-ಹತ್ಯೆ ಬಳಿಕ ದರೋಡೆ ನಾಟಕವಾಡಿದ ಪತ್ನಿ
– ಕೊಲೆ ಮಾಡಲು ಪ್ರಿಯಕರನಿಗೆ 5 ಲಕ್ಷ ರೂ. ಆಮಿಷ
ನವದೆಹಲಿ: ಪ್ರಿಯಕರ (Lover) ಹಾಗೂ ಆತನ ಸಹಚರನೊಂದಿಗೆ ಸೇರಿ ಪತ್ನಿ (Wife) ತನ್ನ ಗಂಡನಿಗೆ (Husband) ಮತ್ತು ಬರುವ ಔಷಧಿ ನೀಡಿ, ಕುತ್ತಿಗೆ ಬಿಗಿದು, ಖಾಸಗಿ ಅಂಗಕ್ಕೆ ಕರೆಂಟ್ ಶಾಕ್ ಕೊಟ್ಟು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ದಕ್ಷಿಣ ದೆಹಲಿಯ ಸಂಗಮ್ ವಿಹಾರ್‌ನ ರಾತಿಯಾ ಮಾರ್ಗ್ ಪ್ರದೇಶದಲ್ಲಿ ನಡೆದಿದೆ.
55 ವರ್ಷದ ಮುನ್ನಾ ಲಾಲ್ ಹತ್ಯೆಯಾದ ವ್ಯಕ್ತಿ. ಪ್ರಕರಣ ಆರೋಪಿಗಳಾದ ಪತ್ನಿ ಮಂಜು ಅಲಿಯಾಸ್ ನಾಜಿಯಾ (45), ಆಕೆಯ ಪ್ರಿಯಕರ ಚಮನ್ (20) ಹಾಗೂ ಆತನ ಸಹಚರ ಕಿಶನ್‌ನನ್ನು (28) ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 56 ಇಂಚಿನ ಸಣ್ಣ ಕೋತಿ, ಬೇಗ ಸದನದೊಳಗೆ ಬಾ – ಅಧಿವೇಶನದ ಕೊನೆ ದಿನ ವಿಪಕ್ಷಗಳ ಪ್ರತಿಭಟನೆ
ಆಗಸ್ಟ್ 10ರಂದು ಬೆಳಗ್ಗೆ ಸುಮಾರು 5 ಗಂಟೆಗೆ ದಕ್ಷಿಣ ದೆಹಲಿಯ ಸಂಗಮ್ ವಿಹಾರ್‌ನ (Sangam Vihar) ರಾತಿಯಾ ಮಾರ್ಗ್ (Ratiya Marg) ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಗಾಯಗೊಂಡು ರಸ್ತೆಯಲ್ಲಿ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ತಕ್ಷಣವೇ ಸ್ಥಳಕ್ಕೆ ತೆರಳಿದ ಪೊಲೀಸರು ಮುನ್ನಾ ಲಾಲ್ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ. ಅಲ್ಲದೇ ಅವರ ದೇಹದ ಮೇಲೆ ಹಲವು ಗಾಯದ ಗುರುತುಗಳಿದ್ದವು. ಕೂಡಲೇ ಅವರನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಯಿತಾದರೂ, ವೈದ್ಯರು ಮುನ್ನಾ ಲಾಲ್ ಮೃತಪಟ್ಟಿರುವುದಾಗಿ ಘೋಷಿಸಿದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಇದನ್ನೂ ಓದಿ: ಮೆರಿಟ್ ವಿದ್ಯಾರ್ಥಿ ವೇತನ ಮುಂದುವರಿಕೆಗೆ ಕೇಂದ್ರ ಚಿಂತನೆ
ತನಿಖೆಯಲ್ಲಿ ಇದು ಪೂರ್ವಯೋಜಿತ ಕೊಲೆ ಎಂಬುದು ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ಮುನ್ನಾ ಲಾಲ್ ಅವರನ್ನು ಕೊಲೆ ಮಾಡಲು ಅವರ ಪತ್ನಿ ನಾಜಿಯಾ ತನ್ನ ಪ್ರಿಯಕರ ಚಮನ್‌ಗೆ 5 ಲಕ್ಷ ರೂ. ನೀಡುವುದಾಗಿ ಆಮಿಷವೊಡ್ಡಿದ್ದಳು. ಚಮನ್ ದಂಪತಿಯ ಮನೆಯ ಸಮೀಪದ ಅಂಗಡಿಯೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕೊಲೆ ನಡೆದ ಹಿಂದಿನ ರಾತ್ರಿ ಚಮನ್ ನಿದ್ದೆ ಮಾತ್ರೆಗಳನ್ನು ನಾಜಿಯಾಗೆ ನೀಡಿದ್ದ. ಆಕೆ ಮಾತ್ರೆಗಳನ್ನು ನೀರಿನಲ್ಲಿ ಬೆರೆಸಿ ಪತಿ ಮುನ್ನಾ ಲಾಲ್‌ಗೆ ಕುಡಿಸಿದ್ದಳು. ಬಳಿಕ ಪತಿ ನಿದ್ರೆಗೆ ಜಾರಿದಾಗ ಚಮನ್ ಮನೆಗೆ ಪ್ರವೇಶಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಜೀಪ್ ಬೆನ್ನಟ್ಟಿದ ಪುಂಡಾನೆ – ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳಾ ಪಿಎಸ್‌ಐ
ಚಮನ್ ಹಗ್ಗದಿಂದ ಮುನ್ನಾ ಲಾಲ್ ಅವರ ಕತ್ತು ಹಿಸುಕಿದ್ದಾನೆ. ಬಳಿಕ ಉಸಿರುಗಟ್ಟಿಸಿ ಹಾಗೂ ಖಾಸಗಿ ಅಂಗಕ್ಕೆ ವಿದ್ಯುತ್ ಶಾಕ್ ನೀಡಿ ಹತ್ಯೆ ಮಾಡಲಾಗಿದೆ. ಬಳಿಕ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಳ್ಳಲು ಮರದ ಕೋಲಿನಿಂದಲೂ ಹಲ್ಲೆ ನಡೆಸಲಾಗಿದೆ ಎಂದು ದಕ್ಷಿಣ ದೆಹಲಿ ಡಿಸಿಪಿ ಅನಂತ್ ಮಿತ್ತಲ್ ತಿಳಿಸಿದ್ದಾರೆ. ಇದನ್ನೂ ಓದಿ: ಮೇಕೆದಾಟು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ
ಈ ಕೃತ್ಯಕ್ಕೆ ಚಮನ್‌ನ ಸಹಚರ ಕಿಶನ್ ಕೂಡ ನೆರವಾಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಕೊಲೆಯ ನಂತರ ಮುನ್ನಾ ಲಾಲ್ ಅವರ ಮೃತದೇಹವನ್ನು ಮನೆಯ ಹೊರಗಿನ ರಸ್ತೆಯಲ್ಲಿ ಬಿಟ್ಟು ಹೋಗಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಮೀನಗಡ ಪಟ್ಟಣ ಪಂಚಾಯತ್ ಮೇಲೆ ಲೋಕಾ ದಾಳಿ
ದರೋಡೆ ನಡೆದಂತೆ ನಾಟಕ:
ಕೊಲೆಯ ಬಳಿಕ ನಾಜಿಯಾ ಪೊಲೀಸರನ್ನು ದಾರಿ ತಪ್ಪಿಸಲು ಮನೆಯಲ್ಲಿ ದರೋಡೆ ನಡೆದಿರುವಂತೆ ನಾಟಕವಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳರು ಮನೆಗೆ ನುಗ್ಗಿ ಪತಿಯನ್ನು ಕೊಲೆ ಮಾಡಿದ್ದಾರೆ. ತಾನು ಆ ವೇಳೆ ಮಲಗಿದ್ದೆ ಎಂದು ಆಕೆ ಪೊಲೀಸರಿಗೆ ಹೇಳಿದ್ದಳು. ಇದನ್ನೂ ಓದಿ: ರಾಜ್ಯದ 174 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಗೋವಾ-ತಮ್ನಾರ್ ವಿದ್ಯುತ್ ಯೋಜನೆಗೆ ಕೇಂದ್ರ ಒಪ್ಪಿಗೆ
ಆದರೆ ನಾಜಿಯಾ ನೀಡಿದ ಹೇಳಿಕೆಯಲ್ಲಿ ಪೊಲೀಸರಿಗೆ ಹಲವು ಅನುಮಾನಾಸ್ಪದ ಅಂಶಗಳು ಕಂಡುಬಂದವು. ಮನೆಯಲ್ಲಿ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಹಾಕಲಾಗಿತ್ತು. ರಕ್ತದ ಕಲೆಗಳನ್ನು ಅಳಿಸಲು ಹಾಗೂ ಸಾಕ್ಷ್ಯಗಳನ್ನು ಮರೆಮಾಚಲು ಪ್ರಯತ್ನಿಸಿರುವುದು ಕೂಡ ತನಿಖೆಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಆ.16ಕ್ಕೆ ಕೊಡಗು ಜಿಲ್ಲೆಗೆ ಡಿಕೆಶಿ ಭೇಟಿ – ಭಾಗಮಂಡಲ, ತಲಕಾವೇರಿಯಲ್ಲಿ ವಿಶೇಷ ಪೂಜೆ
ಮನೆಯ ಹೊರಭಾಗದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿತು. ರಾತ್ರಿ ಸುಮಾರು 1:45ಕ್ಕೆ ಮಾಸ್ಕ್ ಧರಿಸಿದ್ದ ವ್ಯಕ್ತಿಯೊಬ್ಬ ಮನೆಗೆ ಪ್ರವೇಶಿಸಿದ್ದು, ಸುಮಾರು 3:15ಕ್ಕೆ ಹೊರಗೆ ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದನ್ನೂ ಓದಿ: ಓಣಂ ಹಬ್ಬದ ಪ್ರಯುಕ್ತ ಬೆಂಗಳೂರು ಕಂಟೋನ್ಮೆಂಟ್–ಕಣ್ಣೂರು ನಡುವೆ ವಿಶೇಷ ರೈಲು
ಸಿಸಿಟಿವಿ ದೃಶ್ಯಗಳು ಸೇರಿದಂತೆ ಇತರ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಪೊಲೀಸರು ನಾಜಿಯಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಆಕೆ ತಪ್ಪೊಪ್ಪಿಕೊಂಡಿದ್ದು, ಪ್ರಿಯಕರ ಚಮನ್ ಮತ್ತು ಆತನ ಸಹಚರ ಕಿಶನ್ ಜೊತೆ ಸೇರಿ ಪತಿಯನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾಳೆ ಎಂದು ಡಿಸಿಪಿ ತಿಳಿಸಿದ್ದಾರೆ. ಇದನ್ನೂ ಓದಿ: ಮೊಬೈಲ್ ಬಳಸಬೇಡ ಎಂದು ತಾಯಿ ಬುದ್ಧಿವಾದ – ವಿದ್ಯಾರ್ಥಿನಿ ಆತ್ಮಹತ್ಯೆ
ಕೊಲೆಯ ಬಳಿಕ ಪ್ರಿಯಕರನಿಗೆ 20 ಸಾವಿರ ನೀಡಿದ್ದ ಪತ್ನಿ:
ಕೊಲೆ ನಡೆದ ಬಳಿಕ ನಾಜಿಯಾ ತನ್ನ ಪ್ರಿಯಕರ ಚಮನ್‌ಗೆ 20,000 ರೂ. ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪತಿಯನ್ನು ಕೊಲೆ ಮಾಡಲು 5 ಲಕ್ಷ ನೀಡುವುದಾಗಿ ಭರವಸೆ ನೀಡಲಾಗಿತ್ತು ಎನ್ನಲಾಗಿದೆ. ಸದ್ಯ ಪೊಲೀಸರು ನಾಜಿಯಾ, ಚಮನ್ ಮತ್ತು ಕಿಶನ್ ಅವರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದ್ದು, ಕೊಲೆಯ ಹಿಂದಿನ ಸಂಪೂರ್ಣ ಸಂಚು ಹಾಗೂ ಆರೋಪಿಗಳ ಪಾತ್ರದ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: ಗುರುದ್ವಾರದಲ್ಲೇ ಅಕಾಲಿ ದಳ ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಮೇಲೆ ಕಿರ್ಪಾನ್‌ನಿಂದ ದಾಳಿ
22 ವರ್ಷದ ದಾಂಪತ್ಯದಲ್ಲಿ ಬಿರುಕು:
ಮುನ್ನಾ ಲಾಲ್ ಮತ್ತು ನಾಜಿಯಾ ಸುಮಾರು 22 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನಿದ್ದಾನೆ. ಸಾಮಾನ್ಯವಾಗಿ ತಂದೆಯೊಂದಿಗೇ ಇರುತ್ತಿದ್ದ ಮಗ ಘಟನೆ ನಡೆದ ರಾತ್ರಿ ಕನ್ವರ್ ಯಾತ್ರೆಯಲ್ಲಿ ಭಾಗವಹಿಸಲು ತೆರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ-ಮಗ
ಮುನ್ನಾ ಲಾಲ್ ಆಸ್ತಿ ವ್ಯವಹಾರ ನಡೆಸುತ್ತಿದ್ದರು ಮತ್ತು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದರು ಎನ್ನಲಾಗಿದೆ. ಆದರೆ ಪತಿ ತನಗೆ ಹಣ ನೀಡುತ್ತಿಲ್ಲ ಎಂದು ನಾಜಿಯಾ ಅಸಮಾಧಾನ ವ್ಯಕ್ತಪಡಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗೆ ಟ್ವಿಸ್ಟ್ – ಗೆಳೆಯನಿಂದಲೇ ನಟಿಗೆ ಬಿಗ್ ಶಾಕ್
ದಂಪತಿಯ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ದಾಂಪತ್ಯ ಜೀವನದ ಅಸಮಾಧಾನ, ಹಣಕಾಸಿನ ವಿಚಾರಗಳು ಹಾಗೂ ನಾಜಿಯಾಗೆ ಚಮನ್ ಜೊತೆ ಇದ್ದ ಎನ್ನಲಾದ ವಿವಾಹೇತರ ಸಂಬಂಧವು ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಮೂವರು ಆರೋಪಿಗಳನ್ನೂ ಬಂಧಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಕ್ಯಾಬ್ ಆ್ಯಪ್‌ಗಳಲ್ಲಿ Pre Ride Tip ಆಯ್ಕೆಗೆ ಬ್ರೇಕ್ – ರೈಡ್ ಮುಗಿದ ಮೇಲಷ್ಟೇ ಟಿಪ್ಸ್ ಪಾವತಿಸಿ

