– ಶಫಾಲಿ ವರ್ಮಾ 64 ರನ್, ಥಾಯ್ಲೆಂಡ್ 65 ರನ್‌ಗಳಿಗೆ ಆಲೌಟ್
ದುಬೈ: ಶಫಾಲಿ ವರ್ಮಾ ಬಿರುಸಿನ ಅರ್ಧಶತಕ ಮತ್ತು ಬೌಲರ್‌ಗಳ ನೆರವಿನಿಂದ ಥಾಯ್ಲೆಂಡ್(Thailand) ವಿರುದ್ಧ94 ರನ್‌ಗಳ ಜಯ ಸಾಧಿಸಿ ಭಾರತದ(India) ವನಿತೆಯರು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ(Asia Cup) ಶುಭಾರಂಭ ಮಾಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಭಾರತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಥಾಯ್ಲೆಂಡ್ 16 ಓವರ್‌ಗಳಲ್ಲಿ65 ರನ್ ಹೊಡೆದು ಸರ್ವಪತನಗೊಂಡಿತು.
SHAFALI GOES BOOM! 💥
That’s how you make an early statement! 😤
Watch India vs Thailand in the DP World Women’s Asia Cup 2026, LIVE now on Sony Sports Network TV channels & Sony LIV.#SonySportsNetwork #SonyLIV #DPWorldWomensAsiaCup2026 #NotAGentlemansGame pic.twitter.com/XsD6QF2N9s
— Sony Sports Network (@SonySportsNetwk) August 30, 2026
160 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಥಾಯ್ಲೆಂಡ್ ವನಿತೆಯರ ತಂಡ, ಭಾರತದ ಶಿಸ್ತುಬದ್ಧ ಬೌಲಿಂಗ್ ಎದುರು ಆರಂಭದಿಂದಲೇ ತತ್ತರಿಸಿತು. ವಿಕೆಟ್ ಕೀಪರ್-ಬ್ಯಾಟರ್ ನನ್ನಪತ್ ಕೊಂಚರೋಯೆಂಕೈ ಏಕಾಂಗಿ ಹೋರಾಟ ನಡೆಸಿ 41 ರನ್ ಗಳಿಸಿ ಕೊನೆಯವರಾಗಿ ಔಟಾದರು. ಉಳಿದ ಬ್ಯಾಟರ್‌ಗಳು ಒಂದಂಕಿ ಮೊತ್ತಕ್ಕೆ ಪೆವಿಲಿಯನ್ ಸೇರಿದ್ದರಿಂದ ಹೀನಾಯ ಸೋಲುಕೊಂಡಿತು.
First T20I runs. First T20I SIX.💥
Pratika Rawal is off the mark in style! 😎
Watch India vs Thailand in the DP World Women’s Asia Cup 2026, LIVE now on Sony Sports Network TV channels & Sony LIV.#SonySportsNetwork #SonyLIV #DPWorldWomensAsiaCup2026 #NotAGentlemansGame pic.twitter.com/yfKP6tdkZl
— Sony Sports Network (@SonySportsNetwk) August 30, 2026
ಭಾರತದ ಪರ ನಂದಿನಿ ಶರ್ಮಾ ಮತ್ತು ದೀಪ್ತಿ ಶರ್ಮಾ ತಲಾ 3 ವಿಕೆಟ್ ಪಡೆದರೆ ಶ್ರೀ ಚರಣಿ 2, ಕ್ರಾಂತಿ ಗೌಡ್ 1 ವಿಕೆಟ್ ಕಿತ್ತರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ(Shafali Verma ) ಕೇವಲ 36 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಬಿರುಸಿನ 64 ರನ್ ಸಿಡಿಸಿದರು. ಪ್ರತಿಕಾ ರಾವಲ್ 22 ರನ್ ಮತ್ತು ಸ್ಮೃತಿ ಮಂಧಾನ 19 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಕೆಳ ಕ್ರಮಾಂಕದಲ್ಲಿ ಕ್ರಾಂತಿ ಗೌಡ್ ಅಜೇಯ 15 ರನ್ ಗಳಿಸಿದರು.
Deepti Sharma bags two in her opening over! 💥💥
Watch India vs Thailand in the DP World Women’s Asia Cup 2026, LIVE now on Sony Sports Network TV channels & Sony LIV.#SonySportsNetwork #SonyLIV #DPWorldWomensAsiaCup2026 #NotAGentlemansGame pic.twitter.com/bLtPhgeV1b
— Sony Sports Network (@SonySportsNetwk) August 30, 2026
