ಚೆನ್ನೈ: ಇಬ್ಬರು ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ ಕೊಟ್ಟಿದ್ದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS)ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಇಲುಪ್ಪುರ್ ಬಳಿ ಇಬ್ಬರು ಕ್ರೈಸ್ತ ಸನ್ಯಾಸಿನಿಯರನ್ನು ಧಾರ್ಮಿಕ ಮತಾಂತರದಲ್ಲಿ ತೊಡಗಿದ್ದಾರೆಂದು RSS ಕಾರ್ಯಕರ್ತ ಗಣೇಶ್ ಬಾಬು ಕಿರುಕುಳ ಕೊಡುತ್ತಿದ್ದರು. ಈ ವೇಳೆ ಅವರ ಬಳಿ ಇದ್ದ ಫೋನ್ ಹಾಗೂ ಬೈಕ್ ಕಸಿದುಕೊಂಡಿದ್ದರು. ಈ ಆರೋಪದ ಮೇಲೆ ಇಲುಪ್ಪುರ್ ಪೊಲೀಸರು ಗಣೇಶ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಡಿಕೆಶಿಯನ್ನು ಸಿಎಂ ಮಾಡಲು ಸಿದ್ದರಾಮಯ್ಯ ಬಿಡುತ್ತಾರೆಯೇ: ನಲಪಾಡ್‍ಗೆ ಬಿಜೆಪಿ ಗುದ್ದು
Advertisement
Advertisement
ಈ ಕುರಿತು ವಿವರಿಸಿದ ಪೊಲೀಸರು, ಘಟನೆ ವೇಳೆ ಗಣೇಶ್ ಜೊತೆ 20ರಿಂದ 30 ಮಂದಿ ಇದ್ದರು. ಜನವರಿ 21 ರಂದು ಈ ಘಟನೆ ನಡೆದಿದ್ದು, ಗಣೇಶ್ ಅವರನ್ನು ಶನಿವಾರ ಬಂಧಿಸಲಾಗಿದೆ. ಭಾನುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪ್ರಸ್ತುತ ಆರೋಪಿಯನ್ನು ಅರಂತಂಗಿ ಉಪ ಕಾರಾಗೃಹದಲ್ಲಿ ಇರಿಸಲಾಗಿದೆ. ಆರೋಪಿ ವಿರುದ್ಧ ಮಹಿಳೆಯರ ಕಿರುಕುಳ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Advertisement
ಘಟನೆ ವಿವರ:
ಕ್ರೈಸ್ತ ಸನ್ಯಾಸಿನಿಯರು ತಮಗೆ ಪರಿಚಯವಿದ್ದ ಗರ್ಭಿಣಿಯನ್ನು ಭೇಟಿ ಮಾಡಲು ಹೋಗುತ್ತಿದ್ದಾಗ ಗಣೇಶ್ ಮತ್ತು ತಂಡದವರು ಅವರನ್ನು ತಡೆದಿದ್ದಾರೆ. ಗಣೇಶ್ ಅವರ ಗುಂಪು ಸನ್ಯಾಸಿನಿಯರನ್ನು, ನೀವು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಬಂದಿದ್ದೀರಾ ಎಂದು ಅವರ ಬಳಿ ಇದ್ದ ಮೊಬೈಲ್ ಮತ್ತು ಬೈಕ್ ಅನ್ನು ಕಸಿದುಕೊಂಡಿದ್ದಾರೆ. ಆದರೆ ಇದು ನಿಜವಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಮವಸ್ತ್ರದಲ್ಲಿ ಕಾಲೇಜಿಗೆ ಬರಲು ನಾಳೆ ಒಂದು ದಿನ ಅವಕಾಶ: ರಘುಪತಿ ಭಟ್ ಎಚ್ಚರಿಕೆ
Advertisement
ಕ್ರೈಸ್ತ ಸನ್ಯಾಸಿನಿಯರು ಪೊಲೀಸರನ್ನು ಸ್ಥಳಕ್ಕೆ ಕರೆಸಿದಾಗ, ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ನಾವು ಫೋನ್ ಮತ್ತು ಬೈಕ್ ಕಿತ್ತುಕೊಂಡಿಲ್ಲ ಎಂದು ವಾದಿಸಿದರು. ನಂತರ ಗಣೇಶ್, ನಾಳೆ ನಾನೇ ಬಂದು ಶರಣಾಗುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಬರಲಿಲ್ಲ. ಪರಿಣಾಮ ಶನಿವಾರ ರಾತ್ರಿ ಗಣೇಶ್‍ನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಗಣೇಶ್‍ನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕೆಲವು ಗುಂಪು, ಕೇಸರಿ ಸ್ಕಾರ್ಫ್‍ಗಳನ್ನು ಧರಿಸಿ ಭಾನುವಾರ ಇಲುಪ್ಪುರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.