ಮೊಹಾಲಿ: ಟೀಮ್ ಇಂಡಿಯಾ ಹಾಗೂ ಸನ್ ರೈಸರ್ಸ್ ಹೈದರಾಬಾದ್ (SRH) ತಂಡದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ(Abhishek Sharma) ಮತ್ತೊಮ್ಮೆ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದಾರೆ. ಒಂದೇ ಓವರ್‌ನಲ್ಲಿ 6 ಸಿಕ್ಸ್ ಸಿಡಿಸುವ ಮೂಲಕ ಮೈದಾನದಲ್ಲಿ ರನ್ ಸುನಾಮಿ ಎಬ್ಬಿಸಿದ್ದಾರೆ.
‘ಶೇರ್-ಎ-ಪಂಜಾಬ್’ ಟಿ20 ಲೀಗ್‌ನಲ್ಲಿ ಅಮೃತಸರ ಸೂರ್ಮಾಸ್ (Amritsar Soormas) ತಂಡದ ನಾಯಕನಾಗಿರುವ ಅವರು, ಮೊಹಾಲಿ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 26 ಎಸೆತಗಳಲ್ಲಿ 77 ರನ್ ಸಿಡಿಸಿ ಅಬ್ಬರಿಸಿದ್ದಾರೆ.
ಇನ್ನಿಂಗ್ಸ್‌ನ 5ನೇ ಓವರ್ ಎಸೆದ ಮೊಹಾಲಿ ಕಿಂಗ್ಸ್(Mohali Kings) ತಂಡದ ಬೌಲರ್ ಆಯುಷ್ ಗೋಯಲ್ ಎದುರು ಅಕ್ಷರಶಃ ರುದ್ರತಾಂಡವವಾಡಿದ ಅಭಿಷೇಕ್ 3 ಸಿಕ್ಸ್, 1 ಬೌಂಡರಿ ಹೊಡೆದರು. ಇದನ್ನೂ ಓದಿ: ಥಾಯ್ಲೆಂಡ್ ವಿರುದ್ಧ 94 ರನ್‌ಗಳ ಭರ್ಜರಿ ಜಯ – ಏಷ್ಯಾಕಪ್‌ನಲ್ಲಿ ಭಾರತ ಶುಭಾರಂಭ
ಅಭಿಷೇಕ್ ಶರ್ಮಾ ಹಾಗೂ ಆರಂಭಿಕ ಆಟಗಾರ ಸಹಜ ಧವನ್ ಕೇವಲ 31 ಎಸೆತಗಳಲ್ಲಿ ಮೊದಲ ವಿಕೆಟ್‌ಗೆ 100 ರನ್‌ಗಳ ಜತೆಯಾಟವಾಡಿ ಪವರ್‌ಪ್ಲೇನಲ್ಲೇ ದಾಖಲೆ ಬರೆದರು.
ಅಭಿಷೇಕ್ ನಿರ್ಗಮನದ ಬಳಿಕ ಕ್ರೀಸ್‌ಗಿಳಿದ ನಮನ್ ಧೀರ್ ಕೂಡ ಬಿರುಸಿನ ಬ್ಯಾಟಿಂಗ್ ನಡೆಸಿ ಕೇವಲ 22 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್‌ಗಳೊಂದಿಗೆ 47 ರನ್ ಗಳಿಸಿದರು. ಬ್ಯಾಟರ್‌ಗಳ ಸಂಘಟಿತ ಸಿಡಿಲಬ್ಬರದ ನೆರವಿನಿಂದ ಅಮೃತಸರ ಸೂರ್ಮಾಸ್ ತಂಡ ನಿಗದಿತ 20 ಓವರ್‌ಗಳಲ್ಲಿ 258 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
