ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಮತ್ತು ಮಾಜಿ ಸಚಿವ ಸತ್ಯೇಂದ್ರ ಜೈನ್‌ಗೆ ಪತ್ರ ಬರೆದಿರುವ ವಂಚಕ ಸುಕೇಶ್ ಚಂದ್ರಶೇಖರ್ (Sukesh Chandrasekhar) ಆಪ್ ಸರ್ಕಾರದ ಮೂರು ಹಗರಣ ಬಹಿರಂಗೊಳಿಸುವ ಬೆದರಿಕೆ ಹಾಕಿದ್ದಾನೆ.
ಜೈಲಿನಿಂದಲೇ (Jail) ಪತ್ರ ಬರೆದಿರುವ ವಂಚಕ ಸುಕೇಶ್ ಚಂದ್ರಶೇಖರ್, ಎಎಪಿ ನಾಯಕತ್ವಕ್ಕೆ ಸಂಬಂಧಿಸಿದ ಇನ್ನೂ ಮೂರು ಪ್ರಮುಖ ‘ಹಗರಣ’ ಹಾಗೂ ಭ್ರಷ್ಟಾಚಾರದ ವಿಚಾರಗಳನ್ನ ಶೀಘ್ರದಲ್ಲೇ ಬಯಲಿಗೆಳೆಯುವುದಾಗಿ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ವಂದೇ ಮಾತರಂನ ಎರಡು ಚರಣ ಹಾಡುವ ನಿರ್ಧಾರ ದೇಶ ವಿರೋಧಿ: ಕಾಂಗ್ರೆಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ

2021–22ರಲ್ಲಿ ತಾನು ಮಾಡಿದ್ದ ಆರೋಪಗಳು ಈಗ ಸತ್ಯವಾಗಿವೆ ಎಂದು ಸುಕೇಶ್ ಪತ್ರದಲ್ಲಿ ಹೇಳಿಕೊಂಡಿದ್ದಾನೆ. ದೆಹಲಿಯ ಅಬಕಾರಿ ನೀತಿ ಪ್ರಕರಣದ ಬಳಿಕ ಇದೀಗ ದೆಹಲಿ ಜಲ ಮಂಡಳಿಗೆ ಸಂಬಂಧಿಸಿದ ಹಗರಣಗಳ ವಿಚಾರವೂ ಮುನ್ನೆಲೆಗೆ ಬಂದಿದೆ ಎಂದು ಆತ ಉಲ್ಲೇಖಿಸಿದ್ದಾನೆ. ಅಲ್ಲದೇ, ಇನ್ನೂ ಮೂರು ಪ್ರಮುಖ ಇಲಾಖೆಗಳಲ್ಲಿನ ಅಕ್ರಮ ಹಾಗೂ ಭ್ರಷ್ಟಾಚಾರದ ವಿವರಗಳನ್ನ ಬಹಿರಂಗಪಡಿಸುವುದಾಗಿ ಹೇಳಿದ್ದಾನೆ.
ಎಎಪಿಯನ್ನು ವ್ಯಂಗ್ಯವಾಗಿ ‘ಹಗರಣಗಳ ಪಕ್ಷ’ ಎಂದು ಟೀಕಿಸಿರುವ ಸುಕೇಶ್, ಪಕ್ಷದ ಖ್ಯಾತಿ ಅದರ ಹಗರಣಗಳ ವಾಸ್ತವಿಕತೆಯ ಮಟ್ಟಕ್ಕಷ್ಟೇ ಸೀಮಿತವಾಗಲಿದೆ ಎಂದು ಆರೋಪಿಸಿದ್ದಾನೆ. ಇದನ್ನೂ ಓದಿ:ಸಿಖ್ ವಿರೋಧಿ ದಂಗೆ ಕೇಸ್ ಅಪರಾಧಿ, ಜೈಲಿನಲ್ಲಿದ್ದ ಮಾಜಿ ಕಾಂಗ್ರೆಸ್ ಸಂಸದ ಸಜ್ಜನ್ ಕುಮಾರ್ ನಿಧನ

ಪಂಜಾಬ್ ವಿಚಾರದಲ್ಲೂ ಎಚ್ಚರಿಕೆ
ಪಂಜಾಬ್ ಜನರನ್ನ ಮತ್ತೊಮ್ಮೆ ಮೋಸಗೊಳಿಸುವ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಸುಕೇಶ್ ಪತ್ರದಲ್ಲಿ ಹೇಳಿದ್ದಾನೆ. ದೆಹಲಿಯಲ್ಲಿ ಎಎಪಿಗೆ ಎದುರಾದ ಬೆಳವಣಿಗೆಗಳಿಗಿಂತಲೂ ದೊಡ್ಡ ರಾಜಕೀಯ ಆಘಾತ ಪಂಜಾಬ್‌ನಲ್ಲಿ ಎದುರಾಗಲಿದೆ ಎಂದು ಆತ ಹೇಳಿಕೊಂಡಿದ್ದಾನೆ. ಕೇಜ್ರಿವಾಲ್ ಅವರ ರಾಜಕೀಯ ಪ್ರಭಾವದ ಮೂಲಕ ಯುವಜನರನ್ನ ಪ್ರಚೋದಿಸುವ ಪ್ರಯತ್ನವೂ ಯಶಸ್ವಿಯಾಗುವುದಿಲ್ಲ ಎಂದು ಆರೋಪಿಸಿದ್ದಾನೆ.
2015–16ರ ಅವಧಿಯಲ್ಲಿ ಎಎಪಿಯ ಕೆಲವು ‘ಸ್ಥಾಪಕರ’ ಜತೆ ತಾನು ಹೊಂದಿದ್ದ ಸಂಪರ್ಕದ ಬಗ್ಗೆಯೂ ಪತ್ರದಲ್ಲಿ ಸುಕೇಶ್ ಸುಳಿವು ನೀಡಿದ್ದಾನೆ. ಶೀಘ್ರದಲ್ಲೇ ಈ ವಿಚಾರದಲ್ಲಿ ಅಚ್ಚರಿ ಮೂಡಿಸುವಂತಹ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾನೆ.

