– ಕೆಟ್ಟು ನಿಂತ ಲಾರಿಗೆ ಕಾರು, ಟ್ರಕ್ ಡಿಕ್ಕಿ
ನೆಲಮಂಗಲ: ಇಲ್ಲಿನ (Nelamangala) ರಾಯರಪಾಳ್ಯ ಬಳಿ ಬೆಂಗಳೂರು – ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ (Serial Accident) ಸಂಭವಿಸಿದೆ. ಕೆಟ್ಟು ನಿಂತಿದ್ದ ಲಾರಿಗೆ ಕಾರು ಹಾಗೂ ಟ್ರಕ್ ಡಿಕ್ಕಿಯಾಗಿದೆ.
ಹೈವೆಯಲ್ಲಿ ಲಾರಿ ಕಟ್ಟು ನಿಂತಿತ್ತು. ಈ ಲಾರಿಗೆ ಹಿಂಬದಿಯಿಂದ ಕಾರು ಹಾಗೂ ಮತ್ತೊಂದು ಟ್ರಕ್ ಡಿಕ್ಕಿಯಾಗಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಮುಂಭಾಗ ಜಖಂಗೊಂಡಿದೆ. ಕಾರಿನಲ್ಲಿದ್ದ ನಾಲ್ವರು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಸಿನಿಮಾ ಡೈರೆಕ್ಟರ್ ಆಗಬೇಕು ಅಂತ ಕನಸು ಕಂಡಿದ್ದ ಯುವಕ ಆತ್ಮಹತ್ಯೆ
ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದನ್ನೂ ಓದಿ: ವಿದ್ಯಾರ್ಥಿಗಳ ಜೊತೆ ಸೆಕ್ಸ್ – ಯುಎಸ್‌ನ ಪ್ರೌಢಶಾಲಾ ಶಿಕ್ಷಕಿ ಅರೆಸ್ಟ್
