ಮಾಸ್ಕೋ: ರಷ್ಯಾದ ಸಂಶೋಧಕಿಯೊಬ್ಬರು (Russian Researcher) ಮಾರಕ ಪ್ಲೇಗ್‌ಗೆ (Plague) ಬಲಿಯಾಗಿದ್ದಾರೆ. ಪ್ರಕರಣ ವರದಿಯಾದ ಬೆನ್ನಲ್ಲೇ ಐದು ಆಸ್ಪತ್ರೆಗಳನ್ನು ಬಂದ್ ಮಾಡಲಾಗಿದ್ದು, ನೂರಾರು ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಸೈಬೀರಿಯನ್ ಪ್ರದೇಶವಾದ ಇರ್ಕುಟ್ಸ್ಕ್‌ನಲ್ಲಿ 28 ವರ್ಷದ ಪ್ರಯೋಗಾಲಯ ತಂತ್ರಜ್ಞೆ ದಾರಿಯಾ ಶಿಪಿಲೋವಾ ಅವರು ಪ್ಲೇಗ್‌ನಿಂದ ಮೃತಪಟ್ಟಿದ್ದಾರೆ. ಶೆಲೆಖೋವ್‌ನಲ್ಲಿರುವ ‘ಆಂಟಿ-ಪ್ಲೇಗ್ ರಿಸರ್ಚ್ ಇನ್‌ಸ್ಟಿಟ್ಯೂಟ್’ನಲ್ಲಿ ಪ್ರಕರಣ ವರದಿಯಾಗಿದೆ. ಇದನ್ನೂ ಓದಿ: ಇಸ್ರೇಲ್‌ನೊಂದಿಗೆ ಫ್ಲೈದುಬೈ ಸಿಬ್ಬಂದಿ ಲಿಸ್ಟ್ ಹಂಚಿಕೊಂಡಿದ್ದರೂ ಒಮನ್ ಪೈಲಟ್‌ಗೆ ಕ್ಲಿಯರೆನ್ಸ್ ಸಿಕ್ಕಿದ್ದು ಹೇಗೆ?
ಪರೀಕ್ಷಾ ಕೊಳವೆಯಿಂದ ಒಡೆದ ಪರಿಣಾಮ ನ್ಯುಮೋನಿಕ್ ಪ್ಲೇಗ್‌ಗೆ ಸಂಶೋಧಕಿ ತುತ್ತಾಗಿ ಮೃತಪಟ್ಟಿದ್ದಾರೆ. ಇದು ಅತ್ಯಂತ ವೇಗವಾಗಿ ಹರಡುವ ರೋಗವಾಗಿದ್ದು, ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಮಾರಣಾಂತಿಕವಾಗಬಲ್ಲದು.
ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸುವಾಗ ಜೀವಂತ ಬ್ಯಾಕ್ಟೀರಿಯಾವನ್ನು ಹೊಂದಿದ್ದ ಪರೀಕ್ಷಾ ಕೊಳವೆ (test tube) ಆಕಸ್ಮಿಕವಾಗಿ ಒಡೆದಿತ್ತು. ಶಿಪಿಲೋವಾ ಅವರನ್ನು ಸೆಪ್ಟೆಂಬರ್ 29 ರಂದು ತೀವ್ರ ನ್ಯುಮೋನಿಯಾ ಲಕ್ಷಣಗಳೊಂದಿಗೆ ಶೆಲೆಖೋವ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅ.1 ರಂದು ಮೃತಪಡುವ ಮೊದಲು ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಇದನ್ನೂ ಓದಿ: Flydubai Flight Case | ಉಗ್ರ ಬಿನ್‌ಲಾಡೆನ್ ಆರಾಧಕನಾಗಿದ್ದ ಹಾಮಾಮ್ – ವಿಚಾರಣೆ ವೇಳೆ ರಹಸ್ಯ ಬಯಲು
ಸಂಶೋಧಕಿಯ ಸಂಪರ್ಕಕ್ಕೆ ಬಂದಿರಬಹುದಾದ 200ಕ್ಕೂ ಹೆಚ್ಚು ಜನರನ್ನು ಈಗ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಇರ್ಕುಟ್ಸ್ಕ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಕೂಡ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

