- 75 ಮಂದಿಗೆ ಗಾಯ, 465 ಡ್ರೋನ್ ಹೊಡೆದುರುಳಿಸಿದ ರಷ್ಯಾ
ಮಾಸ್ಕೋ: ರಷ್ಯಾದ (Russia) ಮೇಲೆ ಉಕ್ರೇನ್ (Ukraine) ನಡೆಸಿದ ಭೀಕರ ಡ್ರೋನ್ ದಾಳಿಯಲ್ಲಿ ಮಗು ಸೇರಿ 13 ಮಂದಿ ಸಾವನ್ನಪ್ಪಿದ್ದಾರೆ. 75 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮಧ್ಯ ರಷ್ಯಾದ ಪ್ರದೇಶವಾದ ಟಾಟರ್ಸ್ತಾನ್ ಮೇಲೆ ಈ ದಾಳಿ ನಡೆದಿದೆ. ನಾಲ್ಕು ವರ್ಷಗಳ ಹಿಂದೆ ಯುದ್ಧ ಪ್ರಾರಂಭವಾದಾಗಿನಿಂದ ಉಕ್ರೇನ್ ನಡೆಸಿದ ಅತ್ಯಂತ ಭೀಕರ ದಾಳಿಗಳಲ್ಲಿ ಇದು ಒಂದಾಗಿದೆ. ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮುಗಿಲೆತ್ತರಕ್ಕೆ ದಟ್ಟವಾಗಿ ಹೊಗೆ ಏಳುವುದು ಸೆರೆಯಾಗಿದೆ. ಇದನ್ನೂ ಓದಿ: ಯಾವ ಕ್ಷಣದಲ್ಲಾದ್ರೂ ಹಡಗಿಗೆ ಕ್ಷಿಪಣಿ ಅಪ್ಪಳಿಸಬಹುದು – ಕಪ್ಪು ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ 13 ಭಾರತೀಯ ನಾವಿಕರು
ದಾಳಿಯ ಬಗ್ಗೆ ಉಕ್ರೇನ್ ಪ್ರತಿಕ್ರಿಯಿಸಿದ್ದು, ತನ್ನ ಗಡಿಯಿಂದ 1,000 ಕಿಲೋಮೀಟರ್ (620 ಮೈಲುಗಳು) ಕ್ಕಿಂತ ಹೆಚ್ಚು ದೂರದಲ್ಲಿರುವ ಕೈಗಾರಿಕಾ ನಗರ ನಿಜ್ನೆಕಾಮ್ಸ್ಕ್ ನಲ್ಲಿರುವ ತೈಲ ಸಂಸ್ಕರಣಾಗಾರದ ಮೇಲೆ ಡ್ರೋನ್ ದಾಳಿ ನಡೆದಿದೆ. ರಷ್ಯಾದ ಮಿಲಿಟರಿ ಸಾಮರ್ಥ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ತೈಲ ಘಟಕಗಳನ್ನು ನಿಯಂತ್ರಿಸುವ ಟನೆಕೊ ಸಂಸ್ಕರಣಾಗಾರದ ಮೇಲೆ ದಾಳಿ ನಡೆಸಲಾಗಿದೆ ಎಂದು ಉಕ್ರೇನ್‌ನ ಜನರಲ್ ಸ್ಟಾಫ್ ಹೇಳಿದೆ ಎಂದು ವರದಿಯಾಗಿದೆ.
ಈ ವರ್ಷ ಎರಡೂ ಕಡೆಯವರು ದಾಳಿಗಳನ್ನು ಗಮನಾರ್ಹವಾಗಿ ಹೆಚ್ಚಿಸಿದ್ದಾರೆ. ಇದು ನಾಗರಿಕರ ಸಾವುಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವಿಶ್ವಸಂಸ್ಥೆ ಆತಂಕ ಹೊರಹಾಕಿದೆ.
ರಷ್ಯಾದ ತನಿಖಾ ಸಮಿತಿಯು, ಉಕ್ರೇನ್ ದಾಳಿಯಲ್ಲಿ ಸಾವಿಗೀಡಾದವರಲ್ಲಿ ಒಂದು ಮಗುವೂ ಸೇರಿದೆ ಎಂದು ಹೇಳಿದೆ. ಅಲ್ಲದೇ ರಾತ್ರೀ ಇಡೀ 465 ಡ್ರೋನ್ ಹೊಡೆದುರುಳಿಸಿದ ರಷ್ಯಾ ಹೇಳಿಕೊಂಡಿದೆ.
ಸೋಮವಾರ ರಷ್ಯಾ ಕೂಡ ಉಕ್ರೇನ್‌ನ ಮೇಲೆ ಮಾರಕ ದಾಳಿ ನಡೆಸಿದೆ. ಈಶಾನ್ಯ ಖಾರ್ಕಿವ್ ಪ್ರದೇಶದ ಹಳ್ಳಿಯಲ್ಲಿ ರಷ್ಯಾದ ದಾಳಿಯಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಎರಡು ತಿಂಗಳುಗಳಲ್ಲಿ ಅಪಾರ್ಟ್ಮೆಂಟ್ ಕಟ್ಟಡಗಳ ಮೇಲೆ ನಡೆದ ದಾಳಿಯಲ್ಲಿ ಕೈವ್‌ನಲ್ಲಿ ಡಜನ್ಗಟ್ಟಲೆ ಜನ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಹಡಗಿನ ಮೇಲೆ ರಷ್ಯಾ ದಾಳಿ; ಕಾಸರಗೋಡು ಮೂಲದ ವ್ಯಕ್ತಿ ಸೇರಿ ನಾಲ್ವರು ಭಾರತೀಯರ ಸಾವು

