– ಪ್ರೆಸ್ ಮೀಟ್‌ನಲ್ಲೇ ಬಿಜೆಪಿ ರಾಜೀನಾಮೆ, ಭವಿಷ್ಯದ ನಿರ್ಣಯ ಪ್ರಕಟ ಸಾಧ್ಯತೆ
ಚೆನ್ನೈ: ʻಅಣ್ಣಾಮಲೈʼ (Annamalai) ತಮಿಳುನಾಡಿನಲ್ಲಿ ಬಿಜೆಪಿಯ (BJP) ಹಿಂದುತ್ವದ ರಾಜಕಾರಣದಲ್ಲಿ ಅತ್ಯಂತ ಎತ್ತರದ ಹೆಸರು. ಆದರೆ ಅದೇ ತಮಿಳುನಾಡಿನಲ್ಲಿ ಈಗ ಅಣ್ಣಾಮಲೈ ಬಿಜೆಪಿಯಿಂದ ದೂರವಾಗುತ್ತಿದ್ದಾರೆ. ಜೂನ್ 5 ರಂದು (ನಾಳೆ) ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸುವ ನಿರೀಕ್ಷೆಯಿದೆ.
Tomorrow at 12 Noon, I eagerly look forward to interacting with you all on social media to share my thoughts and have an open, heart-to-heart conversation. https://t.co/CuLt12IkQwhttps://t.co/G6dY3wufzqhttps://t.co/rfti0J7ZsLhttps://t.co/xcD9EKje7B
— K.Annamalai (@annamalai_k) June 4, 2026
ನಾಳೆ ಮಧ್ಯಾಹ್ನ 12 ಗಂಟೆಗೆ ಚೆನ್ನೈನಲ್ಲಿ (Chennai) ಸುದ್ದಿಗೋಷ್ಠಿ ಕರೆದಿರುವ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಅಣ್ಣಾಮಲೈ, ಅಲ್ಲಿಯೇ ರಾಜೀನಾಮೆ ಹಾಗೂ ಭವಿಷ್ಯದ ನಿರ್ಣಯ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. ನನ್ನ ಆಲೋಚನೆಗಳನ್ನು ಹಂಚಿಕೊಳ್ಳಲು ಮತ್ತು ನಿಮ್ಮೆಲ್ಲರೊಂದಿಗೆ ಮುಕ್ತ ಸಂಭಾಷಣೆ ನಡೆಸಲು ಎದುರು ನೋಡುತ್ತಿದ್ದೇನೆ ಎಂದು ಎಕ್ಸ್ ಪೋಸ್ಟ್‌ನಲ್ಲೂ ಅಣ್ಣಾಮಲೈ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಭಯ ಹುಟ್ಟಿಸಲು ರಾಹುಲ್ ಗಾಂಧಿಯಿಂದ `ಆರ್ಥಿಕ ಸುನಾಮಿ’ ಹೇಳಿಕೆ: ಬಿಜೆಪಿ ಆರೋಪ
2 ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಿ ಬಿಜೆಪಿಯ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗ್ತಿದೆ. ಬಿ.ಎಲ್ ಸಂತೋಷ್ (BL Santhosh) ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಇದೇ ವೇಳೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನ ಅಣ್ಣಾಮಲೈ ಭೇಟಿಯಾಗಿ ಪ್ರತ್ಯೇಕ ಸಭೆ ನಡೆಸಿದ್ದರು. ಸಭೆಯಲ್ಲೇ ಪಕ್ಷ ತೊರೆಯುವ ನಿರ್ಧಾರವನ್ನ ಅಣ್ಣಾಮಲೈ ಪ್ರಕಟಿಸಿದ್ದರು ಎನ್ನಲಾಗಿದೆ. ಆದ್ರೆ ಅಗತ್ಯವಿದ್ದರೇ ಯಾವಾಗಲಾದರೂ ಒಟ್ಟಿಗೆ ಕೆಲಸ ಮಾಡಲು ಸಿದ್ಧವಿರುವುದಾಗಿಯೂ ವರಿಷ್ಠರಿಗೆ ಭರವಸೆ ನೀಡಿದ್ದರು.
ರಾಜ್ಯಸಭೆ ಟಿಕೆಟ್ ಆಫರ್ ತಿರಸ್ಕಾರ
ಸಭೆಯ ಬಳಿಕ ಬಿಜೆಪಿ ನಾಯಕರು ಅಣ್ಣಾಮಲೈ ಅವರನ್ನ ಮತ್ತೆ ಕರೆಸಿದ್ದರು. ಪಕ್ಷ ಬಿಡದಂತೆ ತಡೆಯುವ ಪ್ರಯತ್ನವೂ ನಡೆದಿತ್ತು. ಅದಕ್ಕಾಗಿ ರಾಜ್ಯಸಭಾ ಟಿಕೆಟ್ ಜೊತೆಗೆ ಸಚಿವ ಸ್ಥಾನದ ಆಫರ್ ಅನ್ನು ನೀಡಲಾಗಿತ್ತು. ಆದಾಗ್ಯೂ ಅಣ್ಣಾಮಲೈ ಈ ಆಫರ್ ಅನ್ನು ತಿರಸ್ಕರಿಸಿ ತಮಿಳುನಾಡಿಗೆ ಮರಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಂಪರ್ಕದಲ್ಲಿ 20 ಟಿಎಂಸಿ ಸಂಸದರು – ಒಡೆದು ಹೋಳಾಗುತ್ತಾ ದೀದಿ ಪಕ್ಷ?

ನಾಳೆ ಚೆನ್ನೈನಲ್ಲಿ ಸುದ್ದಿಗೋಷ್ಠಿ ಕರೆದಿರುವ ಅಣ್ಣಾಮಲೈ, ಅದೇ ಪ್ರೆಸ್‌ಮೀಟ್‌ನಲ್ಲಿ ರಾಜೀನಾಮೆಯನ್ನು ಅಧಿಕೃತವಾಗಿ ಪ್ರಕಟಿಸುವ ಹಾಗೂ ಮುಂದಿನ ರಾಜಕೀಯ ನಡೆಯ ಬಗ್ಗೆ ನಿರ್ಣಯ ತಿಳಿಸುವ ನಿರೀಕ್ಷೆಯೂ ಇದೆ. ಈ ಮಧ್ಯೆ ʻಸಿಂಗಂʼ ತಮ್ಮದೇ ಆದ ಪಕ್ಷ ಕಟ್ಟಲು ನಿರ್ಧಾರಿಸಿದ್ದಾರೆ ಅನ್ನೋ ಮಾತುಗಳು ದಟ್ಟವಾಗಿವೆ. ಇದನ್ನೂ ಓದಿ: ಸೌರಶಕ್ತಿಯಲ್ಲಿ ಅಮೆರಿಕಾವನ್ನೇ ಮೀರಿಸಿ, ಜಾಗತಿಕವಾಗಿ 2ನೇ ಸ್ಥಾನಕ್ಕೇರಿದ ಭಾರತ – ಪ್ರಹ್ಲಾದ್ ಜೋಶಿ
ಆರ್‌ಎಸ್‌ಎಸ್ ನಿಲುವೇನು?
ತಮಿಳುನಾಡಿನಲ್ಲಿ ಅಣ್ಣಾಮಲೈ ಅವರು ಬಿಜೆಪಿಯ ಹಿಂದುತ್ವ ರಾಜಕಾರಣ ಬೆಳೆಸುವಲ್ಲಿ ಅತ್ಯಂತ ಪ್ರಮುಖ ಪಾತ್ರನಿರ್ವಹಿಸಿದ್ದಾರೆ. ದ್ರಾವಿಡ ರಾಜಕಾರಣದ ನೆಲದಲ್ಲಿ ಹಿಂದುತ್ವ ಸಿದ್ಧಾಂತ ನೆಲೆಯೂರುವಂತೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಅಣ್ಣಾಮಲೈ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಅಣ್ಣಾಮಲೈ ಅವರನ್ನು ಬಿಜೆಪಿ ಕಳೆದುಕೊಳ್ಳಬಾರದು ಎಂಬುದು ಆರ್‌ಎಸ್‌ಎಸ್ ನಿಲುವಾಗಿದೆ.
