ಲಕ್ನೋ: ಯೋಧನ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್ವೊಂದು (Ambulence) ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ಉತ್ತರ ಪ್ರದೇಶದ (Uttar Pradesh) ಸುಲ್ತಾನ್ಪುರದಲ್ಲಿ (Sultanpur) ನಡೆದಿದೆ.
ಅಪಘಾತದಲ್ಲಿ ಯೋಧನ ಪುತ್ರ, ಸಹೋದರ, ಸೋದರಳಿಯ ಹಾಗೂ ಅಂಬುಲೆನ್ಸ್ ಚಾಲಕ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಂಡೀಗಢದಿಂದ ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯಲ್ಲಿರುವ ಸ್ವಗ್ರಾಮಕ್ಕೆ ಸೇನೆಯ ಸುಬೇದಾರ್ ಮೇಜರ್ ಸತ್ಯವಾನ್ ಅವರ ಪಾರ್ಥಿವ ಶರೀರ ಅಂಬುಲೆನ್ಸ್ನಲ್ಲಿ ಕೊಂಡೊಯ್ಯಲಾಗುತ್ತಿತ್ತು. ಭಾನುವಾರ ಬೆಳಗ್ಗೆ ಸುಮಾರು 8 ಗಂಟೆಗೆ ಪೂರ್ವಾಂಚಲ್ ಎಕ್ಸ್ಪ್ರೆಸ್ ವೇಯ ಬಳಿ ಹಳಿಯಾಪುರ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ತುಮಕೂರು | ವಿಜಯೇಂದ್ರ ಸಮ್ಮುಖದಲ್ಲೇ ಬಿಜೆಪಿ ಕಾರ್ಯಕರ್ತರ ಕಿತ್ತಾಟ
ಅಪಘಾತದಲ್ಲಿ ಸತ್ಯವಾನ್ ಅವರ ಪುತ್ರ ಗೌರವ್ ಸಿಂಗ್ (28), ಸಹೋದರ ರಾಜನ್ ಚೌಧರಿ (35), ಸೋದರಳಿಯ ರಾಮ್ ಸಮುಜ್ ಸಿಂಗ್ (40) ಹಾಗೂ ಅಂಬುಲೆನ್ಸ್ ಚಾಲಕ ಜಸ್ಪಾಲ್ (30) ಮೃತಪಟ್ಟಿದ್ದಾರೆ. ಗೌರವ್ ಸಿಂಗ್ ಮತ್ತು ಅಂಬುಲೆನ್ಸ್ ಚಾಲಕ ಜಸ್ಪಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರಾಜನ್ ಚೌಧರಿ ಮತ್ತು ರಾಮ್ ಸಮುಜ್ ಸಿಂಗ್ ಅವರನ್ನು ಅಯೋಧ್ಯಾ ಜಿಲ್ಲೆಯ ಪಿಥ್ಲಾ-ಕುಮಾರಗಂಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಿದ್ದರಾಮಯ್ಯ – ಕೆ.ವೆಂಕಟೇಶ್; ಅಕ್ಕಪಕ್ಕ ಕೂತ್ರೂ ಗಪ್ಚುಪ್
ಪೊಲೀಸರ ಪ್ರಕಾರ, ಆಂಬುಲೆನ್ಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಂಬುಲೆನ್ಸ್ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಮೃತ ಸುಬೇದಾರ್ ಮೇಜರ್ ಸತ್ಯವಾನ್ ಅವರು ದಿಯೋರಿಯಾ ಜಿಲ್ಲೆಯ ರುದ್ರಪುರ ಪ್ರದೇಶದ ಗಲಿಯಾ ದುಧೈಲಾ ಗ್ರಾಮದ ನಿವಾಸಿಯಾಗಿದ್ದರು. ಅವರ ಪಾರ್ಥಿವ ಶರೀರ ಕುಟುಂಬಸ್ಥರು ಸ್ವಗ್ರಾಮಕ್ಕೆ ಕೊಂಡೊಯ್ಯುತ್ತಿದ್ದರು. ಅಪಘಾತದ ಬಳಿಕ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ಅಮೆರಿಕ ಉದ್ದೇಶಪೂರ್ವಕವಾಗಿಯೇ ಏಕಾಂಗಿ ಶಕ್ತಿಯಾಗ್ತಿದೆ, ಚೀನಾ ಏರಿಕೆಯತ್ತ ಸಾಗ್ತಿದೆ: ಜೈಶಂಕರ್
ಅಪಘಾತದ ಮಾಹಿತಿ ತಿಳಿದ ಬಳಿಕ ಸುಲ್ತಾನ್ಪುರದ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ಹಾಗೂ ಜಿಲ್ಲಾಧಿಕಾರಿ ಇಂದ್ರಜೀತ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಶಾಸಕಿ ರೂಪಕಲಾ ಶಶಿಧರ್ ಅವರೇ ಬಂದು ಟೇಬಲ್ ಕುಟ್ಟಿ ನೋಡ್ಕೊತೀನಿ ಅಂದ್ರು: ನಾರಾಯಣಸ್ವಾಮಿ

