ತಮಿಳುನಾಡು ಸಿಎಂ ಆಗಿ ದಳಪತಿ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಟಿ ತ್ರಿಶಾ ಕೃಷ್ಣನ್ ಇದೀಗ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, The Love Is Always Louder ಎಂದು ಬರೆದುಕೊಂಡಿದ್ದಾರೆ.
ನಟಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ವಿಜಯ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಧರಿಸಿದ್ದ ಸೀರೆಯಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಜೊತೆಗೆ The Love Is Always Louder ಎಂದು ಬರೆದುಕೊಂಡಿದ್ದಾರೆ. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮಿಂಚಿದ್ದ ತ್ರಿಶಾ ಸಂಭ್ರಮ, ಸಡಗರ ಭಾರೀ ಕುತೂಹಲ ಕ್ರಿಯೇಟ್ ಮಾಡಿತ್ತು. ಇದೀಗ ಹಾಕಿದ ಪೋಸ್ಟ್ ಮತ್ತೆ ಹಲವು ಅರ್ಥಗಳನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ವಿಜಯ್ ಪ್ರಮಾಣವಚನ – ನೀಲಿ ಬಣ್ಣದ ರೇಷ್ಮೆ ಸೀರೆ, ಮಲ್ಲಿಗೆ ಮುಡಿದು ತ್ರಿಷಾ ಮಿಂಚಿಂಗ್!

ಪ್ರಮಾಣ ವಚನ ಸಮಾರಂಭದಲ್ಲಿ ವಿಜಯ್ ಪ್ರಮಾಣ ಸ್ವೀಕರಿಸುವಾಗ ಅಭಿಮಾನಿಗಳ ಚಪ್ಪಾಳೆ, ಶಿಳ್ಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೇ ಅರ್ಥದಲ್ಲಿ ವಿಜಯ್ ಮೇಲೆ ಅಭಿಮಾನಿಗಳಿಟ್ಟಿರುವ ಪ್ರೀತಿಯ ಬಗ್ಗೆ ತ್ರಿಶಾ ಬರೆದುಕೊಂಡು, ಪ್ರೀತಿ ಯಾವಾಗಲೂ ಜೋರಾಗಿ, ಅಬ್ಬರಿಸುತ್ತದೆ ಎಂದಿದ್ದಾರೆ ಎನ್ನಲಾಗಿದೆ.
View this post on Instagram
ಪ್ರಮಾಣ ವಚನ ಕಾರ್ಯಕ್ರಮಕ್ಕೆ ತ್ರಿಷಾ ಅವರು ತಾಯಿ ಉಮಾ ಕೃಷ್ಣನ್ ಅವರೊಂದಿಗೆ ಆಗಮಿಸಿದ್ದರು. ನೀಲಿ ಬಣ್ಣದ ರೇಷ್ಮೆ ಸೀರೆ ಧರಿಸಿ, ಮಲ್ಲಿಗೆ ಮುಡಿದು ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚುತ್ತಿದ್ದ ತ್ರಿಷಾ ಅವರನ್ನು ಕಂಡ ಅಭಿಮಾನಿಗಳು ಹರ್ಷೋದ್ಗಾರ ಮಾಡಿದರು. ಕ್ರೀಡಾಂಗಣಕ್ಕೆ ಪ್ರವೇಶಿಸುತ್ತಿದ್ದಂತೆ ತ್ರಿಷಾ ಅವರು ಅಭಿಮಾನಿಗಳತ್ತ ಕೈಬೀಸಿ ನಗುತ್ತಾ ಸಾಗಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.ಇದನ್ನೂ ಓದಿ: ತಮಿಳುನಾಡಿನಲ್ಲಿ ‘ದಳಪತಿ’ ಯುಗಾರಂಭ – ಸಿಎಂ ಆಗಿ ವಿಜಯ್ ಪ್ರಮಾಣವಚನ

ಈ ಸಂದರ್ಭದಲ್ಲಿ ರಾಜಕೀಯ ವಲಯದಲ್ಲಿ ಒಂದು ಕುತೂಹಲಕಾರಿ ಚರ್ಚೆ ಶುರುವಾಗಿದೆ. ವಿಜಯ್ ಅವರು ಈ ಚುನಾವಣೆಯಲ್ಲಿ ತಿರುಚ್ಛಿ ಮತ್ತು ಪೆರಂಬೂರು ಎಂಬ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ನಿಯಮದಂತೆ ಅವರು ಒಂದು ಕ್ಷೇತ್ರವನ್ನು ಬಿಟ್ಟುಕೊಡಬೇಕಾಗುತ್ತದೆ. ತೆರವಾಗುವ ಆ ಕ್ಷೇತ್ರದಲ್ಲಿ ತ್ರಿಷಾ ಅವರು ಟಿವಿಕೆ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿಗಳು ಹರಡಿವೆ. ತ್ರಿಷಾ ಸ್ಪರ್ಧೆಯ ಬಗ್ಗೆ ಟಿವಿಕೆ ಪಕ್ಷವಾಗಲಿ ಅಥವಾ ಸ್ವತಃ ತ್ರಿಷಾ ಅವರಾಗಲಿ ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.

ಈ ಹಿಂದೆ ಚುನಾವಣಾ ಫಲಿತಾಂಶ ಬಂದ ದಿನ ತ್ರಿಷಾ ಅವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದರು. ಇದು ಕೂಡ ಅವರ ರಾಜಕೀಯ ಪ್ರವೇಶದ ಮುನ್ಸೂಚನೆ ಎಂದು ವಿಶ್ಲೇಷಿಸಲಾಗಿತ್ತು. ವಿಜಯ್ ಅವರ ಸಿನಿ ಪಯಣದ ಯಶಸ್ವಿ ನಟಿಯಾಗಿರುವ ತ್ರಿಷಾ, ಈಗ ಅವರ ರಾಜಕೀಯ ಪಯಣದಲ್ಲೂ ಬೆಂಬಲವಾಗಿ ನಿಂತಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.
ಚೊಚ್ಚಲ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆ 108 ಸ್ಥಾನಗಳನ್ನು ಪಡೆದುಕೊಂಡಿತ್ತು. ಬಳಿಕ ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ವಿಸಿಕೆ ಮತ್ತು ಐಯುಎಂಎಲ್ ಪಕ್ಷಗಳ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸಿ, ಭಾನುವಾರ (ಮೇ 10) ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ವಿಜಯ್ ಸಿಎಂ ಆಗಿ ಗದ್ದುಗೆ ಏರಿದ್ದಾರೆ.ಇದನ್ನೂ ಓದಿ: `ಜನನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್ – ಮತ್ತೊಂದು ಮಾಸ್ ವಿಜಯೋತ್ಸವಕ್ಕೆ ಸಜ್ಜಾದ್ರು ಫ್ಯಾನ್ಸ್

