ನವದೆಹಲಿ: ಕಾಂಗ್ರೆಸ್ (Congress) ತನ್ನ ದುರಾಡಳಿತದ ಮೂಲಕ ಭಾರತವನ್ನ ಹತಾಶಾ ಸ್ಥಿತಿಗೆ ಕೊಂಡೊಯ್ದಿತು. ಭಾರತದಲ್ಲಿ ಅಭಿವೃದ್ಧಿ ನಿಧಾನವಾಗುತ್ತದೆ ಎಂದು ಕಾಂಗ್ರೆಸ್ ಜನರನ್ನ ನಂಬಿಸಿತ್ತು. ಅದಕ್ಕೆ ʻಹಿಂದೂ ಬೆಳವಣಿಗೆ ದರʼ ಎಂದು ಹೆಸರನ್ನೂ ಕೊಟ್ಟಿತ್ತು. ಹೀಗೆ ವೈಫಲ್ಯ, ಜವಾಬ್ದಾರಿ ಕಾಂಗ್ರೆಸ್‌ನದ್ದಾಗಿತ್ತು. ಆದ್ರೆ ಕಳಂಕವನ್ನ ಹಿಂದೂಗಳ ತಲೆಗೆ ಕಟ್ಟಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದರು.
ಮೋದಿ ನೇತೃತ್ವದ ಸರ್ಕಾರದ (Government) 12 ವರ್ಷ ಪೂರ್ಣಗೊಳಿಸಿದ್ದರ ಅಂಗವಾಗಿ ಭಾರತ್ ಮಂಟಪದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಯುಪಿಎ ಸರ್ಕಾರದ ಆಡಳಿತಾವಧಿಯನ್ನ ತೀವ್ರವಾಗಿ ಟೀಕಿಸಿದರು. ಇದನ್ನೂ ಓದಿ: ದೀರ್ಘಕಾಲ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ – NDA ಸರ್ಕಾರ ದೇಶದ ಭವಿಷ್ಯವನ್ನೇ ಬದಲಾಯಿಸಿದೆ: ಮೋದಿ
Addressing the NDA Conclave in Delhi.
https://t.co/wyowgBdfMZ— Narendra Modi (@narendramodi) June 10, 2026
ದೇಶವು ಕಾಂಗ್ರೆಸ್‌ನಿಂದ ವಿಮೋಚನೆಗೊಂಡಿದೆ. ಏಕೆಂದ್ರೆ ಕಾಂಗ್ರೆಸ್ ತನ್ನ ದುರಾಡಳಿತದ ಮೂಲಕ ಭಾರತವನ್ನ ಹತಾಶಾ ಸ್ಥಿತಿಗೆ ಕೊಂಡೊಯ್ದಿತು. ಭಾರತವನ್ನ ಭ್ರಷ್ಟಾಚಾರದ ಪ್ರಪಾತಕ್ಕೆ ದೂಡಿತು. ಭಾರತದಲ್ಲಿ ಅಭಿವೃದ್ಧಿ ನಿಧಾನವಾಗುತ್ತದೆ ಎಂದು ಕಾಂಗ್ರೆಸ್ ಜನರನ್ನ ನಂಬಿಸಿತ್ತು. ಅದಕ್ಕೆ ಒಂದು ಹೆಸರನ್ನೂ ಕೊಟ್ಟಿತ್ತು. ಅದು ʻಹಿಂದೂ ಬೆಳವಣಿಗೆ ದರʼ. ವೈಫಲ್ಯ, ಜವಾಬ್ದಾರಿ ಕಾಂಗ್ರೆಸ್‌ನದ್ದಾಗಿತ್ತು. ಆದ್ರೆ ಕಳಂಕವನ್ನ ಹಿಂದೂಗಳ ತಲೆಗೆ ಕಟ್ಟಿದ್ದರು. ಇದನ್ನ ಕಾಂಗ್ರೆಸ್ ಬೆಳವಣಿಗೆಯ ದರ ಎಂದು ಕರೆಯಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.
2014 ರ ಹಿಂದಿನ ದಶಕಗಳಲ್ಲಿ ದೇಶವು ಗಣನೀಯವಾಗಿ ಅಸ್ಥಿರತೆ ಮತ್ತು ಪ್ರಕ್ಷುಬ್ಧತೆಯಿಂದ ಗುರುತಿಸಲ್ಪಟ್ಟಿತ್ತು. ಇದು ದೇಶಕ್ಕೂ ದೊಡ್ಡ ಹಾನಿಯನ್ನುಂಟು ಮಾಡಿತ್ತು. ಆದ್ರೆ 2014 ರಲ್ಲಿ ಎನ್‌ಡಿಎ ಸರ್ಕಾರ ರಚನೆ ಆದಾಗ ದೇಶದ ಭವಿಷ್ಯ ಮತ್ತೆ ಬದಲಾಯಿತು. ದೇಶದ ಜನ ಈಗ ಸ್ಥಿರ ಸರ್ಕಾರವನ್ನು ಮತ್ತು ಅದರ ಕಾರ್ಯನಿರ್ವಹಣೆಯನ್ನ ನೋಡುತ್ತಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ದೇಶದ ಮಹಾನ್ ಜನರಿಗೆ ತಲೆಬಾಗುತ್ತೇನೆ ಎಂದು ನುಡಿದರು. ಇದನ್ನೂ ಓದಿ: ಕೇಂದ್ರ ಸಚಿವ ಖಟ್ಟರ್ ಭೇಟಿಯಾದ ಸಿಎಂ ಡಿಕೆಶಿ – ರಾಜ್ಯದ ವಿವಿಧ ಯೋಜನೆಗಳ ಅನುಮತಿಗೆ ಮನವಿ

ಎನ್‌ಡಿಎ ಸರ್ಕಾರದಿಂದ ಅದೃಷ್ಟ ಬದಲಾಯಿತು
2004 ರಲ್ಲಿ ಎನ್‌ಡಿಎ ಸೋಲನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಮೊದಲ ಬಾರಿಗೆ ಎನ್‌ಡಿಎ ಸರ್ಕಾರ ಅಟಲ್ ಜಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿತು. ಆಗ ಅಭಿವೃದ್ಧಿ ಹೇಗೆ ವೇಗಗೊಳ್ಳುತ್ತದೆ ಎಂಬುದರ ಒಂದು ನೋಟ ನಮಗೆ ಸಿಕ್ಕಿತು. ಆದರೆ ದುರದೃಷ್ಟವಶಾತ್, 2004 ರಲ್ಲಿ ದೇಶವು ಮತ್ತೊಮ್ಮೆ ಕಾಂಗ್ರೆಸ್‌ನ ಹಿಡಿತದಲ್ಲಿ ಸಿಲುಕಿಕೊಂಡಿತು. ಕಾಂಗ್ರೆಸ್ ಈ ದೇಶವನ್ನ ಸಾವಿರಾರು ಕೋಟಿ ರೂಪಾಯಿಗಳ ಹಗರಣಕ್ಕೆ ಎಳೆದೊಯ್ತು. 2014 ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ದೇಶದ ಅದೃಷ್ಟ ಮತ್ತೆ ಬದಲಾಯಿತು. ಒಳ್ಳೆಯ ಉದ್ದೇಶ, ನೀತಿ ಮತ್ತು ಕೈಗೊಳ್ಳುವ ನಿರ್ಧಾರ ಜೊತೆಗೆ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಅಭಿವೃದ್ಧಿ ಹೇಗೆ ಸಾಧ್ಯವಾಗುತ್ತದೆ ಎಂಬುದಕ್ಕೆ ಇಂದು ಎನ್‌ಡಿಎ ಸರ್ಕಾರದ ಆಡಳಿತ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.

ಎನ್‌ಡಿಎ vs ಕಾಂಗ್ರೆಸ್ ಬೆಳವಣಿಗೆಯ ದರ
ಮುಂದುವರಿದು ಮಾತನಾಡಿದ ಪ್ರಧಾನಿ, 12 ವರ್ಷಗಳಲ್ಲಿ ಇಷ್ಟೊಂದು ಬೆಳವಣಿಗೆ ಸಾಧ್ಯವಾದರೆ, ದಶಕಗಳಿಂದ ಅದು ಏಕೆ ಸಂಭವಿಸಲಿಲ್ಲ? ಎಂದು ಪ್ರಶ್ನಿಸುತ್ತಲೇ ‘ಕಾಂಗ್ರೆಸ್ ಬೆಳವಣಿಗೆ ದರ’ ಮತ್ತು ‘ಎನ್‌ಡಿಎ ಬೆಳವಣಿಗೆ ದರ’ದ ನಡುವಿನ ವ್ಯತ್ಯಾಸ ತಿಳಿಸಿದರು. ಇದನ್ನೂ ಓದಿ: ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಕೈಜೋಡಿಸಲು ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳಿಗೆ ಸಿಎಂ ಡಿಕೆಶಿ ಕರೆ
ಕೊರೊನಾ ಅವಧಿಯಲ್ಲಿ ಎಲ್ಲೆಡೆ ಅವ್ಯವಸ್ಥೆ ಇದ್ದಾಗ, ಭಾರತವು ಆ ಪರಿಸ್ಥಿತಿಯನ್ನ ಯಶಸ್ವಿಯಾಗಿ ಎದುರಿಸಿ ಮುಂದುವರಿಯಿತು. ಜಾಗತಿಕ ಆರ್ಥಿಕತೆಗಳು ಸಂಕಷ್ಟದಲ್ಲಿದ್ದಾಗ, ಭಾರತವು ಶೇಕಡಾ 7.7 ರಷ್ಟು ಬೆಳವಣಿಗೆಯೊಂದಿಗೆ ಮುನ್ನಡೆಯುತ್ತಿದೆ. ಈ ಯಶಸ್ಸು ಅಷ್ಟೊಂದು ಸುಲಭವಲ್ಲ ಎಂದು ಹೇಳಿದರು.
