ನಟಿ ಸಮಂತಾ ಇದೇ ಡಿಸೆಂಬರ್ನಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದಾ ಕ್ಯಾಮೆರಾ ಮುಂದೆ ಕಂಗೊಳಿಸುವ ಈ ಚೆಲುವೆ ಗರ್ಭಾವಸ್ಥೆಯ ಆರಂಭದ ದಿನಗಳಲ್ಲೇ ತಾವು ಗರ್ಭಿಣಿ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದರು. ಇದೀಗ ಎರಡನೇ ತ್ರೈಮಾಸಿಕ ಹಂತದಲ್ಲಿರುವ ಸಮಂತಾ, ಖಾಸಗಿ ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಗರ್ಭಾವಸ್ಥೆಯ ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ನಟಿ ಸಮಂತಾ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ವಿವಾಹವಾದರು. ಇಬ್ಬರಿಗೂ ಇದು ಎರಡನೇ ವಿವಾಹವಾಗಿತ್ತು. ಮದುವೆಯ ಬಳಿಕ ಹಲವು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಸಮಂತಾ, ʻಮಾ ಇಂಟಿ ಬಂಗಾರಂʼ ಚಿತ್ರದ ಪ್ರಚಾರದ ಸಂದರ್ಭದಲ್ಲಿ ತಮ್ಮ ಪ್ರೆಗ್ನೆನ್ಸಿ ವಿಚಾರವನ್ನು ಬಹಿರಂಗಪಡಿಸಿದ್ದರು.
ಇದೀಗ ಮೊದಲ ಬಾರಿಗೆ ಗರ್ಭಾವಸ್ಥೆಯ ಅನುಭವದ ಬಗ್ಗೆ ಮಾತನಾಡಿರುವ ಸಮಂತಾ, ತಾವು ಗರ್ಭಿಣಿಯಾಗಿದ್ದು ತಮಗೆ ಆಶ್ಚರ್ಯದ ಸಂಗತಿಯಾಗಿತ್ತು ಎಂದು ಹೇಳಿದ್ದಾರೆ.
ಥಸ್ಸಾಡಿಯಾ ಚಿತ್ರೀಕರಣದ ಸಮಯದಲ್ಲಿ ತಾನು ಗರ್ಭಿಣಿ ಎಂಬುದು ತಿಳಿಯಿತು ಎಂದು ಸಮಂತಾ ಹೇಳಿದ್ದಾರೆ. ಈ ವೇಳೆ ಡ್ಯಾನ್ಸ್ ಮಾಡುವಾಗ ಕೊಂಚ ಸುಸ್ತಾಗುತ್ತಿತ್ತು. ಅಸಹಜ ಎನ್ನಿಸುತ್ತಿತ್ತು. ಬಳಿಕ ತಾನು ಗರ್ಭಿಣಿ ಎಂಬುದು ತಿಳಿಯಿತು ಎಂದು ಅವರು ತಿಳಿಸಿದ್ದಾರೆ.
ರಾಜ್ ಹಾಗೂ ತಾವು ಮಕ್ಕಳ ಕುರಿತು ಜಾಸ್ತಿ ಯೋಚನೆ ಮಾಡಿರಲಿಲ್ಲ. ಆದರೆ, ಗರ್ಭಧಾರಣೆಯ ವಿಚಾರ ತಮಗೆ ನಿಜಕ್ಕೂ ಆಶ್ಚರ್ಯ ತಂದಿತ್ತು ಎಂದು ಸಮಂತಾ ಹೇಳಿದ್ದಾರೆ. ಸದ್ಯ ತಾಯಿಯಾಗುವ ವಿಚಾರದಲ್ಲಿ ತಾವು ತುಂಬಾ ಉತ್ಸುಕಳಾಗಿದ್ದೇನೆ ಎಂದಿದ್ದಾರೆ.ಇದನ್ನೂ ಓದಿ: BBK 13: ಸೌಂದರ್ಯ ಶೆಟ್ಟಿಗೆ ತಲೆನೋವು ತರಿಸಿದ ಮಂಜ
ತಮ್ಮ ತಾಯ್ತನದ ಬಗ್ಗೆಯೂ ಸಮಂತಾ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಮಗುವನ್ನು ಹೊಂದುವುದು ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬಹುದು ಎಂದು ಅನೇಕ ದಂಪತಿಗಳು ಹೇಳುತ್ತಾರೆ. ಆದರೂ ಆ ಬದಲಾವಣೆಗಳನ್ನು ಎದುರಿಸಲು ತಾನು ಸಿದ್ಧಳಾಗಿದ್ದೇನೆ ಎಂದು ಸಮಂತಾ ಹೇಳಿದ್ದಾರೆ. ಈ ಮೂಲಕ ಮೊದಲ ಬಾರಿಗೆ ತಮ್ಮ ಗರ್ಭಧಾರಣೆಯ ಅನುಭವದ ಬಗ್ಗೆ ಸಮಂತಾ ಬಹಿರಂಗವಾಗಿ ಮಾತನಾಡಿದ್ದಾರೆ.ಇದನ್ನೂ ಓದಿ: ಪ್ರ್ಯಾಕ್ಟಿಸ್ಗಾಗಿ ಶ್ವಾನದ ಕಾಲು ಕಟ್ – ಪರಿಶೀಲನೆ ವೇಳೆ ಖಾಸಗಿ ಪಶು ಆಸ್ಪತ್ರೆಯ ಕರ್ಮಕಾಂಡ ಬಯಲು

