-ಸತತ 12 ವರ್ಷಗಳ ಸುದೀರ್ಘ ಆಡಳಿತ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಂದು (ಜೂ.10) ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ದೀರ್ಘಕಾಲ ನಿರಂತರ ಅಧಿಕಾರ ನಡೆಸಿದ ಪ್ರಧಾನಿ ಎಂಬ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ (Jawaharlal nehru) ಅವರ 4,398 ದಿನಗಳ ದಾಖಲೆಯನ್ನ ಮುರಿದು 4,399 ದಿನಗಳ ನಿರಂತರ ಸೇವೆಯ ಮೈಲುಗಲ್ಲು ತಲುಪಿದ್ದಾರೆ.
2014ರ ಮೇ 26ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೋದಿ ಅವರು ಇಂದಿಗೆ 4,399 ದಿನಗಳ ನಿರಂತರ ಅಧಿಕಾರಾವಧಿಯನ್ನ ಪೂರೈಸಿದ್ದಾರೆ. ಇದರೊಂದಿಗೆ ಅವರು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನೆಹರೂ ಅವರು 1952ರ ಮೇ 13ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿ, 1964ರ ಮೇ 27ರವರೆಗೆ ಒಟ್ಟು 4,398 ದಿನಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ್ದರು. ಈ ದಾಖಲೆಯು ಕಳೆದ 64 ವರ್ಷಗಳಿಂದಲೂ ಅಚ್ಚಳಿಯದೇ ಉಳಿದಿತ್ತು. ಇದನ್ನೂ ಓದಿ: ಸುದೀರ್ಘ ಅವಧಿ ಪ್ರಧಾನಿ; ಮೋದಿ ಹೊಸ ದಾಖಲೆ
हमारी सरकार के बीते 12 वर्ष विश्वास, विकास और जनकल्याण को समर्पित रहे हैं। 140 करोड़ देशवासियों के आशीर्वाद और राष्ट्र प्रथम की भावना से हमने युवाओं, महिलाओं और अपने किसान भाई-बहनों को सशक्त बनाने में कोई कोर-कसर नहीं छोड़ी है। यह हमारे अथक प्रयासों का ही परिणाम है कि… pic.twitter.com/URtsOWF4BT
— Narendra Modi (@narendramodi) June 9, 2026
ಇದಕ್ಕೂ ಮುನ್ನ ಮೋದಿ ಅವರು 2025ರ ಜುಲೈ 25ರಂದು ಮತ್ತೊಂದು ಮೈಲುಗಲ್ಲು ದಾಟಿದ್ದರು. ಆ ದಿನ ಅವರು 4,077 ದಿನಗಳೊಂದಿಗೆ ಮೂರನೇ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರ ದಾಖಲೆಯನ್ನು ಹಿಂದಿಕ್ಕಿದ್ದರು. ಇಂದಿರಾ ಗಾಂಧಿ ಅವರು 1966ರ ಜನವರಿ 24ರಿಂದ 1977ರ ಮಾರ್ಚ್ 24ರವರೆಗೆ ಸುಮಾರು 11 ವರ್ಷ 2 ತಿಂಗಳ ಕಾಲ (4,077 ದಿನ) ನಿರಂತರ ಅಧಿಕಾರ ನಡೆಸಿದ್ದರು.
ಜನಸೇವೆಯಲ್ಲಿ 4399 ದಿನಗಳ ಐತಿಹಾಸಿಕ ದಾಖಲೆ ಮಾಡಿದ ಪ್ರಧಾನಸೇವಕ !
ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರ ದಾಖಲೆಯನ್ನು ಮುರಿದು ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.#12YearsOfSeva… pic.twitter.com/IyayOyDZaA
— BJP Karnataka (@BJP4Karnataka) June 10, 2026
ಇನ್ನೂ ಇಂದು ಮೋದಿ ನೇತೃತ್ವದ ಸರ್ಕಾರಕ್ಕೆ 12 ವರ್ಷ ತುಂಬಿದ ಹಿನ್ನೆಲೆ ಬಿಜೆಪಿ ದೇಶಾದ್ಯಂತ ಸಹೋದರತ್ವ ಕಾರ್ಯಕ್ರಮ ಹಮ್ಮಿಕೊಂಡಿದೆ. ಜೂ.5ರಿಂದ 21ರವರೆಗೂ ಕೇಂದ್ರ ಸರ್ಕಾರದ ಯೋಜನೆಗಳು, ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದು, ಎಲ್ಲಾ ರಾಜ್ಯಗಳು ಹಾಗೂ ಜಿಲ್ಲೆ, ತಾಲೂಕುಗಳಲ್ಲೂ ಸುದ್ದಿಗೋಷ್ಠಿ ನಡೆಸಲು ಕೇಂದ್ರ ಸಚಿವರು, ಬಿಜೆಪಿ ಆಡಳಿತದ ರಾಜ್ಯದ ಸಿಎಂಗಳಿಗೆ ಸೂಚಿಸಲಾಗಿದೆ.ಇದನ್ನೂ ಓದಿ: 12 ವರ್ಷ ಪ್ರಧಾನ ಸೇವಕರಾಗಿ ಮೋದಿ ಸೇವೆ; ರಾಜ್ಯದ ದೇವಸ್ಥಾನಗಳಲ್ಲಿ ನಾಳೆ ವಿಶೇಷ ಪೂಜೆ
बदलाव के 12 साल: वादों से विकास तक! 🇮🇳
अंधेरे से रोशनी, कच्चे मकान से पक्की छत और मीलों के सफर से घर में नल तक—पिछले 12 वर्षों में भारत ने एक नई कहानी लिखी है।
यह केवल योजनाओं का आंकड़ा नहीं, करोड़ों भारतीयों की बदलती हुई मुस्कुराहट है।#12YearsOfSeva pic.twitter.com/EXSBMKpxfB
— BJP (@BJP4India) June 9, 2026
ಪ್ರಧಾನಿ ನರೇಂದ್ರ ಮೋದಿ ಭಾವುಕ ನುಡಿ:
ಈ ಐತಿಹಾಸಿಕ ಮೈಲಿಗಲ್ಲಿನ ಕುರಿತು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, “ಕಳೆದ 12 ವರ್ಷಗಳ ಈ ಸುದೀರ್ಘ ಪಯಣವು ದೇಶದ ಜನರ ನಂಬಿಕೆ, ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಸಮರ್ಪಿತವಾಗಿದೆ. 140 ಕೋಟಿ ಭಾರತೀಯರ ಆಶೀರ್ವಾದದೊಂದಿಗೆ ನಾವು ಯುವಕರು, ಮಹಿಳೆಯರು ಹಾಗೂ ರೈತ ಬಾಂಧವರ ಸಬಲೀಕರಣಕ್ಕಾಗಿ ಶ್ರಮಿಸಿದ್ದೇವೆ. ಮೂಲಸೌಕರ್ಯ ಅಭಿವೃದ್ಧಿಯಿಂದ ಹಿಡಿದು ಡಿಜಿಟಲ್ ಕ್ರಾಂತಿಯವರೆಗೆ ಭಾರತವು ಇಂದು ಜಾಗತಿಕ ಮಟ್ಟದಲ್ಲಿ ಹೊಸ ಗುರುತನ್ನು ಪಡೆದುಕೊಂಡಿದೆ” ಎಂದು ಹೇಳಿದ್ದಾರೆ.
राष्ट्र निर्माण के लिए समर्पण और सेवाभाव हमारी अमूल्य पूंजी रही है। बीते 12 वर्षों में ‘सबका साथ, सबका विकास’ की भावना से प्रेरित निरंतर प्रयासों से ही आज हम एक सशक्त और आत्मनिर्भर भारत की ओर अग्रसर हैं। #12YearsOfSeva
आर्यकर्मणि रज्यन्ते भूतिकर्माणि कुर्वते।
हितं च… pic.twitter.com/wDM9MC4n2Y
— Narendra Modi (@narendramodi) June 9, 2026
ಎನ್‌ಡಿಎ ನಾಯಕರಿಂದ ವಿಶೇಷ ಸನ್ಮಾನ:
ಈ ಮಹತ್ವದ ಸಾಧನೆಯನ್ನು ಸಂಭ್ರಮಿಸಲು ಎನ್‌ಡಿಎ 72 ಪ್ರಮುಖ ನಾಯಕರು ಸಭೆ ಸೇರಲಿದ್ದು, ಮೋದಿ ಅವರ ಆಡಳಿತ ವೈಖರಿ ಮತ್ತು ನಾಯಕತ್ವವನ್ನು ಶ್ಲಾಘಿಸಿ ಜಂಟಿ ನಿರ್ಣಯವನ್ನು ಅಂಗೀಕರಿಸಲಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಅವರಿಗೆ ವಿಶೇಷ ಗೌರವ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ.
ಪ್ರಧಾನಿ ಮೋದಿ ಅವರ ಆಡಳಿತ ಹಾಗೂ ಜಾಗತಿಕ ನಾಯಕತ್ವವನ್ನು ದೇಶದ ಪ್ರಮುಖ ನಾಯಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸಿದ್ದಾರೆ. ಮೋದಿ ಅವರ ಈ ಐತಿಹಾಸಿಕ ಸಾಧನೆಯು ಭಾರತೀಯ ಜನತಾ ಪಕ್ಷದ ಬಲಿಷ್ಠ ನಾಯಕತ್ವ ಹಾಗೂ ದೇಶದಾದ್ಯಂತ ಪಕ್ಷದ ಜನಪ್ರಿಯತೆಯ ವಿಸ್ತರಣೆಯನ್ನು ಸಾರುತ್ತದೆ ಎಂದಿದ್ದಾರೆ.ಇದನ್ನೂ ಓದಿ:ವಿದೇ ಶಿ ಶಿಕ್ಷಣದ ಕನಸು ದುಬಾರಿ – ಕೆನಡಾ, ಅಮೆರಿಕ, ಬ್ರಿಟನ್‌ನಲ್ಲಿ ಹೊಸ ನಿಯಮಗಳು
संकल्प से सिद्धि तक, 12 वर्षों में भारत ने विकास और आत्मनिर्भरता का नया अध्याय लिखा है।
प्रधानमंत्री श्री @narendramodi जी के नेतृत्व में, विकसित भारत @ 2047 की ओर देश दृढ़ता से अग्रसर है।#12YearsOfSeva pic.twitter.com/7lWz9rZSMi
— Nitin Nabin (@NitinNabin) June 9, 2026
ಜಾಗತಿಕ ನಾಯಕರ ಅಭಿನಂದನೆಗಳ ಮಹಾಪೂರ:
ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ: ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಜನರು ಪ್ರಧಾನಿ ಮೋದಿ ಅವರ ನಾಯಕತ್ವದ ಮೇಲೆ ಪದೇ ಪದೇ ಇಟ್ಟಿರುವ ಅಪಾರ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಅಭಿನಂದಿಸಿದ್ದಾರೆ.
Papua New Guinea PM James Marape extends congratulations to PM Modi for longest continuously serving PM of India; Says, “you are respected senior leader of global south” pic.twitter.com/44tW4TxH9i
— Sidhant Sibal (@sidhant) June 9, 2026
ಪಪುವಾ ನ್ಯೂಗಿನಿ ಪ್ರಧಾನಿ ಜೇಮ್ಸ್ ಮರಾಪೆ: ಮೋದಿ ಅವರನ್ನು ಜಾಗತಿಕ ರಾಜಕೀಯದ “ರೋಲ್ ಮಾಡೆಲ್” ಎಂದು ಬಣ್ಣಿಸಿರುವ ಅವರು, ಭಾರತದಲ್ಲಿ ಲಕ್ಷಾಂತರ ಜನರನ್ನು ಬಡತನದ ರೇಖೆಯಿಂದ ಮೇಲೆತ್ತಿದ ಮೋದಿ ಸರ್ಕಾರದ ಕಾರ್ಯವೈಖರಿ ಅಸಾಧಾರಣವಾದದ್ದು ಎಂದು ಪ್ರಶಂಸಿಸಿದ್ದಾರೆ.
मोदी सरकार के 12 सालों में ग़रीबी घटाने की Campaign की Reality ⤵️
पहले ग़रीब से मनरेगा के तहत काम का अधिकार छीना, अब रोटी का निवाला भी छीन रही है !
2016: मोदी जी ने दावा किया था कि उज्जवला योजना के तहत महिलाओं को लकड़ी के चूल्हे के धुएं से मुक्ति मिलेगी।
साल में 12 सब्सिडी… pic.twitter.com/bnux0aFf1v
— Mallikarjun Kharge (@kharge) June 9, 2026
ಇತ್ತ, ಕಾಂಗ್ರೆಸ್ ನಾಯಕರು ಮಾತ್ರ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 12 ವರ್ಷಗಳಲ್ಲಿ ಮೋದಿ ಸರ್ಕಾರ ಬಡವರ ಕೆಲಸದ ಹಕ್ಕು ಕಿತ್ತುಕೊಂಡಿದೆ. ಮನ್ರೇಗಾ ಯೋಜನೆಯಡಿ ಕೆಲಸ ಮಾಡುವ ಹಕ್ಕು ಕಸಿದುಕೊಳ್ಳುತ್ತಿದೆ. 12 ವರ್ಷಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪದೇ ಪದೇ ಹೆಚ್ಚಿಸಿದ್ದಾರೆ. ಬಡವರ ಕಣ್ಣೀರಿನ ಮೇಲೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಮೋದಿ ಸರ್ಕಾರ ಅಧಿಕಾರದ ಅಮಲಿನಲ್ಲಿದೆ ಎಂದು ಎಕ್ಸ್ನಲ್ಲಿ ಕಿಡಿಕಾರಿದ್ದಾರೆ. ಈ ಮಧ್ಯೆ, ರಾಜ್ಯದ ವಿವಿಧ ದೇಗುಲಗಳಲ್ಲಿ ಇಂದು ಬಿಜೆಪಿ ವಿಶೇಷ ಪೂಜೆ ನಡೆಸಲಿದೆ.ಇದನ್ನೂ ಓದಿ: ಅಮೆರಿಕ ಹೆಚ್1ಬಿ ವೀಸಾಗೆ ಶುಲ್ಕ; ಟ್ರಂಪ್ ಆದೇಶ ರದ್ದು
