BBK 13: ಬಿಗ್‌ಬಾಸ್ ಸೀಸನ್ 13 ಶುರುವಾಗಿ ಎಲ್ಲೆಡೆ ಸದ್ದು ಮಾಡುತ್ತಿದೆ. ಎಪಿಸೋಡ್‌ಗಳಲ್ಲಿ ಕಂಟೆಸ್ಟಂಟ್‌ಗಳ ಜಗಳ ಜೋರಾಗೆ ಇದೆ. ಈಗ ಮಾಡ್ರನ್ ಕವಿ ಮಂಜನ ಮಾತು ಸೌಂದರ್ಯಾಗೆ ಕಿರಿಕಿರಿಯಾಗಿದ್ದು, ಈ ಬಗ್ಗೆ ಬಿಗ್‌ಬಾಸ್‌ಗೆ ಕಂಪ್ಲೇಂಟ್ ಮಾಡಿದ್ದಾರೆ ಸ್ಯಾಂಡಿ..
ಬಿಗ್‌ಬಾಸ್ ಶುರುವಾಗಿದ್ರೂ ಎಲ್ಲ ಕಂಟೆಸ್ಟೆಂಟ್‌ಗಳಿಗೂ ಮನೆಯೊಳಗೆ ಎಂಟ್ರಿ ಸಿಕ್ಕಿಲ್ಲ. ಕೆಲ ಕಂಟೆಸ್ಟೆಂಟ್‌ಗಳು ವಿಮಾನದಲ್ಲೇ ಉಳಿಯುವಂತಾಗಿದೆ. ವಿಮಾನದಲ್ಲಿ ಇರಲಾಗದೆ ಕೆಲ ಮಹಿಳಾ ಸ್ಪರ್ಧಿಗಳು ಬಿಗ್‌ಬಾಸ್ ಬಳಿ ಗೋಳಾಡಿದ್ದೂ ಇದೆ. ಇದೀಗ ಬೋಲ್ಡ್ ಆ್ಯಂಡ್ ಸ್ಟ್ರಾಂಗ್ ಕಂಟೆಸ್ಟೆಂಟ್ ಅಂತ ಕರೆಸಿಕೊಳ್ಳುತ್ತಿದ್ದ ಸೌಂದರ್ಯ ಶೆಟ್ಟಿ ವಿಮಾನದಲ್ಲಿ ಇರಲಾಗದೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ವಿಮಾನದ ಮುಖ್ಯದ್ವಾರದ ಹತ್ತಿರ ಹೋಗಿ ಹೊರಗೆ ಹೋಗುತ್ತೇನೆ ಎಂದು ಒದ್ದಾಡಿದ್ದಾರೆ. “ನಾನು ವಾಶ್‌ರೂಮ್‌ಗೆ ಹೋಗಿ ಮಲಗುತ್ತೇನೆ” ಎಂದು ಕಣ್ಣೀರು ಸುರಿಸಿದ್ದಾರೆ. ಸೌಂದರ್ಯ ಅವರ ಈ ನಡೆ ಬಿಗ್‌ಬಾಸ್ ಪ್ರೇಕ್ಷಕರಿಗೆ ಆಶ್ಚರ್ಯ ಉಂಟುಮಾಡಿದೆ.
ಅಸಲಿಗೆ ಸೌಂದರ್ಯ ಅವರ ತಲೆನೋವಿಗೆ ಕಾರಣ ಮಂಜುನಾಥ್ ಅನ್ನೋದು ತಿಳಿದುಬಂದಿದೆ. ರಾತ್ರಿ ಮಲಗಿದ್ದ ವೇಳೆಯೂ ಮಂಜು ಮಾತನಾಡುತ್ತಿರುವ ಕಾರಣ ತಮಗೆ ತಲೆನೋವು ಬಂದಿದೆ ಎಂದು ಸೌಂದರ್ಯ ಹೇಳಿದ್ದಾರೆ. ತಲೆನೋವು ತಡೆಯಲು ಆಗುತ್ತಿಲ್ಲ ಎಂದು ಜೋರಾಗಿ ಅತ್ತಿದ್ದಾರೆ. ಇದನ್ನೂ ಓದಿ: ಪ್ಯಾರ್ ಚಿತ್ರಕ್ಕಾಗಿ ಟ್ಯಾಬ್ಲೋ ಪ್ರಚಾರ – ರವಿಚಂದ್ರನ್ ವಿಶೇಷ ಪಾತ್ರದ ಸಿನಿಮಾ
ಅಳುತ್ತಿರುವ ಸೌಂದರ್ಯ ಅವರನ್ನು ಉಳಿದ ಮಹಿಳಾ ಸ್ಪರ್ಧಿಗಳು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೂ, “ಇಲ್ಲ, ಎಷ್ಟು ಹೇಳಿದರೂ ಮಂಜು ಮಾತು ನಿಲ್ಲಿಸುತ್ತಿಲ್ಲ. ನಾನು ವಾಶ್‌ರೂಮ್‌ಗೆ ಹೋಗಿ ಮಲಗುತ್ತೇನೆ” ಎಂದು ಸೌಂದರ್ಯ ಹೇಳಿದ್ದಾರೆ.
ಬಳಿಕ ಮಲಗಿದ್ದ ಜಾಗದಲ್ಲೇ ಮಂಜು, “ನಾನು ಅಷ್ಟು ಜೋರಾಗಿ ಮಾತನಾಡಿಲ್ಲವಲ್ಲ” ಎಂದು ಹೇಳಿದ್ದಾರೆ. ಮಂಜು ರಾತ್ರಿ ಮಲಗಿದ್ದಾಗ ಅವಿನಾಶ್ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಸೌಂದರ್ಯ ತಲೆನೋವಾಗುತ್ತಿದೆ ಎಂದು ಜೋರಾಗಿ ಅತ್ತಿದ್ದಾರೆ.ಇದನ್ನೂ ಓದಿ: ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ದೈಜಿ ಟೀಮ್ ಗಿಫ್ಟ್

