ಬೆಂಗಳೂರು: ನಗರದ ಉದ್ಯಮಿಯೋರ್ವರನ್ನು ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಸ್ಯಾಂಡಲ್‍ವುಡ್‍ನ ಉದಯೋನ್ಮುಖ ನಟನೊಬ್ಬನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.
Advertisement
ಬಂಧಿತ ಆರೋಪಿಯನ್ನು ಜೆಪಿ ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ ಎಂದು ಗುರುತಿಸಲಾಗಿದೆ. ಯುವ ಮಿಸ್ಟರ್ ಭೀಮರಾವ್ ಎಂಬ ಸಿನಿಮಾಕ್ಕೆ ನಾಯಕನಾಗಿ ನಟಿಸಿದ್ದ. ಇದೀಗ ಹನಿಟ್ರ್ಯಾಪ್ ಆರೋಪದಡಿ ಪೊಲೀಸರ ಅತಿಥಿಯಾಗಿದ್ದಾನೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ನಾಪತ್ತೆಯಾದ ಲೋಕೇಶ್
Advertisement
ಏನಿದು ಘಟನೆ:
ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಯೊಂದಿಗೆ ಯುವ ಇಬ್ಬರು ಯುವತಿಯರ ಹೆಸರು ಬಳಸಿಕೊಂಡು ಚಾಟ್ ಮಾಡಿದ್ದ. ಉದ್ಯಮಿಗೆ ಇತ್ತೀಚೆಗೆ ಇಬ್ಬರು ಯುವತಿಯರು ಪರಿಚಯವಾಗಿದ್ದರು. ಉದ್ಯಮಿ ಕೂಡ ಪರಿಚಯದ ಯುವತಿರೆಂದು ಸಲುಗೆಯಿಂದ ಚಾಟ್ ಮಾಡಿದ್ದರು. ಆ ಬಳಿಕ ಅಶ್ಲೀಲ ಚಾಟ್ ಆರೋಪದಡಿ ಯುವ ನಾವು ಕ್ರೈಮ್ ಪೊಲೀಸರೆಂದು ಭೇಟಿಯಾಗಿ ಬೆದರಿಕೆ ಹಾಕಿದ್ದಾನೆ.
Advertisement
Advertisement
ಯುವತಿಯರ ಜೊತೆಗೆ ಅಶ್ಲೀಲ ಚಾಟ್ ಬಗ್ಗೆ ನಿಮ್ಮ ಮೇಲೆ ಕೇಸ್ ದಾಖಲಾಗಿದೆ. ಈ ಕೇಸ್ ಮುಂದುವರಿಸದಿರಲು ಹಣ ಕೊಡಲೇಬೇಕೆಂದು ಕೇಳಿದ್ದಾನೆ. ಮೊದಲಿಗೆ ಐವತ್ತು ಸಾವಿರ ರೂ. ನಂತರ ಬ್ಯಾಂಕ್‍ನಿಂದ ಮೂರು ಲಕ್ಷ ರೂ. ಡ್ರಾ ಮಾಡಿಸಿಕೊಂಡಿದ್ದ. ಹಂತ ಹಂತವಾಗಿ ಒಟ್ಟು ಹದಿನಾಲ್ಕು ಲಕ್ಷಕ್ಕೂ ಹೆಚ್ಚಿನ ಹಣವನ್ನು ಯುವ ಪಡೆದಿದ್ದ ಎಂದು ಉದ್ಯಮಿ ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ : ರಾಕೇಶ್ ಬಳಸಿ ಬಿಸಾಕಿರೋ ಟಿಶ್ಯೂ ಎಂದ ಸೋನು ಶ್ರೀನಿವಾಸ್ ಗೌಡ
ಯವ ಒಂದು ಬಾರಿ ಹಲಸೂರು ಗೇಟ್ ಬಳಿ ಬಂದು ಹಣ ಪಡೆದಿದ್ದ. ಆ ಬಳಿಕ ಉದ್ಯಮಿಗೆ ಅನುಮಾನ ಬಂದು ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ ಬಳಿಕ ಕೇಸ್ ದಾಖಲಿಸಿಕೊಂಡು ದೂರಿನ ಅನ್ವಯ ಆರೋಪಿ ಯವನನ್ನು ಹಲಸೂರು ಗೇಟ್ ಪೊಲೀಸರು ಇದೀಗ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.