ಕೋಲಾರ: ಅವತ್ತು ಸದನದಲ್ಲಿ ಸುಬ್ಬಾರೆಡ್ಡಿ ನಾವು ತಮಾಷೆಯಾಗಿ ಮಾತನಾಡುತ್ತಿದ್ದೆವು. ರೂಪಕಲಾ ಶಶಿಧರ್ (Roopakala Shashidhar) ಬಗ್ಗೆ ನಾವು ಮಾತಾಡಿಲ್ಲ. ಏಕಾಏಕಿ ಬಂದು ಟೇಬಲ್ ಗುದ್ದಿ ನಿಮ್ಮನ್ನ ನೋಡಿಕೊಳ್ಳುತ್ತೇನೆ ಎಂದು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ (Bangarpet Narayanaswamy) ಹೇಳಿದ್ದಾರೆ.
ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋಲಾರದಲ್ಲಿ ಬಣ ಬಡಿದಾಟ ಯಾವುದು ಇಲ್ಲ. ಅಭಿವೃದ್ಧಿ ವಿಚಾರವಾಗಿ ಸಿಎಂ ಬಳಿ ಮಾತಾಡಿದ್ದೇವೆ, ಡಿಸಿಸಿ ಬ್ಯಾಂಕ್ ಹಗರಣದ ತನಿಖೆ ಆಗಬೇಕು. ಈಗ ಎಂಡಿಯನ್ನಾಗಿ ವೆಂಕಟೇಶ್ ಅವರನ್ನ ಹಾಕಿದ್ದಾರೆ, ಅವರನ್ನೇ ಮುಂದುವರಿಸಬೇಕು. ಚಿಕ್ಕಬಳ್ಳಾಪುರ ಕೋಲಾರ ಶಾಸಕರು ಒಮ್ಮತದಿಂದ ಅಧಿಕಾರಿ ಪರ ಇದ್ದೇವೆ. ಈಗ ಏಕಾಏಕಿ ಒಬ್ಬ ಶಾಸಕರು ಬಂದು ಆ ಅಧಿಕಾರಿ ಸರಿ ಇಲ್ಲ ಅಂದಿದ್ದಾರೆ ಎಂದು ವಿರೋಧಿ ಬಣಕ್ಕೆ ತಿರುಗೇಟು ನೀಡಿದರು. ಇದನ್ನೂ ಓದಿ: ಸಿಎಂ ಅಂಗಳ ತಲುಪಿದ ಕೋಲಾರ, ಚಿಕ್ಕಬಳ್ಳಾಪುರ `ಕೈ’ ಶಾಸಕರ ಕಿತ್ತಾಟ – ಜೋರಾಯ್ತು ಪ್ರದೀಪ್ ಈಶ್ವರ್ vs ಎಂ.ಸಿ ಸುಧಾಕರ್ ಫೈಟ್
ಆಕೆ ಮಾತಾಡಿದಕ್ಕೂ ನಮಗೂ ಸಂಬಂಧವೇ ಇಲ್ಲ. ಆ ಶಕ್ತಿ ಇದೆ, ಅವರ ತಂದೆ ಸಂಸದರಾಗಿ ಕೇಂದ್ರ ಸಚಿವರಾಗಿದ್ದರು. ಈಗ ಅವರ ತಂದೆ ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ, ರೂಪಕಲಾ ಶಶಿಧರ್ ಎರಡು ಬಾರಿ ಶಾಸಕರಾಗಿದ್ದಾರೆ. ಅವರಿಗೆ ಶಕ್ತಿ ಇದೆ, ಅದಕ್ಕೆ ತಲೆಬಾಗಲೇಬೇಕಲ್ಲವಾ? ನಾವು ಯಾವತ್ತು ಅವರ ಬಣದ ಪರವಾಗಿಲ್ಲ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸಿ – ಜ್ಞಾನೇಶ್ ಕುಮಾರ್ ವಿರುದ್ಧ ಮುಂಬೈನಲ್ಲಿ ಠಾಕ್ರೆ ಸಹೋದರರಿಂದ ಪ್ರತಿಭಟನೆ

