* 24 ಭಾರತೀಯ ಸಿಬ್ಬಂದಿ ರಕ್ಷಿಸಿದ ಒಮಾನಿ ಮಿಲಿಟರಿ
ಟೆಹ್ರಾನ್: ಒಮಾನ್ ಕರಾವಳಿಯಲ್ಲಿ ಅಮೆರಿಕ ನೌಕಾಪಡೆಯಿಂದ ದಾಳಿಗೊಳಗಾದ ಹಡಗಿನ ಆಡಿಯೋ ಕ್ಲಿಪ್‌ವೊಂದು ಹೊರಬಿದ್ದಿದೆ. ಆಡಿಯೋದಲ್ಲಿ 24 ಭಾರತೀಯ ಸಿಬ್ಬಂದಿ (Indian Crew), ‘ಹಡಗು ಮುಳುಗುತ್ತಿದೆ.. ದಯವಿಟ್ಟು ನಮಗೆ ಸಹಾಯ ಮಾಡಿ’ ಎಂದು ಅಂಗಲಾಚಿರುವುದು ಕೇಳಿಬಂದಿದೆ. ಟ್ಯಾಂಕರ್ ಎಂಟಿ ಮಾರಿವೆಕ್ಸ್ (MT Marivex) ಮುಳುಗುತ್ತಿದೆ ಎಂದು ಹೇಳಿದ್ದಾರೆ.
ಅಮೆರಿಕ ಕಪ್ಪುಪಟ್ಟಿಗೆ ಸೇರಿಸಿರುವ ಮತ್ತು ನಿರ್ಬಂಧಿತ ಪಲಾವ್ ಧ್ವಜವನ್ನು ಹೊಂದಿದ್ದ ಟ್ಯಾಂಕರ್, ಇರಾನಿನ ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನವನ್ನು ತಪ್ಪಿಸಲು ಪ್ರಯತ್ನಿಸಿತು. ಆದರೆ, ಕ್ಷಿಪಣಿಗೆ ಡಿಕ್ಕಿ ಹೊಡೆದಿದೆ. ಎಲ್ಲಾ 24 ಭಾರತೀಯ ಸಿಬ್ಬಂದಿಯನ್ನು ನಂತರ ಒಮಾನಿ ಮಿಲಿಟರಿ ರಕ್ಷಿಸಿದೆ. ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ; ಇರಾನ್ ಮೇಲೆ ಅಮೆರಿಕ ವೈಮಾನಿಕ ದಾಳಿ
‘ಸರ್, ಇದು ಮೋಟಾರ್ ಟ್ಯಾಂಕರ್ ಮಾರಿವೆಕ್ಸ್… ನಮ್ಮ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹಡಗು ಮುಳುಗುತ್ತಿದೆ’ ಎಂದು ಸಿಬ್ಬಂದಿಯೊಬ್ಬರು ಅಧಿಕಾರಿಗಳಿಗೆ ತುರ್ತು ಕರೆಯಲ್ಲಿ ಹೇಳಿದ್ದರು.

ಯುಎಸ್ ನೌಕಾಪಡೆ ದಾಳಿ ಮಾಡಿದೆ. ನಮ್ಮ ಎಂಜಿನ್ ರೂಮ್ ಮೇಲೆ ಕ್ಷಿಪಣಿ ಇದೆ. ದಯವಿಟ್ಟು ಸಹಾಯ ಮಾಡಿ. ನಾವು ಒಟ್ಟು 24 ಮಂದಿ ಇದ್ದೇವೆ. ಎಲ್ಲರೂ ಭಾರತೀಯರು. ನಮಗೆ ತಕ್ಷಣದ ಸಹಾಯ ಬೇಕು’ ಎಂದು ಸಿಬ್ಬಂದಿ ಕೇಳಿಕೊಂಡಿದ್ದಾರೆ.
ಮಸಿರಾದಲ್ಲಿ ಲಂಗರು ಹಾಕಲಾಗಿರುವ ಎಂಟಿ ಮಾರಿವೆಕ್ಸ್ ಮೇಲೆ ಕ್ಷಿಪಣಿ ದಾಳಿ ನಡೆದಿರುವ ಬಗ್ಗೆ ಮುಂಬೈನಲ್ಲಿರುವ ಭಾರತೀಯ ಕರಾವಳಿ ರಕ್ಷಣಾ ಪಡೆ (MRCC) ಗೆ ಮಧ್ಯಾಹ್ನ 2:20 ರ ಸುಮಾರಿಗೆ (IST) ಮಾಹಿತಿ ಸಿಕ್ಕಿತು. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅದು ತಕ್ಷಣವೇ ಓಮನ್ ಸಾಗರ ಶೋಧ ಮತ್ತು ರಕ್ಷಣಾ ಕೇಂದ್ರ (OMSC) ದೊಂದಿಗೆ ಸಂವಹನ ನಡೆಸಿತು. ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಬಳಿ ಅಮೆರಿಕದ ಅಪಾಚೆ ಹೆಲಿಕಾಪ್ಟರ್ ಪತನ – ಇಬ್ಬರು ಪೈಲಟ್‌ಗಳು ಸೇಫ್
ನಂತರ ಓಮನ್‌ನ ರಾಯಲ್ ಏರ್ ಫೋರ್ಸ್ ಹೆಲಿಕಾಪ್ಟರ್ ಮಧ್ಯಾಹ್ನ 3:25 ರ ಸುಮಾರಿಗೆ ಮಸಿರಾ ದ್ವೀಪದಲ್ಲಿರುವ ವಾಯುನೆಲೆಯಿಂದ ಹೊರಟು 20 ನಿಮಿಷಗಳ ನಂತರ ಮಾರಿಸಿವೆಕ್ಸ್‌ನ ಸ್ಥಳವನ್ನು ತಲುಪಿತು. ನಂತರ ಸಿಬ್ಬಂದಿಯನ್ನು ರಕ್ಷಿಸಿತು. ಹಡಗಿನ ಡೆಕ್ ಮೇಲೆ ಹಾರಾಡುತ್ತಾ ಟ್ಯಾಂಕರ್‌ನಲ್ಲಿದ್ದವರನ್ನು ಸ್ಥಳಾಂತರಿಸುವ ಹೆಲಿಕಾಪ್ಟರ್ ಕಾರ್ಯಪ್ರವೃತ್ತವಾಗಿರುವುದನ್ನು ದೃಶ್ಯಗಳು ತೋರಿಸಿವೆ.
