ಚಿಕ್ಕೋಡಿ: ನೇಪಾಳದ ಹವಾಮಾನ ವೈಪರೀತ್ಯಕ್ಕೆ ಪ್ರವಾಸ ಮೊಟಕುಗೊಳಿಸಿ ನಿಪ್ಪಾಣಿಯ 21 ಪ್ರವಾಸಿಗರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.
LIC ವತಿಯಿಂದ ನಿಪ್ಪಾಣಿಯ ವಿಮಾ ಪ್ರತಿನಿಧಿಗಳು ಹಾಗೂ ಕುಟುಂಬಸ್ಥರು ನೇಪಾಳ ಪ್ರವಾಸ ಕೈಗೊಂಡಿದ್ದರು. ಆ.20 ರಂದು ಪ್ರವಾಸ ಆರಂಭವಾಗಿತ್ತು. ದಿಢೀರ್ ಪ್ರವಾಹ, ಬಿಕ್ಕಟ್ಟಿನ ಹವಾಮಾನದಿಂದ ನೇಪಾಳ ಪ್ರವಾಸ ರದ್ದುಗೊಳಿಸಲಾಗಿದೆ.
ಕಾಶಿ, ಅಯೋಧ್ಯೆ, ಗೋರಖ್‌ಪುರ, ಮುಕ್ತಿನಾಥ ಕ್ಷೇತ್ರಗಳಿಗೆ ಭೇಟಿ ನೀಡಲಾಗಿತ್ತು. ಲುಂಬಿನಿಯಿಂದ ಕಠ್ಮಂಡುವಿಗೆ ತೆರಳುವ ವೇಳೆ ಪ್ರವಾಹದ ಆತಂಕ ಎದುರಾಯಿತು. ತಕ್ಷಣ ಭಾರತ-ನೇಪಾಳ ಗಡಿ ತಲುಪಿ ಪ್ರವಾಸಿಗರು ಸುರಕ್ಷಿತರಾದರು.
ಸೋಮವಾರದ ವೇಳೆಗೆ ನಿಪ್ಪಾಣಿ ತಲುಪಲಿದ್ದಾರೆ. ಪ್ರವಾಸಿಗರ ಸುರಕ್ಷತೆಯಿಂದ ಕುಟುಂಬಸ್ಥರಲ್ಲಿ ನೆಮ್ಮದಿ ಮೂಡಿದೆ.
