ರಂಪ್!
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, ಬೊಗೋಟಾದಿಂದ ಪಶ್ಚಿಮಕ್ಕೆ 400 ಕಿಲೋಮೀಟರ್ ದೂರದಲ್ಲಿರುವ ಸುಮಾರು 4,800 ಜನರಿರುವ ಸ್ಯಾನ್ ಜೋಸ್ ಡೆಲ್ ಪಾಲ್ಮರ್‌ನಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಭೂಕಂಪವು ಭೂಮಿಯ ಮೇಲ್ಮೈಯಿಂದ ಸುಮಾರು 107 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಭೂಕಂಪದ ಕಂಪನಗಳು ನೆರೆಯ ಈಕ್ವೆಡಾರ್‌ಗೂ ಅನುಭವವಾಗಿವೆ.ಇದನ್ನೂ ಓದಿ:ರಷ್ಯಾ ದ ಮೇಲೆ ಉಕ್ರೇನ್ ಭೀಕರ ಡ್ರೋನ್ ದಾಳಿ – ಮಗು ಸೇರಿ 13 ಮಂದಿ ಸಾವು

