ವಾಷಿಂಗ್ಟನ್: ಭಾರತದ ಜನನ ಪ್ರಮಾಣ (Birth Rate) ಗಣನೀಯವಾಗಿ ಕುಸಿತವಾಗುತ್ತಿದೆ. ಭಾರತದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಅಗತ್ಯವಿರುವ ಜನಸಂಖ್ಯೆಗಿಂತ ಸಂತಾನೋತ್ಪತ್ತಿಯ ದರ ಕಡಿಮೆಯಾಗಿದೆ ಎಂದು ಖ್ಯಾತ ಉದ್ಯಮಿ ಎಲಾನ್ ಮಸ್ಕ್ (Elon Musk) ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಎಲಾನ್ ಮಸ್ಕ್, ಭಾರತದಲ್ಲಿ ಜನನ ಪ್ರಮಾಣದ ದರ ಕುಸಿತ ಕಂಡಿದೆ. ಭಾರತದ ಜನಸಂಖ್ಯೆಯನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಅಗತ್ಯವಿರುವುದಕ್ಕಿಂತಲೂ ಇಳಿಕೆ ಆಗಿದೆ. ಅದರಲ್ಲೂ ವಿಶೇಷವಾಗಿ ಭಾರತದ ವಿದ್ಯಾವಂತ ಕುಟುಂಬ ಅಥವಾ ಸಮುದಾಯಗಳಲ್ಲಿ ಈ ದರವು ಹಲವು ವರ್ಷಗಳ ಹಿಂದೆಯೇ ಕುಸಿದಿತ್ತು ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: 2028ಕ್ಕೂ ಸಿಎಂ ಆಗಿ ಮುಂದುವರೆಯುವ ಇಂಗಿತ – ಜನರ ಮುಂದೆ ತಮ್ಮ ಆಸೆ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್
ಇತ್ತೀಚಿನ ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಮ್ ವರದಿಯ ಪ್ರಕಾರ, ಭಾರತದ ಒಟ್ಟು ಸಂತಾನೋತ್ಪತ್ತಿ ಪ್ರಮಾಣ 2.1 ರಿಂದ 1.9ಕ್ಕೆ ಇಳಿಕೆ ಕಂಡಿದೆ. ಸಾಮಾನ್ಯವಾಗಿ ಒಂದು ದೇಶದ ಜನಸಂಖ್ಯೆ ಮುಂದಿನ ಪೀಳಿಗೆಗೆ ಸಮಾನವಾಗಿ ಮುಂದುವರಿಯಬೇಕಾದರೆ ಒಬ್ಬ ಮಹಿಳೆಗೆ ಸರಾಸರಿ 2.1 ಮಕ್ಕಳಾಗಬೇಕಾಗುತ್ತದೆ. ಇದನ್ನು ಬದಲಿ ಸಂತಾನೋತ್ಪತ್ತಿ ಮಟ್ಟ ಎನ್ನಲಾಗುತ್ತದೆ. ಆದರೆ ಈಗ ದೇಶದ ಸರಾಸರಿ ಈ ಮಟ್ಟಕ್ಕಿಂತ ಇಳಿಕೆಯಾಗಿರುವುರಿಂದ ಮುಂದಿನ ದಿನಗಳಲ್ಲಿ ಜನಸಂಖ್ಯೆಯ ಬೆಳವಣಿಗೆ ಕುಂಠಿತಗೊಳ್ಳಲಿದೆ. ಸದ್ಯಕ್ಕೆ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಜಾರ್ಖಂಡ್ ಕೇವಲ ಆರು ರಾಜ್ಯಗಳಲ್ಲಿ ಮಾತ್ರ ಜನನ ಪ್ರಮಾಣ ನಿಗದಿತ ಮಟ್ಟಕ್ಕಿಂತ ಹೆಚ್ಚಾಗಿದೆ ಉಳಿದೆಲ್ಲಾ ರಾಜ್ಯಗಳಲ್ಲಿ ಇದು ತೀವ್ರವಾಗಿ ಕುಸಿತವಾಗಿದೆ ಎಂದು ತಿಳಿಸುವ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಧಾರಾಕಾರ ಮಳೆಗೆ ಕುಸಿದು ಬಿದ್ದ ಮನೆ: ಮಾಲೀಕರ ಪ್ರಾಣ ಉಳಿಸಿದ ಸೂಪರ್ ಕ್ಯಾಟ್!
India’s birth rate has fallen below replacement.
Among those most educated, India’s birth rate fell below replacement many years ago. https://t.co/RsWf0PK6wx
— Elon Musk (@elonmusk) June 6, 2026
ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ವರದಿ ಕೂಡ ಭಾರತದ ಈ ಜನಸಂಖ್ಯಾ ಬದಲಾವಣೆಯನ್ನು ಖಚಿತಪಡಿಸಿದೆ. ಸದ್ಯಕ್ಕೆ ಭಾರತ 146 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯೊಂದಿಗೆ ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಇದರ ಹೊರತಾಗಿ ಭಾರತ ಇತ್ತೀಚಿನ ವರ್ಷಗಳಲ್ಲಿ ಸಣ್ಣ ಕುಟುಂಬ ಮತ್ತು ಕಡಿಮೆ ಮಕ್ಕಳನ್ನು ಹೊಂದುವ ಸಂಪ್ರದಾಯದತ್ತ ಹೆಜ್ಜೆ ಇಡುತ್ತಿದೆ. ಇದು ಹೀಗೆಯೇ ಮುಂದುವರಿದರೆ ಭವಿಷ್ಯದಲ್ಲಿ ಯುವಜನರ ಸಂಖ್ಯೆ ಕಡಿಮೆಯಾಗಿ ವೃದ್ಧರ ಸಂಖ್ಯೆ ಹೆಚ್ಚಾಗಲಿದೆ. ಇದು ದೇಶದ ದುಡಿಯುವ ಕೈಗಳ ಕೊರತೆಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೇ, ಪಿಂಚಣಿ ಮತ್ತು ಆರೋಗ್ಯ ವ್ಯವಸ್ಥೆಯ ಮೇಲೆ ಕೂಡ ಭಾರೀ ಒತ್ತಡ ಉಂಟುಮಾಡಬಹುದು ಎಂದು ತಜ್ಙರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ಡಿಸಿಎಂ ಪರಮೇಶ್ವರ್ ಭೇಟಿ – ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ
ಸಾಮಾನ್ಯವಾಗಿ ಹಲವರು ಜನನ ದರ ಮತ್ತು ಸಂತಾನೋತ್ಪತ್ತಿ ದರ ಎರಡನ್ನೂ ಒಂದೇ ಎಂದು ಭಾವಿಸುತ್ತಾರೆ. ಆದರೆ ಇವೆರಡರ ನಡುವೆ ವ್ಯತ್ಯಾಸವಿದೆ. ಜನನ ದರ ಎಂದರೆ ಒಂದು ವರ್ಷದಲ್ಲಿ ಪ್ರತಿ ಸಾವಿರ ಜನರಿಗೆ ಜನಿಸುವ ಮಕ್ಕಳ ಸಂಖ್ಯೆಯಾಗಿದೆ. ಆದರೆ ಸಂತಾನೋತ್ಪತ್ತಿ ದರ ಎಂದರೆ ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಪಡೆಯಬಹುದಾದ ಸರಾಸರಿ ಮಕ್ಕಳ ಸಂಖ್ಯೆಯನ್ನು ಸೂಚಿಸುತ್ತದೆ. ಈ ಸಂತಾನೋತ್ಪತ್ತಿ ದರ ಸತತವಾಗಿ ಇಳಿಕೆಯಾಗುತ್ತಿರುವುದರಿಂದಲೇ, ದೇಶದಲ್ಲಿ ಒಟ್ಟಾರೆ ಜನನ ದರ ಕಡಿಮೆಯಾಗುತ್ತಿದ್ದು, ಭಾರತದ ಜನಸಂಖ್ಯೆ ಇಳಿಕೆ ಹಂತಕ್ಕೆ ತಲುಪುತ್ತಿದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಮಳೆ ಅವಾಂತರ – KEB ಘಟಕಕ್ಕೆ ನುಗ್ಗಿದ ನೀರು, ಇಡೀ ನಗರಕ್ಕೆ ಕರೆಂಟ್ ಕಟ್
