– ಮಾಜಿ ಕುಲಪತಿ ಯಡವಟ್ಟು; ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ
ಹಾವೇರಿ: ಜಿಲ್ಲೆಯ ಜನಪದ ವಿಶ್ವವಿದ್ಯಾಲಯದಲ್ಲಿ (Haveri University) ಸರ್ಕಾರ ಮತ್ತು ರಾಜ್ಯಪಾಲರ ಅನುಮತಿ ಪಡೆಯದೆ ಪ್ರಾರಂಭಿಸಿದ್ದ 8 ಕೋರ್ಸ್‌ಗಳನ್ನು ಉನ್ನತ ಶಿಕ್ಷಣ ಇಲಾಖೆ ರದ್ದು ಮಾಡುವಂತೆ ಆದೇಶಿಸಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಗೊಟಗೋಡಿ ಬಳಿ ಇರುವ ಜನಪದ ವಿಶ್ವವಿದ್ಯಾಲಯದಲ್ಲಿ ಒಂದಿಲ್ಲಾ ಒಂದು ಯಡವಟ್ಟು ನಡೆಯುತ್ತಾ ಬಂದಿವೆ. ಸರ್ಕಾರ ಮತ್ತು ರಾಜ್ಯಪಾಲರ ಅನುಮೋದನೆ ಪಡೆಯದೆ, ನಿಯಮಾವಳಿ ರಚಿಸಿದೆ, 2018-19 ರಲ್ಲಿ ಸ್ನಾತಕೋತ್ತರ 8 ಕೊರ್ಸ್‌ಗಳನ್ನ ಪ್ರಾರಂಭ ಮಾಡಿತ್ತು. ಈಗ ವಿಶ್ವವಿದ್ಯಾಲಯ 2018-19ರಿಂದ ಎಂ.ಎ ಅರ್ಥಶಾಸ್ತ್ರ, ಎಂ.ಎ ಕನ್ನಡ ಮತ್ತು ಜನಪದ, ಎಂಎ ಇಂಗ್ಲಿಷ್, ಎಂ.ಎ ಸಮಾಜಶಾಸ್ತ್ರ ಎಂ.ಎಸ್.ಡಬ್ಲ್ಯೂ, ಪ್ರದರ್ಶನಕಲೆ, ದೃಶ್ಯ ಕಲೆ ಮತ್ತು ಎಂ.ಎಂ ಮಹಿಳಾ ಅಧ್ಯಯನ ವಿಷಯಗಳನ್ನ ರದ್ದುಗೊಳಿಸುವಂತೆ ಸೂಚನೆ ನೀಡಿದೆ.
ಶಿಕ್ಷಣ ಇಲಾಖೆಯ ನಿರ್ಧಾರದಿಂದ ಈ ವಿಭಾಗದಲ್ಲಿ ಕೆಲಸ ಮಾಡುವ 20ಕ್ಕೂ ಅಧಿಕ ಬೋಧಕ ಮತ್ತು ಬೊಧಕೇತರ ಸಿಬ್ಬಂದಿಗಳು ಕೆಲಸ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದಾರೆ.
ಜನಪದ ವಿಶ್ವವಿದ್ಯಾಲಯ ಪ್ರಾರಂಭದಲ್ಲಿ ಅನುಮೋದನೆ ಸಿಕ್ಕ ಕೋರ್ಸ್‌ಗಳಾದ ಜನಪದ ಕಲೆ, ಜನಪದ ವಿಜ್ಞಾನ, ಜನಪದ ಪ್ರವಾಸೋದ್ಯಮ, ಜನಪದ ಪತ್ರಿಕೋದ್ಯಮ, ಬುಡಕಟ್ಟು ಮತ್ತು ಮಹಿಳಾ ಅಧ್ಯಯನ, ಜನಪದ ಸಾಹಿತ್ಯ ಕೋರ್ಸ್‌ಗಳನ್ನ ನಡೆಸಲು ಅನುಮತಿ ನೀಡಿದೆ.
2018 ಕುಲಪತಿ ಡಿ.ಬಿ.ನಾಯಕ್ ಮತ್ತು ಹಿಂದಿನ ಕುಲಪತಿ ಭಾಸ್ಕರ ಅವರು ಈ ಕೋರ್ಸ್‌ಗಳನ್ನ ಪ್ರಾರಂಭ ಮಾಡಿದ ನಂತರ, 2024 ಮತ್ತು 25ರಲ್ಲಿ ಘಟನೋತ್ತರ ಅನುಮೋದನೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಹೀಗಾಗಿ ನಿಯಮ ಉಲ್ಲಂಘನೆಯಡಿ ಉನ್ನತ ಶಿಕ್ಷಣ ಇಲಾಖೆಯು ಆದೇಶವನ್ನ ಹೊರಡಿಸಿದೆ. ಸರ್ಕಾರವು ಪ್ರೋ. ಬೊರಲಿಂಗಯ್ಯ ನೇತ್ರತ್ವದಲ್ಲಿ ಒಂದು ಸಮಿತಿ ರಚನೆ ಮಾಡಿತ್ತು. ಸಮಿತಿಯು ಪರಿಶೀಲನೆ ನಡೆಸಿ ಜನಪದ ವಿಶ್ವವಿದ್ಯಾಲಯದಲ್ಲಿ ಜನಪದ ಬಗ್ಗೆ ಮಾತ್ರ ಅಧ್ಯಯನ ಮಾಡಬೇಕು. ಇತರೆ ಕಾಲೇಜುಗಳಂತೆ ಇಲ್ಲಿಯೂ ಅದೇ ವಿಷಯಗಳ ಅಧ್ಯಯನ ಮಾಡಿದರೆ ಜನಪದ ವಿಶ್ವವಿದ್ಯಾಲಯಗಳಲ್ಲಿ ಏನೋ ವ್ಯತ್ಯಾಸ ಇರುವುದಿಲ್ಲ ಎಂದು ಸಮಿತಿ ಹೇಳಿದೆ.ಇದನ್ನೂ ಓದಿ: ನದಿ ನೀರನ್ನ ಕಲುಷಿತಗೊಳಿಸಿದ್ರೆ ಕಾರ್ಖಾನೆ ಮುಚ್ಚಿಸುತ್ತೇವೆ: ರಾಮಲಿಂಗಾರೆಡ್ಡಿ ಎಚ್ಚರಿಕೆ
ಸರ್ಕಾರವು 8 ಕೋರ್ಸ್ ರದ್ದುಗೊಳಿಸಲು ಆದೇಶಿಸಿದೆ. ಅದನ್ನ ಪಾಲನೆ ಮಾಡಲು ಸೂಚನೆ ನೀಡಿದೆ. ಜನಪದ ವಿಶ್ವವಿದ್ಯಾಲಯದಲ್ಲಿ ಜನಪದ ವಿಷಯ ಮಾತ್ರ ಅದ್ಯಯನ ಮೀಸಲು ಇಡಬೇಕು. ಯಡವಟ್ಟು ಮಾಡಿದ ಮಾಜಿ ಕುಲಪತಿ ವಿರುದ್ಧ ಕಠಿಣ ಕ್ರಮ ತೆಗದುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಜನಪದ ವಿಶ್ವವಿದ್ಯಾಲಯ ಹಳೆಯ ಕುಲಪತಿ ಮಾಡಿದ ಯಡವಟ್ಟಿನಿಂದ ಈಗ 20ಕ್ಕೂ ಅಧಿಕ ಬೋಧಕ ಮತ್ತು ಭೋಧಕೆತರ ಸಿಬ್ಬಂದಿ ಹಾಗೂ 100 ಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.ಇದನ್ನೂ ಓದಿ: ಕರ್ನಾಟಕ–ಕೆನಡಾ ಸಹಭಾಗಿತ್ವ ಮತ್ತಷ್ಟು ಬಲಪಡಿಸಲು ಕ್ರಮ: ಪ್ರಿಯಾಂಕ್ ಖರ್ಗೆ

