ನವದೆಹಲಿ: ಈ ರಾಜಕೀಯ ಪ್ರಯಾಣದ ಏರಿಳಿತಗಳನ್ನ ನೋಡಿದ್ರೆ, ಈ ದಿನ ಬರುತ್ತದೆ ಅಂತ ನಾನು ಎಂದಿಗೂ ಊಹಿಸಿರಲಿಲ್ಲ. ಚುನಾಯಿತ ಪ್ರಧಾನಿಯಾಗಿ ದೀರ್ಘಕಾಲ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಪ್ರಧಾನಿ ನರೇಂದ್ರ ಮೋದಿ Narendra Modi) ಹೇಳಿದರು.
ಮೋದಿ ನೇತೃತ್ವದ ಸರ್ಕಾರದ (Government) 12 ವರ್ಷ ಪೂರ್ಣಗೊಳಿಸಿದ್ದರ ಅಂಗವಾಗಿ ಭಾರತ್ ಮಂಟಪದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಎನ್‌ಡಿಎ ಸರ್ಕಾರದ ಸಾಧನೆಗಳು ಹಾಗೂ ತಮ್ಮ 12 ವರ್ಷಗಳ ಸುದೀರ್ಘ ಆಡಳಿತ ಪ್ರಯಾಣವನ್ನು ವಿವರಿಸಿದರು. ಇದನ್ನೂ ಓದಿ: ಭಾರತದ ಇತಿಹಾಸದಲ್ಲೇ ದೀರ್ಘಕಾಲ ಪ್ರಧಾನಿಯಾಗಿ ಆಡಳಿತ – ನೆಹರೂ ದಾಖಲೆ ಮುರಿದ ಮೋದಿ
Addressing the NDA Conclave in Delhi.
https://t.co/wyowgBdfMZ— Narendra Modi (@narendramodi) June 10, 2026
ಈ ರಾಜಕೀಯ ಪ್ರಯಾಣದ ಏರಿಳಿತಗಳನ್ನ ನೋಡಿದ್ರೆ, ಈ ದಿನ ಬರುತ್ತದೆ ಅಂತ ನಾನು ಎಂದಿಗೂ ಊಹಿಸಿರಲಿಲ್ಲ. ಚುನಾಯಿತ ಪ್ರಧಾನಿಯಾಗಿ ದೀರ್ಘಕಾಲ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಈ ಸಂದರ್ಭದಲ್ಲಿ ನನ್ನನ್ನ ಗೌರವಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಕೃತಜ್ಞನಾಗಿರುತ್ತೇನೆ ಎಂದರು.
ಈ ಪ್ರಯಾಣದ ಭಾಗವಾಗಿರುವ ನನ್ನೆಲ್ಲಾ ಸಹೋದ್ಯೋಗಿಗಳಿಗೆ ನನ್ನ ಕೃತಜ್ಞತೆ ಅರ್ಪಿಸುತ್ತೇನೆ. ಈ ಸುದೀರ್ಘ ಪ್ರಯಾಣವನ್ನು ನನ್ನ ವೈಯಕ್ತಿಕ ಸಾಧನೆ ಅಂತ ಪರಿಗಣಿಸಲ್ಲ. ಇದು ಎಲ್ಲಾ ರೀತಿಯಲ್ಲೂ, ನಮ್ಮ ಸಾಮೂಹಿಕ ಸಾಧನೆಯಾಗಿದೆ, ಎನ್‌ಡಿಎ ಮಿತ್ರಪಕ್ಷಗಳ ಯಶಸ್ಸು ಕೂಡ ಆಗಿದೆ. ಆದ್ದರಿಂದ, ನಾನು ಈ ನಿರ್ಣಯವನ್ನ ಎನ್‌ಡಿಎ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಅರ್ಪಿಸುತ್ತೇನೆ ಎಂದು ನುಡಿದರು. ಇದನ್ನೂ ಓದಿ: ನೆಹರೂ ದಾಖಲೆ ಮುರಿದ ಮೋದಿಗೆ ಸಚಿವ ಸಂಪುಟ ಗೌರವ – ಎದ್ದುನಿಂತು ಚಪ್ಪಾಳೆ
ಇಷ್ಟು ಕಾಲ ಭಾರತಮಾತೆಗೆ ಸೇವೆ ಸಲ್ಲಿಸುವ ಸೌಭಾಗ್ಯ ಪಡೆಯುವುದು ದೇವರ ವಿಶೇಷ ಅನುಗ್ರಹದಿಂದ ಮಾತ್ರ ಸಾಧ್ಯ. ನನಗೆ, ಜನರು ಆ ದೇವರ ಸಾಕಾರ ನೀಡಿದ್ದಾರೆ. ಅದಕ್ಕಾಗಿ ನಾನು ಯಾವಾಗಲೂ ಈ ಸೇವೆಯನ್ನ ಆಧ್ಯಾತ್ಮಿಕ ಅಭ್ಯಾಸವಾಗಿ ನೋಡುತ್ತೇನೆ. ಇದನ್ನ ಒಬ್ಬಂಟಿಯಾಗಿ ಮಾಡಲು ಸಾಧ್ಯವಿಲ್ಲ, ಇದೊಂದು ಸಾಮೂಹಿಕ ಯಜ್ಞ. ಇದಕ್ಕೆ ನೀವೆಲ್ಲ ಕೊಡುಗೆ ನೀಡಿದ್ದಿರಿ ಎಂದು ಶ್ಲಾಘಿಸಿದರು.

ದೇಶದ ಜನರಿಂದು ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಸ್ಥಿರತೆ ಅರ್ಥಮಾಡಿಕೊಂಡಿದ್ದಾರೆ. ಸರ್ವೋಚ್ಛ ಅಧಿಕಾರ ಹೊಂದಿರುವ ಜನರ ಪ್ರಬುದ್ಧತೆಗೆ ಇದು ಸಾಕ್ಷಿಯಾಗಿದೆ. ದೇಶದ ಜನ ಇಷ್ಟು ಕಾಲ ನನಗೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. 2014 ರ ಹಿಂದಿನ ದಶಕಗಳಲ್ಲಿ ದೇಶವು ಗಣನೀಯವಾಗಿ ಅಸ್ಥಿರತೆ ಮತ್ತು ಪ್ರಕ್ಷುಬ್ಧತೆಯಿಂದ ಗುರುತಿಸಲ್ಪಟ್ಟಿತ್ತು. ಇದು ದೇಶಕ್ಕೂ ದೊಡ್ಡ ಹಾನಿಯನ್ನುಂಟು ಮಾಡಿತ್ತು. ಆದ್ರೆ ಈಗ ಜನ ಸ್ಥಿರ ಸರ್ಕಾರದ ಕಾರ್ಯವನ್ನ ನೋಡುತ್ತಿದ್ದಾರೆ. ಅದರ ನಿರ್ಣಾಯಕತೆಯನ್ನ ಮೆಚ್ಚುತ್ತಿದ್ದಾರೆ ಎಂದು ಬಣ್ಣಿಸಿದರು.
ನನಗೆ ಈ ಅವಾಶ ನೀಡಿದ್ದಕ್ಕಾಗಿ ಈ ದೇಶದ ಜನರ ಮುಂದೆ ತಲೆಭಾಗುತ್ತೇನೆ. 2014 ರಲ್ಲಿ ಎನ್‌ಡಿಎ ಸರ್ಕಾರ ಗೆದ್ದಾಗ ದೇಶದ ಜನರಿಗೆ ಹೊಸ ಭರವಸೆ ಹುಟ್ಟಿಕೊಂಡಿತು. ಆ ಭರವಸೆಯನ್ನ ಮುಂದೆಯೂ ಉಳಿಸಿಕೊಂಡು, ದೇಶವನ್ನು ಮುನ್ನಡೆಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದರು. ಇದನ್ನೂ ಓದಿ: ನೆಹರೂ ದಾಖಲೆ ಮುರಿದ ಮೋದಿ – ಪ್ರಧಾನಿಗಳಿಗೆ ಕೇಂದ್ರ ಸಚಿವ ಹೆಚ್‌ಡಿಕೆ ಅಭಿನಂದನೆ
