– 4 ವರ್ಷದಿಂದ ಅನುಮತಿಯಿಲ್ಲದೇ ಕಾರ್ಯನಿರ್ವಹಿಸುತ್ತಿದ್ದ ಆಸ್ಪತ್ರೆ
ಬೆಂಗಳೂರು: ಪ್ರ‍್ಯಾಕ್ಟಿಸ್‌ಗಾಗಿ ಶ್ವಾನದ ಕಾಲು ಕತ್ತರಿಸಿ, ಅನಸ್ತೇಶಿಯಾ ನೀಡದೇ ಪ್ರಾಣಿಗಳ ಪ್ರಯೋಗ ನಡೆಸುತ್ತಿರುವ ಖಾಸಗಿ ಪಶು ಆಸ್ಪತ್ರೆಯ (Private Hospital) ಕರ್ಮಕಾಂಡ ಇದೀಗ ಬಯಲಾಗಿದೆ.
ದೊಡ್ಡಕನ್ನೆಲ್ಲಿಯಲ್ಲಿ ಕಳೆದ 4 ವರ್ಷದಿಂದ ಅನುಮತಿಯಿಲ್ಲದೇ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಪಶು ಆಸ್ಪತ್ರೆಗೆ ಅಧಿಕಾರಿಗಳು ತೆರಳಿ, ಪರಿಶೀಲನೆ ನಡೆಸಿದಾಗ ಹಿಂಸಾಚಾರ ನಡೆಸುತ್ತಿರುವುದು ಬಯಲಾಗಿದೆ. ಈ ಆಸ್ಪತ್ರೆ ಬೋರ್ಡಿಂಗ್, ಕೆಎಡಬ್ಲ್ಯೂಬಿ ಸೇರಿದಂತೆ ಯಾವುದೇ ಅನುಮತಿ ಇಲ್ಲದೇ ಕಾರ್ಯ ನಿರ್ವಹಿಸುತ್ತಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಪ್ರಾಣಿಗಳಿಗೆ ಅನಸ್ತೇಶಿಯಾ ನೀಡದೇ ಪ್ರಯೋಗ ನಡೆಸಿರುವುದು ಹಾಗೂ ಪ್ರ‍್ಯಾಕ್ಟಿಸ್‌ಗಾಗಿ ನಾಯಿಯ ಕಾಲು ಕಟ್ ಮಾಡಿರುವುದು ಗೊತ್ತಾಗಿದೆ. ಇದನ್ನೂ ಓದಿ: ಮಕ್ಕಳ ಅಪಹರಣ ಪ್ರಕರಣಗಳ ತನಿಖೆಗೆ ಏಕರೂಪ ವ್ಯವಸ್ಥೆ – ಕೇಂದ್ರ, ರಾಜ್ಯಗಳಿಗೆ ಸುಪ್ರೀಂ ನೋಟಿಸ್
ಇನ್ನೂ ಆಸ್ಪತ್ರೆಯಲ್ಲಿ ಅಕ್ರಮವಾಗಿ, ಹಿಂಸಾ ರೂಪದಲ್ಲಿ ಪ್ರಾಣಿಗಳನ್ನ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ. ಜೊತೆಗೆ 12 ನಾಯಿಗಳು, 1 ಬೆಕ್ಕು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರಲ್ಲೂ ಒಂದು ನಾಯಿ ಸತ್ತ ಸ್ಥಿತಿಯಲ್ಲಿ ಸಿಕ್ಕಿದೆ.
ಸದ್ಯ ಜಿಬಿಎ ಅಧಿಕಾರಿಗಳು ಆಸ್ಪತ್ರೆ ಬಂದ್ ಮಾಡಿದ್ದು, ಪಶು ಇಲಾಖೆಯಿಂದ ಆಸ್ಪತ್ರೆಗೆ ನೋಟಿಸ್ ನೀಡಿದ್ದಾರೆ. ಈ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿ ಮಂಜುನಾಥ್ ಮತ್ತು ಖಾಸಗಿ ಆಸ್ಪತ್ರೆ ವೈದ್ಯ ಆಸೀಫ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಜೊತೆಗೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ 1960, ಬಿಎನ್‌ಎಸ್ 2023ರ ಅಡಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಬ್ರಿಕ್ಸ್‌ಗೆ ಅಬೇಧ್ಯ ಕೋಟೆಯಾದ ದೆಹಲಿ – 7,000 ಭದ್ರತಾ ಸಿಬ್ಬಂದಿ, 4,800 ಸಂಚಾರ ಪೊಲೀಸರ ನಿಯೋಜನೆ!

