ನವದೆಹಲಿ: ನಿಮ್ಮ ಶಕ್ತಿ ಅದಮ್ಯ. ನೀವು ಮನಸ್ಸು ಮಾಡಿದರೆ ಅಭಿವೃದ್ಧಿ ರಥ ಮುನ್ನುಗ್ಗುತ್ತದೆ. ಹೀಗಾಗಿ ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಕೈಜೋಡಿಸಿ ಎಂದು ಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರು ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳಿಗೆ ಕರೆ ನೀಡಿದರು.
ಕರ್ನಾಟಕ ಭವನದಲ್ಲಿ ಅಧಿಕಾರಿಗಳ ಜತೆ ಬುಧವಾರ ರಾತ್ರಿ ಏರ್ಪಡಿಸಿದ್ದ ಔತಣಕೂಟ ಸಂವಾದದಲ್ಲಿ ಅವರು ಈ ಮನವಿ ಮಾಡಿದರು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಬಳಿಕ ಇದೇ ಮೊದಲ ಬಾರಿಗೆ ದೆಹಲಿಗೆ ಆಗಮಿಸಿದ್ದ ಅವರು ಇಷ್ಟು ಬೇಗ ತಮ್ಮನ್ನು ಕರೆದು ಸಭೆ ಮಾಡಿದ್ದಕ್ಕೆ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೇಂದ್ರ ಸಚಿವ ಖಟ್ಟರ್ ಭೇಟಿಯಾದ ಸಿಎಂ ಡಿಕೆಶಿ – ರಾಜ್ಯದ ವಿವಿಧ ಯೋಜನೆಗಳ ಅನುಮತಿಗೆ ಮನವಿ
ನವದೆಹಲಿಯ ಕರ್ನಾಟಕ ಭವನದಲ್ಲಿ ಇಂದು ಹಿರಿಯ ಐಎಎಸ್, ಐಪಿಎಸ್ ಹಾಗೂ ಐಎಫ್‌ಎಸ್ ಅಧಿಕಾರಿಗಳೊಂದಿಗೆ ಔತಣಕೂಟ ಸಭೆ ನಡೆಸಿ, ರಾಜ್ಯದ ಪ್ರಗತಿ ಕುರಿತು ಚರ್ಚಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಲಾಯಿತು.
ಅಧಿಕಾರಿಗಳ ಶಕ್ತಿ ಅದಮ್ಯ. ನೀವು ಮನಸ್ಸು ಮಾಡಿದರೆ ಅಭಿವೃದ್ಧಿ ರಥ ಮುನ್ನುಗ್ಗುತ್ತದೆ. ಹೀಗಾಗಿ ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಕೈಜೋಡಿಸಿ.… pic.twitter.com/YNKunCJEUS
— DK Shivakumar (@DKShivakumar) June 10, 2026
ನಿಮ್ಮಲ್ಲಿ ಅಪಾರ ಜ್ಞಾನ, ಸಾಮರ್ಥ್ಯ ಇದೆ. ನಿಮ್ಮಲ್ಲಿರುವ ಆಗಾಧ ಪ್ರತಿಭೆಯನ್ನು ಕರ್ನಾಟಕದ ಪ್ರಗತಿಗೆ ವಿನಿಯೋಗಿಸಿ. ನಿಮಗೆ ಬೇಕಾದ ಸಹಕಾರವನ್ನು ಸರಕಾರ ನೀಡಲಿದೆ ಎಂದು ಸಿಎಂ ಅವರು ತಿಳಿಸಿದರು.
ಕೇಂದ್ರದ ಅನೇಕ ಯೋಜನೆಗಳ ಲಾಭ ರಾಜ್ಯಕ್ಕೆ ದೊರೆಯುವಂತೆ ಮಾಡುವಲ್ಲಿ ನಿಮ್ಮ ಸಹಕಾರ ಬಹು ಮುಖ್ಯ. ಕರ್ನಾಟಕದಲ್ಲಿರುವ ನಿಮ್ಮದೇ ಸಹೋದ್ಯೋಗಿಗಳ ಜತೆ ನಿರಂತರ ಸಂಪರ್ಕ, ಸಮಾಲೋಚನೆ ನಡೆಸಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ. ಬಾಕಿ ಇರುವ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಿ ಎಂದು ಹೇಳಿದರು.
ನೀವು 35 ವರ್ಷ ಸೇವೆಯಲ್ಲಿರುತ್ತಿರಿ. ನಾವು ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಹಗ್ಗಜಗ್ಗಾಟ ನಡೆಸುತ್ತೇವೆ. ಆದರೆ ಒಂದು ಸರ್ಕಾರಕ್ಕೆ ಉತ್ತಮ ಹೆಸರು ತರುವ ಶಕ್ತಿ ನಿಮ್ಮ ಕೈಯಲ್ಲೇ ಇದೆ. ನಾನು ಅಧಿಕಾರಕ್ಕಾಗಿ ಅಧಿಕಾರ ಮಾಡುವವನಲ್ಲ. ಏನಾದರೂ ಸಾಧನೆ ಮಾಡಬೇಕೆಂಬ ಛಲಕ್ಕೆ ಅಧಿಕಾರ ಬಳಸುವವನು. ನಿಮ್ಮ ಸಹಕಾರ ಇದ್ದರೆ ಸಾಧನೆ ಅಸಾಧ್ಯವಲ್ಲ ಎಂದರು. ಇದನ್ನೂ ಓದಿ: ಸತ್ತವರ ಹೆಸರಲ್ಲೂ ಹಣ ಹೋಗ್ತಿದೆ, ಅಂಗಡಿಗೂ ವಿದ್ಯುತ್ ಬಳಕೆ ಆಗ್ತಿದೆ: ಗ್ಯಾರಂಟಿ ಪರಿಷ್ಕರಣೆ ಬಗ್ಗೆ ಸಿಎಂ ರಿಯಾಕ್ಷನ್
