– 499 ರೂ.ಗಿಂತ ಕಡಿಮೆ ಬೆಲೆಗೆ ಖರೀದಿ ಮಾಡಿ
ಬೆಂಗಳೂರು: ಯುವಜನರಿಗಾಗಿ ಮಾಡಿರುವಂಥ ಫ್ಯಾಷನ್ ಬ್ರ್ಯಾಂಡ್ ರಿಲಯನ್ಸ್ ರಿಟೇಲ್‌ನ (Reliance Retail) ‘ಯೂಸ್ಟಾ’ವನ್ನು ಈಚೆಗೆ ಬೆಂಗಳೂರಿನಲ್ಲಿ ತೆರೆಯಲಾಗಿದೆ. ಕೋರಮಂಗಲದಲ್ಲಿ ಮಳಿಗೆ ಆರಂಭಿಸಲಾಗಿದೆ.
Advertisement
Advertisement
Advertisement
ಇದರೊಂದಿಗೆ ತುಂಬ ವೇಗವಾಗಿ ವಿಸ್ತರಣೆಯನ್ನು ಮುಂದುವರಿಸಿದಂತೆ ಆಗಿದೆ. ಈ ಹೊಸದಾದ ಮಳಿಗೆ ತೆರೆಯುವುದರ ಮೂಲಕ ಯೂಸ್ಟಾ ಒಂದು ಚಲನೆ ಪಡೆದುಕೊಂಡಿದ್ದು, ಭಾರತದಾದ್ಯಂತ ಯುವಜನರ ಸ್ಟೈಲ್‌ಗೆ ಪ್ರಾಧಾನ್ಯ ನೀಡಿ, ಗ್ರಾಹಕರಿಗೆ ಬೇಕಾದದ್ದನ್ನು ನೀಡುತ್ತಿದೆ. ಹೋಲಿಕೆ ಮಾಡುವುದಕ್ಕೆ ಸಾಧ್ಯವಿಲ್ಲದಷ್ಟು ಕಡಿಮೆ ಬೆಲೆಗೆ ಹೊಚ್ಚ ಹೊಸ ಫ್ಯಾಷನ್ ದಿರಿಸುಗಳನ್ನು ನೀಡುವುದಕ್ಕೆ ಯೂಸ್ಟಾ (Yousta) ಹೆಸರಾಗಿದೆ. ಯುವಜನರಲ್ಲಿ ಈ ಬ್ರ್ಯಾಂಡ್ ಬಹಳ ಅಚ್ಚುಮೆಚ್ಚಾಗಿದೆ. ಅದಕ್ಕೆ ಮುಖ್ಯ ಕಾರಣ ಆಗಿರುವುದು ರೋಮಾಂಚಕವಾದ ಸ್ಟೈಲ್ ಮತ್ತು ವ್ಯಕ್ತಿತ್ವಕ್ಕೆ ಒಪ್ಪುವ ರೀತಿಯಲ್ಲಿ ಇರುವಂಥ ಉಡುಪುಗಳು. ಈ ಎರಡರ ಸಮಿಶ್ರಣವನ್ನು ಕಾಣಬಹುದಾಗಿದೆ. ಇದನ್ನೂ ಓದಿ: Fashion Tips| ಹೆಣ್ಣಿಗೆ ಸೀರೆ ಯಾಕೆ ಅಂದ?- ನಾರಿಮಣಿಯರ ಗಮನ ಸೆಳೆದ ಬನಾರಸ್ ಸೀರೆ
Advertisement
ಈ ಮಳಿಗೆ ಉದ್ಘಾಟನಾ ಸಮಾರಂಭದಲ್ಲಿ ರಿಲಯನ್ಸ್ ರಿಟೇಲ್‌ನ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಅಧ್ಯಕ್ಷ ಹಾಗೂ ಸಿಇಒ ಅಖಿಲೇಶ್ ಪ್ರಸಾದ್ ಅವರು ಬ್ರ್ಯಾಂಡ್‌ನ ಇತ್ತೀಚಿನ ಸಂಗ್ರಹವನ್ನು ಅನಾವರಣಗೊಳಿಸಿದರು. ಯುವಜನರ ಸ್ಟೈಲ್ ಅಭಿರುಚಿಗೆ ಇರುವಂಥ ಯೂಸ್ಟಾ ಬ್ರ್ಯಾಂಡ್ ಸ್ಥಾನವನ್ನು ಖಚಿತಪಡಿಸಿದರು. ‘ಯೂಸ್ಟಾ ಕೈಗೆಟುಕುವ ಬೆಲೆಯ ಆಫರ್ ಜೊತೆಗೆ ಯುವ ಫ್ಯಾಷನ್ ಲೋಕದಲ್ಲಿ ಬಿರುಗಾಳಿ ರೀತಿಯಲ್ಲಿ ತನ್ನ ಆನ್-ಟ್ರೆಂಡ್ ಉಡುಪುಗಳನ್ನು ತಂದಿದೆ. ಬೆಂಗಳೂರು ಯುವ ಶಕ್ತಿ ಮತ್ತು ಸೃಜನಶೀಲತೆಯ ಕೇಂದ್ರವಾಗಿದ್ದು, ಈ ಮಳಿಗೆಯು ಫ್ಯಾಷನ್‌ನ ಭವಿಷ್ಯವನ್ನು ರೂಪಿಸುವ ಟ್ರೆಂಡ್‌ಸೆಟರ್‌ಗಳಿಗೆ ಪ್ರಮುಖ ತಾಣವಾಗಲಿದೆ. ಇದು ಕೇವಲ ನಮ್ಮ ಬೆಳವಣಿಗೆ ಗುರುತಿಸುವುದಷ್ಟೇ ಅಲ್ಲ, ಭಾರತದಲ್ಲಿ ಯುವ ಫ್ಯಾಷನ್ ಅನ್ನು ಮರುವ್ಯಾಖ್ಯಾನಿಸುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ’ ಎಂದು ಪ್ರಸಾದ್ ಹೇಳಿದರು. ಮಾತು ಮುಂದುವರಿಸಿದ ಅವರು, ಯುಸ್ಟಾ ದೇಶಾದ್ಯಂತ ಯುವ ಫ್ಯಾಷನ್ ಉತ್ಸಾಹಿಗಳಿಗೆ ಬಲ ತುಂಬುವ ಜೊತೆಗೆ ತನ್ನ ವಿಸ್ತರಣೆಯನ್ನು ಮುಂದುವರಿಸಲು ಸಿದ್ಧವಾಗಿದೆ ಎಂದರು.
27 ನಗರಗಳಲ್ಲಿ ಮಳಿಗೆಗಳನ್ನು ಹೊಂದಿರುವ ‘ಯುಸ್ಟಾ’, ಯುವ ಫ್ಯಾಷನ್‌ನ ಪ್ರಮುಖ ತಾಣವಾಗಿದೆ. ಈ ಬ್ರ್ಯಾಂಡ್ ಕೇರಳ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಗುಜರಾತ್, ತಮಿಳುನಾಡು, ಉತ್ತರ ಪ್ರದೇಶ, ಕರ್ನಾಟಕ, ಹರಿಯಾಣ ಸೇರಿದಂತೆ ಭಾರತದಾದ್ಯಂತ ಇತರ ನಗರಗಳಲ್ಲಿ ಪ್ರಬಲ ಅಸ್ತಿತ್ವವನ್ನು ಹೊಂದಿದೆ. ಭೌತಿಕ ಮಳಿಗೆಗಳ ಹೊರತಾಗಿ, ಯುಸ್ಟಾದ ಆನ್‌ಲೈನ್ ವ್ಯಾಪ್ತಿಯು ದೇಶದಲ್ಲಿ ಶೇ.98 ರಷ್ಟು ಪಿನ್‌ಕೋಡ್‌ಗಳನ್ನು ಒಳಗೊಂಡಿದ್ದು, ಇದು ರಾಷ್ಟ್ರವ್ಯಾಪಿ ಯುವ ಖರೀದಿದಾರರಿಗೆ ಸಾಟಿಯಿಲ್ಲದಂಥ ಸಂಪರ್ಕವನ್ನು ನೀಡುತ್ತದೆ. ಇದನ್ನೂ ಓದಿ: Winter Fashion: ಚುಮು ಚುಮು ಚಳಿಗೆ ಬೆಚ್ಚನೆಯ ಫ್ಯಾಷನ್
ಯುಸ್ಟಾವು ವಿಶಿಷ್ಟ ‘ಸ್ಟಾರಿಂಗ್ ನೌ’ ಸಂಗ್ರಹಗಳು, ಟ್ರೆಂಡಿ ಉಡುಪುಗಳು, ಯುನಿಸೆಕ್ಸ್ ಶೈಲಿಗಳು ಮತ್ತು ವ್ಯಕ್ತಿತ್ವ-ಆಧಾರಿತವಾದ ಸರಕುಗಳನ್ನು ಒಳಗೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಹೆಚ್ಚಿನ ವಸ್ತುಗಳು 499 ರೂ.ಗಿಂತ ಕಡಿಮೆ ಬೆಲೆಗೆ ದೊರೆಯುತ್ತದೆ. ಹೊಸ ಸ್ಟೋರ್ ಸ್ವಯಂ-ಚೆಕ್‌ಔಟ್ ಆಯ್ಕೆಗಳು ಮತ್ತು ತಡೆರಹಿತ ಶಾಪಿಂಗ್ ಅನುಭವಕ್ಕಾಗಿ ಚಾರ್ಜಿಂಗ್ ಸ್ಟೇಷನ್‌ಗಳಂತಹ ತಾಂತ್ರಿಕವಾಗಿ ಉತ್ಕೃಷ್ಟ ಮಟ್ಟದ ವೈಶಿಷ್ಟ್ಯಗಳನ್ನು ಪರಿಚಯಿಸುತ್ತದೆ.
ಇನ್ನು ತನ್ನ ಸುಸ್ಥಿರತೆಯ ಪ್ರಯತ್ನಗಳ ಭಾಗವಾಗಿ, ಯುಸ್ಟಾ ನಡೆಸುತ್ತಿರುವ ಸಮುದಾಯ-ಚಾಲಿತ ಉಪಕ್ರಮಗಳ ಮೂಲಕ ಗ್ರಾಹಕರಿಗೆ ತಮ್ಮ ಹಳೆಯ ಉಡುಪುಗಳನ್ನು ದಾನ ಮಾಡಲು ಪ್ರೋತ್ಸಾಹಿಸುತ್ತದೆ. ಬಜೆಟ್ ಸ್ನೇಹಿ ಬೆಲೆಗಳಲ್ಲಿ ಉನ್ನತ ಮಟ್ಟದ ಫ್ಯಾಷನ್ ಉಡುಪುಗಳನ್ನು ನೀಡುತ್ತಿರುವಾಗ ಸ್ಥಳೀಯ ವಿಚಾರಗಳನ್ನು ಬೆಂಬಲಿಸಲು ಬ್ರ್ಯಾಂಡ್ ಬದ್ಧವಾಗಿದೆ.
ಬೆಂಗಳೂರಿನ ಗ್ರಾಹಕರು ಕೋರಮಂಗಲ ಸ್ಟೋರ್‌ನಲ್ಲಿ ಹೊಸ ಸಂಗ್ರಹವನ್ನು ನೋಡಬಹುದು, ಖರೀದಿಸಬಹುದು ಅಥವಾ ಅಜಿಯೋ (AJIO) ಮತ್ತು ಜಿಯೋಮಾರ್ಟ್ (JioMart) ಮೂಲಕ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಬಹುದು. ಇತ್ತೀಚಿನ ಫ್ಯಾಷನ್ ಸಂಗ್ರಹಗಳಿಗಾಗಿ ಇನ್‌ಸ್ಟಾಗ್ರಾಮ್ ನಲ್ಲಿ @youstafashion ಅನ್ನು ಫಾಲೋ ಮಾಡಿ. ಇದನ್ನೂ ಓದಿ: ಮಳೆಗಾಲದ ಫ್ಯಾಷನ್‌ಗೆ ಟ್ರೆಂಡ್ ಆಯ್ತು ರೆಟ್ರೊ ಸ್ಪೆಕ್ಟ್ರಮ್ ಡ್ರೆಸ್