– ಕಸದ ಟೆಂಡರ್‌ನಲ್ಲಿ ಗೋಲ್ಮಾಲ್ ಆರೋಪಕ್ಕೆ ಡಿಕೆಶಿ ತಿರುಗೇಟು
– 6 ಸಾವಿರ ಕೋಟಿ ಹೂಡಿಕೆ ಮಾಡ್ತಿದ್ದಾರೆ ಅಂತ ಸಮರ್ಥನೆ
ನವದೆಹಲಿ: ಸತ್ತವರ ಹೆಸರಿನಲ್ಲೂ ಹಣ ಹೋಗ್ತಿದೆ, ಅಂಗಡಿಗೂ ವಿದ್ಯುತ್ ಬಳಕೆ ಆಗುತ್ತಿದೆ. ಅದನ್ನ ಪರಿಶೀಲನೆ ಮಾಡುತ್ತಿದ್ದೇವೆ. ಸರಿಯಾದ ಫಲಾನುಭವಿಗೆ ತಲುಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ದೆಹಲಿಯಲ್ಲಿಂದು ಕಾಂಗ್ರೆಸ್ (Congress) ವರಿಷ್ಠರಾದ ಸೋನಿಯ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನ ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಇದನ್ನೂ ಓದಿ: ರಾಜ್ಯಾದ್ಯಂತ 4.30 ಲಕ್ಷ ಗೃಹಲಕ್ಷ್ಮಿ ಫಲಾನುಭವಿಗಳ ಹೆಸರು ಡಿಲೀಟ್
ಗೃಹಲಕ್ಷ್ಮಿ ಯೋಜನೆ ಕಡಿತ ವಿಚಾರಕ್ಕೆ ಪ್ರತಿಕ್ರಿಯಿಸಿ, ಸತ್ತವರ ಹೆಸರಿನಲ್ಲಿ ಹಣ ಹೋಗ್ತಿದೆ. ಫೋನ್ ನಂಬರ್ ಬದಲಾಗಿ, ಯಾರಿಗೋ ಹಣ ತಲುಪುತ್ತಿದೆ. ಅದನ್ನ ಪರಿಶೀಲನೆ ಮಾಡುತ್ತಿದ್ದೇವೆ. ಸರಿಯಾದ ಫಲಾನುಭವಿಗೆ ತಲುಪಿಸುವುದು ನಮ್ಮ ಉದ್ದೇಶ ಎಂದಿದ್ದಾರೆ.
ಗೃಹಜ್ಯೋತಿ ಗ್ಯಾರಂಟಿ ಪರಿಷ್ಕರಣೆ ಕುರಿತು ಮಾತನಾಡಿ, ಅಂಗಡಿಗೂ ವಿದ್ಯುತ್ ಬಳಕೆ ಆಗುತ್ತಿದೆ. ವಾಸಕ್ಕೆ ಅಡ್ಡಿ ಇಲ್ಲ, ವಾಣಿಜ್ಯ ಬಳಕೆ ಆಗಬಾರದು. ಕರ್ನಾಟಕ ರಾಜ್ಯದ ಮತದಾರರಿಗೆ ಅನುಕೂಲ ಆಗಬೇಕು ಎಂದು ಹೇಳಿದ್ದಾರೆ.
ಇನ್ನೂ ಕಸದ ಟೆಂಡರ್‌ನಲ್ಲಿ ಗೋಲ್ಮಾಲ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು. ಇದನ್ನೂ ಓದಿ: ಕಸ ಸಂಸ್ಕರಣೆ ನೆಪದಲ್ಲಿ 39,000 ಕೋಟಿ ಹಗರಣ – 10,000 ಕೋಟಿ ಕಿಕ್‌ಬ್ಯಾಕ್: ಆರ್.ಅಶೋಕ್ ಬಾಂಬ್
ಕುಮಾರಸ್ವಾಮಿ ಕೂಡಾ ಹಿಂದೆ ಇದನ್ನೆ ಮಾತನಾಡಿದ್ದರು. ಕಸದ್ದು ದೊಡ್ಡ ಲಾಭಿ ಇದೆ. ಅವರ ಕಾಲದಲ್ಲಿ ಟೆಂಡರ್ ಮಾಡಲಿಲ್ಲ. ಕಸದಿಂದ ಪವರ್ ಮಾಡಲು ಟೆಂಡರ್ ಮಾಡಿದ್ದೆವು. ಯಾರು ಬರಲಿಲ್ಲ, ಅವರ ಸರ್ಕಾರ ಇದ್ದಾಗ ಯಾಕೆ ಮಾಡಲಿಲ್ಲ? ಬೇರೆ ಬೇರೆ ರಾಜ್ಯಗಳಲ್ಲಿ ನೋಡಿ ಈ ತಿರ್ಮಾನ ಮಾಡಿದೆ. ಅವರು 6,000 ಕೋಟಿ ರೂ. ಹೂಡಿಕೆ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ದೊಡ್ಡ ಬಳ್ಳಾಪುರದಲ್ಲಿ ಜಾಗ ನೋಡಿದ್ದೇನೆ. ಕ್ಷೇತ್ರದಲ್ಲಿ ಕಸ ಹಾಕುವ ವಿಚಾರದಲ್ಲಿ ಸಾಕಷ್ಟು ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಕಸದ್ದೊಂದು ಮಾಫಿಯ, ಅದರ ವಕ್ತಾರಾಗಿ ಆರ್. ಅಶೋಕ್ ಮಾತನಾಡುತ್ತಿದ್ದಾರೆ. ಅವರು ಯಾವ ತನಿಖೆ ಬೇಕಾದರೂ ಮಾಡಲಿ. ಸಾವಿರಾರು ಕೋಟಿ ಅಲ್ಲ, 10 ಕೋಟಿ ಆದ್ರೂ ತನಿಖೆ ಮಾಡಲಿ. ನಾನು ಸಿಎಂ ಆಗಿದ್ದು ಅವರಿಗೆ ತಡೆದುಕೊಳ್ಳಲು ಆಗ್ತಿಲ್ಲ. ಕೋರ್ಟ್ ನಮ್ಮ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದೆ ಎಂದು ಸ್ಪಷ್ಟಪಡಿಸಿದ್ರು.
ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗುತ್ತಿದ್ದೇನೆ
ಮುಂದುವರಿದು… ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗುವುದಾಗಿ ತಿಳಿಸಿದ ಸಿಎಂ, ಪಿಎಂ ಸಹಕಾರ ಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಕಸದ ಟೆಂಡರ್‌ನಲ್ಲಿ ಭಾರಿ ಗೋಲ್ಮಾಲ್: ಸರ್ಕಾರದ ವಿರುದ್ಧ ಬಿಜೆಪಿ ಗಂಭೀರ ಆರೋಪ
ಇಲ್ಲೂ ಭೇಟಿಯಾಗುವ ಪ್ರಯತ್ನ ಮಾಡುತ್ತೇನೆ. ಕೆಲವು ಕೇಂದ್ರ ಸಚಿವರಿಗೆ ಸಮಯ ಕೇಳಿದ್ದೇನೆ. ಸಮಯ ನೀಡಿದರೆ ಭೇಟಿಯಾಗಿ ಮಾತುಕತೆ ನಡೆಸುತ್ತೇನೆ. ರಾಜ್ಯದ ಹಿತಾಸಕ್ತಿ ಬಗ್ಗೆ ನೀತಿ ಆಯೋಗದ ಸಭೆಯಲ್ಲಿ ಉಲ್ಲೇಖಿಸುತ್ತೇನೆ. ಬೆಂಗಳೂರಿನಿಂದ ದೇಶವನ್ನ ನೋಡಬೇಕಿದೆ ಎಂದು ಹೇಳಿದ್ದಾರೆ.
