– ಬೆಂಗಳೂರು ನೀರು ನೇರವಾಗಿ ಕಾವೇರಿ ನದಿಗೆ ಸೇರ್ತಿದೆ
ಬೆಂಗಳೂರು: ನದಿ ನೀರನ್ನ ಕಲುಷಿತಗೊಳಿಸಿದ್ರೆ ಕಾರ್ಖಾನೆಗಳನ್ನ (Factory) ಮುಚ್ಚಿಸುತ್ತೇವೆ ಎಂದು ಅರಣ್ಯ ಹಾಗೂ ಪರಿಸರ ಸಚಿವ ರಾಮಲಿಂಗಾರೆಡ್ಡಿ (Ramalingareddy) ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಿಂದ ಕುಡಿಯಲು ಯೋಗ್ಯವಲ್ಲದ ನೀರು ಬರ್ತಿದೆ ಅಂತಾ ಎನ್‌ಜಿಟಿಗೆ ತಮಿಳುನಾಡಿನವರು ಕೇಸ್ ಹಾಕಿದ್ದಾರೆ. ಅ.14 ರಂದು ಕೇಸ್ ಇದೆ. BWSSB (ಜಲಮಂಡಳಿ) ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಸಿದ್ದೇನೆ. ನದಿ ಪಕ್ಕದ ಫ್ಯಾಕ್ಟರಿಗಳಿಗೆ ವಾರ್ನ್ ಮಾಡ್ತೇನೆ. ಎಸ್‌ಟಿಪಿ ಅಳವಡಿಸಬೇಕು, ನದಿ ನೀರನ್ನ ಕಲುಷಿತ ಮಾಡಿದ್ರೇ ಫ್ಯಾಕ್ಟರಿಗಳನ್ನ ಮುಚ್ಚಿಸತ್ತೇವೆ ಎಂದು ಎಚ್ಚರಿಕೆ ನೀಡಿದರಲ್ಲದೇ, ಸದ್ಯ 4-5 ನದಿಗಳು ಬಿಟ್ಟರೆ ಉಳಿದೆಲ್ಲ ನದಿಗಳು ಬಹುತೇಕ ಕಲುಷಿತವಾಗಿವೆ ಎಂದು ತಿಳಿಸಿದರು.

ಮುಂದುವರಿದು.. ಬೆಂಗಳೂರಲ್ಲಿ 4 ಲಕ್ಷ ಬೋರ್‌ವೆಲ್‌ಗಳಿವೆ. 2,500 ಎಂಎಲ್‌ಡಿ (ಮಿಲಿಯನ್ ಲೀಟರ್) ಚರಂಡಿ ನೀರು ಹೋಗ್ತಿದೆ. ಸೆಕೆಂಡರಿ ಟ್ರೀಟ್ ಮೆಂಟ್ ಮಾಡಿ ನೀರನ್ನು ಬಿಡಬೇಕಿದೆ. ನಮ್ಮೆಲ್ಲಾ ಬೆಂಗಳೂರು ನೀರು ನೇರವಾಗಿ ಕಾವೇರಿ ನದಿಗೆ ಸೇರ್ತಿದೆ. 1,100 ಎಂಎಲ್‌ಡಿ ನೀರು ಈಗಲೂ ಟ್ರೀಟ್ಮೆಂಟ್ ಇಲ್ಲದೇ ಹರಿದು ಹೋಗ್ತಿದೆ. ಆದ್ದರಿಂದಲೇ ಕುಡಿಯಲು ಯೋಗ್ಯವಲ್ಲದ ನೀರು ಬೆಂಗಳೂರಿನಿಂದ ಬಿಡ್ತಿದಾರೆ ಅಂತಾ ಎನ್‌ಜಿಟಿಗೆ ತಮಿಳುನಾಡು ದೂರು ನೀಡಿದೆ. ಹೀಗಾಗಿ ನೀರು ಟ್ರೀಟ್ಮೆಂಟ್‌ಗೆ ಮುಂದಾಗಿದ್ದೇವೆ ಎಂದು ವಿವರಿಸಿದ್ರು.

