– 22 ತಿಂಗಳಿನಿಂದ ಜೈಲಿನಲ್ಲಿರುವ ಹಿಂದೂ ನಾಯಕ
ಢಾಕಾ: ಬಾಂಗ್ಲಾದೇಶದಲ್ಲಿ (Bangladesh) ಜೈಲುವಾಸ ಅನುಭವಿಸುತ್ತಿರುವ ಪ್ರಮುಖ ಹಿಂದೂ ಮುಖಂಡ ಚಿನ್ಮಯ್ ಕೃಷ್ಣ ದಾಸ್(Chinmoy Krishna Das) ಅವರಿಗೆ ತಮ್ಮ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸ್ಥಳೀಯ ಆಡಳಿತ ಕೇವಲ 5 ಗಂಟೆಗಳ ಕಾಲ ಷರತ್ತುಬದ್ಧ ಪೆರೋಲ್ ಮಂಜೂರು ಮಾಡಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಜೈಲಿನಲ್ಲಿದ್ದ ಮಗನನ್ನು ಕೊನೆ ಬಾರಿ ನೋಡಬೇಕೆಂಬ ಬಯಸಿದ್ದರು. ಆದರೆ ಬದುಕಿದ್ದಾಗ ತಾಯಿಯನ್ನು ನೋಡಲು ಅಧಿಕಾರಿಗಳು ಅನುಮತಿ ನೀಡದಿರುವುದು ಕುಟುಂಬಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಚಿನ್ಮಯ್ ಕೃಷ್ಣ ದಾಸ್ ಅವರ 71 ವರ್ಷದ ತಾಯಿ ಸಂಧ್ಯಾ ರಾಣಿ ಧಾರ್ ಅವರು ಹತ್‌ಹಜಾರಿ ಆಸ್ಪತ್ರೆಯಲ್ಲಿ ನಿಧನರಾದರು. ತಾಯಿ ಗಂಭೀರ ಸ್ಥಿತಿಯಲ್ಲಿದ್ದಾಗ ಮಗನ ಭೇಟಿಗೆ ಪೆರೋಲ್ ನೀಡುವಂತೆ ಕುಟುಂಬಸ್ಥರು ಚಟ್ಟೋಗ್ರಾಮ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಆದರೆ ಅನಾರೋಗ್ಯ ಪೀಡಿತ ಸಂಬಂಧಿಕರನ್ನು ಭೇಟಿ ಮಾಡಲು ಪೆರೋಲ್ ನೀಡುವ ಅವಕಾಶವಿಲ್ಲ ಎಂದು ಆಡಳಿತ ಅರ್ಜಿ ತಿರಸ್ಕರಿಸಿತ್ತು.
ತಾಯಿ ನಿಧನರಾದ ನಂತರವಷ್ಟೇ ಅಂತಿಮ ವಿಧಿವಿಧಾನಗಳಲ್ಲಿ (Mother’s Funeral) ಪಾಲ್ಗೊಳ್ಳಲು ಚಟ್ಟೋಗ್ರಾಮ್ ಜಿಲ್ಲಾಧಿಕಾರಿ ಮೊಹಮ್ಮದ್ ಜಾಹಿದುಲ್ ಇಸ್ಲಾಂ ಮಿಯಾ ಅವರು 5 ಗಂಟೆಗಳ ಪೆರೋಲ್ ಮಂಜೂರು ಮಾಡಿದರು.
ಪೆರೋಲ್ ಪಡೆದು ಹೊರಬಂದ ಚಿನ್ಮಯ್ ದಾಸ್, ಚಟ್ಟೋಗ್ರಾಮ್‌ನ ಪುಂಡರೀಕ ಧಾಮ್ ದೇವಾಲಯದಲ್ಲಿ ರಾಧಾ-ಕೃಷ್ಣ ಮೂರ್ತಿಯ ಪಾದ ಸ್ಪರ್ಶಿಸಿ ಕಣ್ಣೀರಿಡುತ್ತಿರುವ ಭಾವುಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳಿಕ ಅದೇ ಆವರಣದಲ್ಲಿ ಸಂಧ್ಯಾ ರಾಣಿ ಅವರ ಅಂತ್ಯಕ್ರಿಯೆ ನೆರವೇರಿತು.
A dying mother’s final wish was simply to see her son one last time. Chinmoy Krishna Das was denied even that, and was granted only five hours of parole after her death to perform her last rites.
This revered Hindu monk has spent years in jail for speaking up for the rights of… pic.twitter.com/pdo2ZaCNdS
— Hussain Saddam (@saddamhussainbd) September 10, 2026
‘ಬಾಂಗ್ಲಾದೇಶ ಸಮ್ಮಿಲಿತ ಸನಾತನಿ ಜಾಗರಣ ಜ್ಯೋತ್’ ಸಂಘಟನೆಯ ವಕ್ತಾರರಾಗಿದ್ದ ಚಿನ್ಮಯ್ ಕೃಷ್ಣ ದಾಸ್ ಅವರನ್ನು 2024ರ ನವೆಂಬರ್‌ನಲ್ಲಿ ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಗಿತ್ತು. ಶೇಖ್ ಹಸೀನಾ ಅವರ ಸರ್ಕಾರದ ಪತನದ ಬಳಿಕ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಗಾಗಿ ಇವರು ಹಲವು ಪ್ರತಿಭಟನೆಗಳನ್ನು ಮುನ್ನಡೆಸಿದ್ದರು. ಇದನ್ನೂ ಓದಿ: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಘಟನೆಗೆ 25 ವರ್ಷ – ಇದೇ ದಿನ ಅಮೆರಿಕದ WTC ಮೇಲೆ ನಡೆದಿತ್ತು ಭಯೋತ್ಪಾದಕ ದಾಳಿ
Sri Chinmay Krishna Das Prabhu touched the feet of Radha-Krishna at Pundarik Dham Temple in Chattogram, Bangladesh before being taken to jail.
He was given only a few hours of parole by to see his mother for the last time before she passed away.. pic.twitter.com/Usax0qdyeI
— News Algebra (@NewsAlgebraIND) September 10, 2026
ಚಿನ್ಮಯ್ ಕೃಷ್ಣ ದಾಸ್ ಯಾರು?
ಇಸ್ಕಾನ್ ಬಾಂಗ್ಲಾದೇಶದ ಚಿತ್ತಗಾಂಗ್ ವಿಭಾಗದ ಕಾರ್ಯದರ್ಶಿಯಾಗಿ ಮತ್ತು ಅಲ್ಲಿನ ‘ಶ್ರೀ ಶ್ರೀ ಪುಂಡರೀಕ ಧಾಮ’ದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಇವರು ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರ ಪ್ರಮುಖ ವಕೀಲರಾಗಿದ್ದಾರೆ. ಸನಾತನ ಜಾಗರಣ್ ಮಂಚ್, ಬಾಂಗ್ಲಾದೇಶ ಸನಾತನ ಜಾಗರಣ ಮಂಚ್ ವಕ್ತಾರರು ಮತ್ತು ಪುಂಡರೀಕ್ ಧಾಮದ ಪ್ರಾಂಶುಪಾಲರಾಗಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಬಗ್ಗೆ ಅವರು ಧ್ವನಿ ಎತ್ತಿದ್ದರು. ಮಾಜಿ ಪ್ರಧಾನಿ ಶೇಖ್ ಹಸೀನಾ ಅಧಿಕಾರದಿಂದ ಕೆಳಗಿಳಿದ ನಂತರ ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ನಡೆಯುತ್ತಿದೆ. ಮೊಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರವು ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರವನ್ನು ತಡೆಯಲು ವಿಫಲವಾಗಿದೆ ಎಂದು ಟೀಕಿಸಿದ್ದರು.
ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಯಾರಾದರೂ ನಮ್ಮನ್ನು ಈ ದೇಶದಿಂದ ಹೊರಹಾಕಿ ಶಾಂತಿಯಿಂದ ಬದುಕಬಹುದು ಎಂದು ಬಯಸಿದರೆ ಇಲ್ಲಿ ಪ್ರಜಾಪ್ರಭುತ್ವ ಇರುವುದಿಲ್ಲ. ನಮ್ಮ ದೇಶ ಅಫ್ಘಾನಿಸ್ತಾನ ಅಥವಾ ಸಿರಿಯಾ ಆಗುತ್ತದೆ ಎಂದು ಹೇಳಿದ್ದರು.
ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಅಕ್ಟೋಬರ್ 2024 ರಲ್ಲಿ ಚಿತ್ತಗಾಂಗ್‌ನಲ್ಲಿ ಅವರು ಬೃಹತ್ ರ‍್ಯಾಲಿ ನಡೆಸಿದ್ದರು. ಈ ರ‍್ಯಾಲಿಯ ಸಂದರ್ಭದಲ್ಲಿ ಬಾಂಗ್ಲಾದೇಶದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದೆ ಎಂಬ ಆರೋಪದ ಮೇಲೆ ಸರ್ಕಾರವು ನವೆಂಬರ್ 2024 ರಲ್ಲಿ ಅವರನ್ನು ದೇಶದ್ರೋಹದ ಪ್ರಕರಣದಡಿ ಬಂಧಿಸಿತ್ತು.

