ಬೆಂಗಳೂರು: ನಕಲಿ ಮೆಡಿಸಿನ್ ಪತ್ತೆ ಕೇಸ್‌ಗೆ ಸಂಬಂಧಿಸಿದಂತೆ ಎಸ್‌ಐಟಿ (SIT) ಇದೀಗ ಕರ್ನಾಟಕ (Karnataka) ಸೇರಿ 6 ರಾಜ್ಯಗಳಲ್ಲಿ ದಾಳಿ ನಡೆಸಿದೆ.
ಎಸ್‌ಐಟಿ ಹಾಗೂ ಡ್ರಗ್ಸ್ ಕಂಟ್ರೋಲ್ ಡಿಪಾರ್ಟ್ಮೆಂಟ್ ಜಂಟಿ ಕಾರ್ಯಾಚರಣೆ ನಡೆಸಿದ್ದು, ರಾಜ್ಯ ಸೇರಿದಂತೆ ಬೇರೆ ರಾಜ್ಯಗಳಲ್ಲಿಯೂ ದಾಳಿ ನಡೆದಿದ್ದಾರೆ. ಚಾಮರಾಜಪೇಟೆ ಮತ್ತಿತರ ಭಾಗದಲ್ಲಿಯೂ ಕೂಡ ದಾಳಿ ನಡೆಸಿ, ಎಸ್‌ಐಟಿ ಕಾರ್ಯಾಚರಣೆ ನಡೆಸಿದೆ. ಇದನ್ನೂ ಓದಿ: ಗಣೇಶ ಚತುರ್ಥಿ ಹೊಸ್ತಿಲಲ್ಲೇ ಶಾಕ್ – RTO ಎಚ್ಚರಿಕೆ ಮಧ್ಯೆ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ
ಇನ್ನೂ ಹರಿಯಾಣ, ಹಿಮಾಚಲ ಪ್ರದೇಶ, ಬಾಂಬೆ, ಕರ್ನಾಟಕ, ತೆಲಂಗಾಣ, ತಮಿಳುನಾಡಿನ ಚೆನ್ನೈ ರಾಜ್ಯಗಳಲ್ಲಿಯೂ ದಾಳಿ ನಡೆಸಿದೆ. ಈ ವೇಳೆ ನಕಲಿ ಡ್ರಗ್ಸ್ ತಯಾರಿಕೆ ಮಾಡಲು ಒಂದೊಂದು ಜಾಗದಿಂದ ಒಂದೊಂದು ಕಚ್ಚಾವಸ್ತು ಬರ್ತಿತ್ತು. ಬಾಟಲ್, ಲೇಬಲ್, ಔಷಧಿಯೊಳಗಿನ ಪದಾರ್ಥ ಹೀಗೆ ಒಂದೊಂದು ರಾಜ್ಯದಿಂದ ಒಂದೊಂದು ಪದಾರ್ಥ ಬರ್ತಿತ್ತು ಎಂದು ತಿಳಿದುಬಂದಿದೆ. ಸದ್ಯ ಈ ಎಲ್ಲಾ ಅಡ್ಡೆಗಳ ಮೇಲೆ ಎಸ್‌ಐಟಿ ಬೃಹತ್ ರೇಡ್ ಮಾಡಿದೆ.ಇದನ್ನೂ ಓದಿ: ಬದುಕಿದ್ದಾಗ ಸಿಗಲಿಲ್ಲ ಅವಕಾಶ – ತಾಯಿಯ ಅಂತ್ಯಕ್ರಿಯೆಗಾಗಿ ಚಿನ್ಮಯ್ ಕೃಷ್ಣ ದಾಸ್ ಸಿಕ್ತು 5 ಗಂಟೆಗಳ ಪೆರೋಲ್

