– ಸಿದ್ದರಾಮಯ್ಯ, ಮಹದೇವಪ್ಪ ನಡುವೆ ಮುನಿಸು
ಮೈಸೂರು: ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಸಿದ್ದರಾಮಯ್ಯ (Siddaramaiah) ಹಾಗೂ ಅವರ ಆಪ್ತರಾಗಿದ್ದ ಮಾಜಿ ಸಚಿವ ಕೆ.ವೆಂಕಟೇಶ್ (K Venkatesh) ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿದ್ದ ಕೆ.ವೆಂಕಟೇಶ್, ಕಳೆದ ಕೆಲ ದಿನಗಳಿಂದ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ ಇದೀಗ ಮೈಸೂರಿನಲ್ಲಿ (Mysuru) ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೈಸೂರು ಜಿಲ್ಲಾ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಹಾಗೂ ಕೆ.ವೆಂಕಟೇಶ್ ಇಬ್ಬರೂ ಭಾಗಿಯಾಗಿದ್ದರು. ಅಕ್ಕಪಕ್ಕ ಕುಳಿತಿದ್ದರೂ ಮಾತಿಲ್ಲ, ಕಥೆಯಿಲ್ಲ. ಇದನ್ನೂ ಓದಿ: ಅಮೆರಿಕ ಉದ್ದೇಶಪೂರ್ವಕವಾಗಿಯೇ ಏಕಾಂಗಿ ಶಕ್ತಿಯಾಗ್ತಿದೆ, ಚೀನಾ ಏರಿಕೆಯತ್ತ ಸಾಗ್ತಿದೆ: ಜೈಶಂಕರ್
ಮತ್ತೊಂದೆಡೆ ಮತ್ತೊಬ್ಬ ಮಾಜಿ ಸಚಿವ, ಸಿದ್ದರಾಮಯ್ಯ ಆಪ್ತ ಡಾ.ಹೆಚ್.ಸಿ. ಮಹದೇವಪ್ಪ ಕಾರ್ಯಕ್ರಮಕ್ಕೆ ಗೈರಾಗಿದ್ದು, ಸಿದ್ದು ಜೊತೆಗಿನ ಮುನಿಸು ಮುಂದುವರೆಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಮೈಸೂರಿಗೆ ಬಂದಾಗಲೆಲ್ಲ ಅವರ ಜೊತೆ ಕಾಣಿಸಿಕೊಳ್ಳುತ್ತಿದ್ದ ಮಹದೇವಪ್ಪ, ಸಿದ್ದರಾಮಯ್ಯರಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದನ್ನೂ ಓದಿ: ಶಾಸಕಿ ರೂಪಕಲಾ ಶಶಿಧರ್ ಅವರೇ ಬಂದು ಟೇಬಲ್ ಕುಟ್ಟಿ ನೋಡ್ಕೊತೀನಿ ಅಂದ್ರು: ನಾರಾಯಣಸ್ವಾಮಿ

