ನಟ ಯಶ್ ಅವರ ಸಿನಿ ಪಯಣದ ಬಗ್ಗೆ ತಾಯಿ ಪುಷ್ಪಾ ಅರುಣ್‌ಕುಮಾರ್ (Pushpa Arunkumar) ಆಡಿರುವ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿವೆ.
ʻಟಾಕ್ಸಿಕ್ʼ ಸಿನಿಮಾ ಯಶಸ್ಸಿನ ಕುರಿತು ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿರುವ ಯಶ್ ತಾಯಿ, ನೆಗೆಟಿವ್ ಕಾಮೆಂಟ್ ಮಾಡೋರ ವಿರುದ್ಧ ಕಿಡಿ ಕಾರಿದ್ದಾರೆ. ಜೊತೆಗೆ ಯಶ್ ಇಂದು ದೊಡ್ಡ ಮಟ್ಟಕ್ಕೆ ಬೆಳೆದಿದ್ದರೂ, ಕುಟುಂಬದ ಬಾಂಧವ್ಯ ಮತ್ತು ತಾಯಿಯ ಸ್ಥಾನ ಎಂದಿಗೂ ಬದಲಾಗುವುದಿಲ್ಲ ಎಂಬ ರೀತಿಯಲ್ಲಿ ಅವರು ಭಾವುಕರಾಗಿ ಮಾತನಾಡಿದ್ದಾರೆ.

ʻʻಮಗನನ್ನು ಬಿಟ್ಟು ಸುಮ್ಮನಿರುವುದಲ್ಲ. ಹಗ್ಗ ನಮ್ಮತ್ರ ಇರಬೇಕು. ಹಾಗೇ ಯಶ್‌ನ ಹಗ್ಗ ನಮ್ಮತ್ರ ಇದೆ. ದೇಶ ಆಳೋಕೆ ಬಿಟ್ಟಿದ್ದೀವಿ ಅಂದರೆ ನಮ್ಮ ಪವರ್ ತಿಳಿದುಕೊಳ್ಳಬೇಕು. ಅಂತಹ ಮಗನನ್ನ ಹೆತ್ತು, ಯಾರ ಸಪೋರ್ಟ್ ಇಲ್ಲದೇ ಬೆಳೆಸಿದ್ದೀವಿ ಅಂದರೆ, ಅವನನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕು ಎಂಬುದು ನಮ್ಮ ಕೈಯಲ್ಲೇ ಇದೆ. ಲಗಾಮು ನಾವೇ ಹಿಡಿದಿದ್ದೀವಿ. ಹತ್ತು ಭಾಷೆಯವರು ಬಂದರೂ ಯಶ್‌ನ ಬಗ್ಗಿಸಲು ಆಗಲ್ಲ, ತಪ್ಪು ಮಾಡಿಲ್ಲ ಅಂದ್ರೆ ಯಾರಿಗೆ ಏಕೆ ಬಗ್ಗಬೇಕು?ʼʼ ಎಂದು ಪ್ರಶ್ನಿಸಿದ್ದಾರೆ.
‘ಅಭಿಮಾನಿಗಳು ಸ್ಥಾನ ಕೊಟ್ಟಿದ್ದಾರೆ’
ಮುಂದುವರಿದು.. ಯಶ್ ಅವರಿಗೆ ಅಭಿಮಾನಿಗಳು ನೀಡಿರುವ ಸ್ಥಾನವೇ ಅವರ ದೊಡ್ಡ ಸಂಪಾದನೆ. ಈಗ ಅವನಿಗೆ 40 ವರ್ಷ. ಏನು ಕಳೆದುಕೊಳ್ಳುತ್ತಾನೆ? ಅಭಿಮಾನಿಗಳು ಸ್ಥಾನ ಕೊಟ್ಟಿದ್ದಾರೆ. ಸಂಪಾದನೆ ಮಾಡುತ್ತಾನೆ, ಆ ಖುಷಿ ಇನ್ನೂ ಸಾಕಾಗಲ್ಲ. ʻಹಗ್ಗ ಹದಿನಾರು ಮೊಳ ಇದ್ದರೂ ಕುಣಿಕೆ ನಮ್ಮ ಹತ್ತಿರ ಇದೆʼ. ಬೇಸ್‌ಮೆಂಟ್ ಹಾಕಿಕೊಟ್ಟಿದ್ದೇವೆ. ಅವನು ಬೆಳೆದಿದ್ದಾನೆ ಎಂದು ಯಶ್ ಅವರ ತಾಯಿ ಹೇಳಿದ್ದಾರೆ.
