ಕೋಲಾರ: ಜೆಡಿಎಸ್ ಪಕ್ಷ (JDS Party) ಮಾಡಿದ ತಪ್ಪಿನಿಂದ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಅಲ್ಲದೆ ಬಿಜೆಪಿ ಮೇಲೆ ರಾಜ್ಯದ ಜನರಿಗೆ ಸಿಂಪತಿ ಬಂತು ಎಂದು ಶಾಸಕ ಜಮೀರ್ ಅಹಮದ್ ಹೇಳಿದ್ದಾರೆ.
Advertisement
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಗೌನಪಲ್ಲಿಯ ಭಾರತ್ ಜೋಡೋ (Bharat Jodo) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್‍ಗೆ ಮತ ನೀಡಿದರೆ ಬಿಜೆಪಿಗೆ ಕೊಟ್ಟಂತೆ. ಜೆಡಿಎಸ್ ಬಿಜೆಪಿ (BJP) ಯ ಬಿ ಟೀಂ ಆಗಿದೆ. ನಾವು ಜೆಡಿಎಸ್ ಪಕ್ಷದಲ್ಲಿ ಇದ್ದವರು, ದೇವೇಗೌಡರು ಅಧಿಕಾರದಲ್ಲಿದಾಗ ಜೆಡಿಎಸ್ ಪಕ್ಷ ಬೇರೆ ಇತ್ತು. ಆದರೆ ಕುಮಾರಸ್ವಾಮಿ ಬಂದ ಮೇಲೆ ಜೆಡಿಎಸ್ ಬೇರೆಯಾಗಿದೆ ಎಂದರು. ಇದನ್ನೂ ಓದಿ: Union Budget 2023: ಚಿನ್ನ, ಬೆಳ್ಳಿ ಮತ್ತಷ್ಟು ದುಬಾರಿ – ಯಾವುದು ಇಳಿಕೆ? ಯಾವುದು ಏರಿಕೆ?
Advertisement
Advertisement
2006 ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ 20 ತಿಂಗಳು ಅಧಿಕಾರ ಮಾಡಿ ಕುಮಾರಸ್ವಾಮಿ (HD Kumaraswamy), ಬಿಜೆಪಿಗೆ ಅಧಿಕಾರ ಕೊಟ್ಟಿಲ್ಲ. ರಾಜ್ಯದಲ್ಲಿ ಬಿಜೆಪಿ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಿಲ್ಲ. 2018ರಲ್ಲಿ ಜೆಡಿಎಸ್ ಪಕ್ಷಕ್ಕೆ ಕಡಿಮೆ ಸೀಟು ಬಂದರೂ ಕುಮಾರಸ್ವಾಮಿಗೆ ಅಧಿಕಾರ ಕೊಡಲಾಯಿತು. ಆದರೆ ಅವರು ರಾಜ್ಯದ ಅಭಿವೃದ್ಧಿ ಮಾಡುವುದನ್ನು ಬಿಟ್ಟು ಹೊಟೇಲ್‍ನಲ್ಲಿ ಕಾಲ ಕಳೆದರು. ಇದರಿಂದ ಅವರ ಶಾಸಕರು ಮತ್ತು ಸಚಿವರು ಸರ್ಕಾರವನ್ನು ಬೀಳಿಸಿದರು ಎಂದು ಹೇಳಿದರು. ಇದನ್ನೂ ಓದಿ: Union Budget 2023: 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ
Advertisement
ಸಿದ್ದರಾಮಯ್ಯ ಅವರಿಂದ ಸರ್ಕಾರ ಹೋಗಿಲ್ಲ. ಕುಮಾರಸ್ವಾಮಿಯಿಂದ ಸರ್ಕಾರ ಹೋಗಿದೆ. ಜೆಡಿಎಸ್ ಈ ಬಾರಿಯೂ 37 ಸೀಟು ಬರಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವ ಸಿದ್ದರಾಮಯ್ಯ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಆಗಿದೆ. ಶ್ರೀನಿವಾಸಪುರದಲ್ಲಿ ರಮೇಶ್ ಕುಮಾರ್ ಶಕ್ತಿ ಗೊತ್ತಾಯ್ತು. ಇಲ್ಲಿ ಜೆಡಿಎಸ್ ಒಮ್ಮೆ ಕಾಂಗ್ರೆಸ್ ಒಮ್ಮೆ ಗೆಲ್ಲುತ್ತಿದ್ದರು, ಆದರೆ ರಮೇಶ್ ಕುಮಾರ್ 2018ರಲ್ಲಿ ಗೆದ್ದಿದ್ದಾರೆ. 2023 ರಲ್ಲಿ ಗೆಲ್ಲಿಸಿ ಹ್ಯಾಟ್ರಿಕ್ ಗೆಲುವು ಆಗಬೇಕು ಎಂದು ತಿಳಿಸಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k