ಅನುಮಾನಾಸ್ಪದ ರೀತಿಯಲ್ಲಿ ಇಬ್ಬರ ಶವ ಪತ್ತೆ

Advertisements

ರಾಮನಗರ: ಅನುಮಾನಾಸ್ಪದ ರೀತಿಯಲ್ಲಿ ಇಬ್ಬರ ಶವ ಪತ್ತೆಯಾದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

Advertisements

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಬ್ಯಾಲಕೆರೆ ಗ್ರಾಮದ ನಿವಾಸಿ ಮೋಹನ್ (24) ಹಾಗೂ ದಾಸೇಗೌಡನಪಾಳ್ಯ ಗ್ರಾಮದ ಪುಷ್ಪಲತಾ (24) ಮೃತ ದುರ್ದೈವಿಗಳು. ಟ್ರ್ಯಾಕ್ಟರ್‌ ಚಾಲಕನಾಗಿರೋ ಮೋಹನ್‌ಗೆ ಈಗಾಗಲೇ ಮದುವೆಯಾಗಿ ಮಗು ಸಹ ಇದೆ. ಪುಷ್ಪಲತಾ ಅವರು ಕುಣಿಗಲ್ ತಾಲೂಕಿನ ಆಲಗೆರೆ ಗ್ರಾಮದ ಯುವಕನ ಜೊತೆ ವಿವಾಹವಾಗಿದ್ದರು. ಅವರಿಗೂ ಮಗುವಿದೆ. ವಾರದ ಹಿಂದಷ್ಟೇ ಪುಷ್ಪಲತಾ ತಾಯಿ ಮನೆ ದಾಸೇಗೌಡನಪಾಳ್ಯಕ್ಕೆ ಬಂದಿದ್ದರು.

Advertisements

ಪುಷ್ಪಲತಾ ಮತ್ತು ಮೋಹನ್ ಇಬ್ಬರೂ ಪ್ರೀತಿಸುತ್ತಿದ್ದರು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದಿದೆ. ಇವರಿಬ್ಬರ ಶವ ಪತ್ತೆಯಾಗಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ, ಯುವಕನ ಶವದ ಕೆಳಗೆ ಮಲಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಇದೀಗ ತೀವ್ರ ಅನುಮಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ:  ಹಿರಿಯೂರಿನಲ್ಲಿ ಭೀಕರ ಸರಣಿ ಅಪಘಾತ- ನಾಲ್ವರು ಸ್ಥಳದಲ್ಲೇ ಸಾವು

ಪ್ರಕರಣ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದನ್ನೂ ಓದಿ: ಕಳೆದ 70 ವರ್ಷದಿಂದ ಕಾಂಗ್ರೆಸ್ ಕಟ್ಟಿದ್ದನ್ನು ಬಿಜೆಪಿ 7 ವರ್ಷದಲ್ಲಿ ಮಾರುತ್ತಿದೆ: ಪ್ರಿಯಾಂಕಾ ಗಾಂಧಿ

Advertisements

Advertisements
Exit mobile version