ಮುಂಬೈ: ವಿರಾಟ್ ಕೊಹ್ಲಿ (Virat Kohli) ತಮ್ಮ ಕೈಗಳ ಮೇಲಿನ ಟ್ಯಾಟೂ (Tattoo) ಸಂಗ್ರಹಕ್ಕೆ ಮತ್ತೊಂದು ಶಾಯಿಯನ್ನು ಸೇರಿಸಿದ್ದಾರೆ.
ಭಾರತದ ಮಾಜಿ ನಾಯಕ ಇತ್ತೀಚೆಗೆ ತಮ್ಮ ಎಡಗೈ ಮೇಲೆ ಹೊಸ ಹಚ್ಚೆ ಹಾಕಿಸಿಕೊಂಡಿದ್ದಾರೆ. ಟ್ಯಾಟೂ ಹಾಕಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೊಹ್ಲಿ ಈಗಾಗಲೇ ಹಾಕಿಸಿಕೊಂಡಿರುವ ಟ್ಯಾಟೂಗಳಿಗಿಂತ ಹೊಸ ಹಚ್ಚೆ ಭಿನ್ನವಾಗಿದೆ. ಇದು ವೃತ್ತಾಕಾರದ ಮಾದರಿಯನ್ನು ಹೊಂದಿದ್ದು, ನೀರಿನ ಮೇಲ್ಮೈಗೆ ಹನಿ ಬಿದ್ದ ನಂತರ ಅಲೆಗಳು ಹರಡುವಂತೆ ಕಾಣುತ್ತದೆ.
ಕ್ರಿಕೆಟಿಗ ಕೊಹ್ಲಿ ಹಾಕಿಸಿಕೊಂಡ ಹೊಸ ಟ್ಯಾಟೂ ಅಭಿಮಾನಿಗಳ ಗಮನ ಸೆಳೆದಿದೆ. ಕಿಂಗ್ ಕೊಹ್ಲಿಗೆ ಟ್ಯಾಟೂಗಳೆಂದರೆ ಅಚ್ಚುಮೆಚ್ಚು. 37 ವರ್ಷದ ಕ್ರಿಕೆಟಿಗ ಹಲವು ವರ್ಷಗಳಿಂದ ತಮ್ಮ ಕೈಗಳ ಮೇಲೆ ಡಿಫರೆಂಟ್ ಹಚ್ಚೆಗಳನ್ನು ಹೊಂದಿದ್ದಾರೆ. ಹೆತ್ತವರಾದ ಸರೋಜ್ ಮತ್ತು ಪ್ರೇಮ್ ಅವರ ಹೆಸರುಗಳ ಹಚ್ಚೆಯನ್ನೂ ಹಾಕಿಸಿಕೊಂಡಿದ್ದಾರೆ. ಜೊತೆಗೆ ಶಿವ ಮತ್ತು ಓಂ ಚಿಹ್ನೆಯನ್ನು ಪ್ರತಿನಿಧಿಸುವ ಹಚ್ಚೆಗಳು ಸೇರಿವೆ.
