ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ (Nelamangala) ತಾಲೂಕಿನಲ್ಲಿ ಮತ್ತೆ ಚಿರತೆಗಳ ಹಾವಳಿ ಜನರನ್ನ ಬೆಚ್ಚಿಬೀಳಿಸುವಂತೆ ಮಾಡಿದೆ.
ಸಾಕು ಪ್ರಾಣಿಗಳ ಮೇಲೆ ನಿರಂತರ ದಾಳಿಯಿಂದ ಜನರು ಮನೆಯಿಂದ ಹೊರ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ನೆಲಮಂಗಲ ತಾಲೂಕಿನ ಕೆಂಗಲ್ ಗ್ರಾಮದಲ್ಲಿ ಹೊಂಚು ಹಾಕಿ ಕತ್ತಲಲ್ಲಿ ದಾಳಿ ಮಾಡಿದ ಚಿರತೆ ಜನರಲ್ಲಿ ಆತಂಕ ಮೂಡಿಸಿದೆ.
ಇಲ್ಲಿನ ಸೋಂಪುರ ಹೋಬಳಿ ಕೆಂಗಲ್ ಗ್ರಾಮದ ತೀರ್ಥ ಪ್ರಸಾದ್ ತೋಟದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಹಗಲು-ರಾತ್ರಿ ಎನ್ನದೆ ತೋಟದಲ್ಲಿ ಓಡಾಡುವ ಚಿರತೆ ಆತಂಕ ಸೃಷ್ಟಿಸಿದೆ.
ಚಿರತೆ ಓಡಾಟದ ದೃಶ್ಯ ಸಿಸಿಟಿವಿಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನೂ ಬಾತುಕೋಳಿ, ಕುರಿ, ಮೇಕೆಯೇ ಇದರ ಟಾರ್ಗೆಟ್ ಆಗಿದೆ. ಚಿರತೆ ಸೆರೆ ಹಿಡಿಯಲು ಅರಣ್ಯಧಿಕಾರಿಗಳಿಗೆ ಜನರು ಮನವಿ ಮಾಡಿದ್ದಾರೆ.
