ಟೆಲ್ ಅವಿವ್: ಫ್ಲೈ ದುಬೈ ವಿಮಾನ ಪತನ ಯತ್ನ ಪ್ರಕರಣಕ್ಕೆ (Fly Dubai Flight)ಸಂಬಧಿಸಿದಂತೆ ಬಂಧಿತ ಸಹ ಪೈಲಟ್ (29)ಹಮಾಮ್ ಅಲ್ ಹಮ್ಮಾಮಿಯನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಅಲ್ ಖೈದಾ ನಂಟು ಹೊಂದಿದ್ದ ಹಮಾಮಿ, ಒಸಮಾ ಬಿನ್ ಲಾಡೆನ್ನ ಆರಾಧಕನಾಗಿದ್ದ ಎಂಬ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ.
ಇಸ್ರೇಲ್ನಲ್ಲಿ ವಿಮಾನ ಪತನಗೊಳಿಸುವ ಉದ್ದೇಶ
ಸೌದಿ ಅರೇಬಿಯಾ ಮತ್ತು ಯುಎಇ ಭದ್ರತಾ ಸಂಸ್ಥೆಗಳ ವಿಚಾರಣೆಯ ವೇಳೆ ಹಮ್ಮಾಮಿ, ಇಸ್ರೇಲ್ನಲ್ಲೇ ವಿಮಾನವನ್ನು ಕ್ರ್ಯಾಶ್ ಮಾಡುವುದು ತನ್ನ ಗುರಿಯಾಗಿತ್ತು ಎಂದು ಒಪ್ಪಿಕೊಂಡಿದ್ದಾನೆ. ಈ ದಾಳಿಗೂ ಮುನ್ನ ವಿಮಾನದ ಕಾಕ್ಪಿಟ್ನಲ್ಲಿ ಈತ ಪ್ರಾರ್ಥನೆ ಮಾಡಲು ಎದ್ದು ನಿಂತಿದ್ದ. ಪ್ರಾರ್ಥನೆ ಮುಗಿಯುತ್ತಿದ್ದಂತೆ ಎದ್ದು ನಿಂತು ಏಕಾಏಕಿ ಕ್ಯಾಪ್ಟನ್ ಸ್ಮಿತ್ ಮೇಲೆ ದಾಳಿ ನಡೆಸಿದ್ದಾನೆ. ಕಾಕ್ಪಿಟ್ನಲ್ಲಿದ್ದ ಎಮರ್ಜೆನ್ಸಿ ಕೊಡಲಿಯನ್ನು ತೆಗೆದುಕೊಂಡು ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಹಲ್ಲೆ ನಡೆಸಿದ್ದ.
ವಿಚಾರಣೆಯ ವೇಳೆ ಈತ ಜಾಗತಿಕ ಉಗ್ರ ಸಂಘಟನೆ ಅಲ್ ಖೈದಾ ಸಿದ್ಧಾಂತದಿಂದ ಪ್ರೇರಿತನಾಗಿದ್ದ ಎಂಬುದು ಪತ್ತೆಯಾಗಿದೆ. ಈತನ ಸೋಷಿಯಲ್ ಮೀಡಿಯಾದ ಖಾತೆಗಳನ್ನು ಜಾಲಾಡಿದಾಗ ಉಗ್ರ ಒಸಾಮಾ ಬಿನ್ ಲಾಡೆನ್ನ ಆರಾಧಕ ಎಂಬುದು ಗೊತ್ತಾಗಿದೆ. ಈತ ಕಚೇರಿಗಳಲ್ಲಿ ಯಾವುದೇ ಮಹಿಳಾ ಸಿಬ್ಬಂದಿಗೆ ‘ಶೇಕ್ ಹ್ಯಾಂಡ್’ ಸಹ ಮಾಡುತ್ತಿರಲಿಲ್ಲ ಎಂಬ ಮಾಹಿತಿ ತನಿಖೆಯಿಂದ ತಿಳಿದುಬಂದಿದೆ.ಇದನ್ನೂ ಓದಿ: ಇಂಡಿ ಮೈತ್ರಿಕೂಟದೊಂದಿಗೆ ಕೈಜೋಡಿಸಿದ ವಿಜಯ್ – ಅಧಿಕೃತ ನಿರ್ಧಾರ ಪ್ರಕಟಿಸಿದ ಟಿವಿಕೆ
ಸದ್ಯ ಯುಎಇ ಅಟಾರ್ನಿ ಜನರಲ್ ಹಮದ್ ಸೈಫ್ ಅಲ್-ಶಮ್ಸಿ ಅವರ ನೇತೃತ್ವದ ವಿಶೇಷ ಜಂಟಿ ತನಿಖಾ ತಂಡ (SIT) ಈ ಪ್ರಕರಣದ ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ಯೋಧನ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತ – ನಾಲ್ವರು ದುರ್ಮರಣ

