ರೋರಿಂಗ್ ಸ್ಟಾರ್ ಶ್ರೀಮುರಳಿ(Sri Murali) ಭತ್ತಳಿಕೆಯಿಂದ ಬರುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು ಪರಾಕ್. ಸಿನಿಮೋತ್ಸವ ಇರುವ ಹೊಸ ತಂಡ ಸೇರಿಕೊಂಡು ಮಾಡುತ್ತಿರುವ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಆ ನಿರೀಕ್ಷೆಗೆ ತಕ್ಕಂತೆ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಬೆಂಗಳೂರಿನ ಖಾಸಗಿ ಮಾಲ್‌ನಲ್ಲಿ ಟೀಸರ್ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನಿರ್ದೇಶಕ ಹಾಲೇಶ್ ಕೊಗುಂಡಿ ಮಾತನಾಡಿ, ಇದು ಜಸ್ಟ್ ಟೀಸರ್ ಅಷ್ಟೇ. ಸಿನಿಮಾದಲ್ಲಿ ಸಾಕಷ್ಟು ವಿಷಯಗಳನ್ನು ಹೇಳಿದ್ದೇವೆ. ಶ್ರೀಮುರಳಿ ಸರ್ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ನಿಮ್ಮ ಬೆಂಬಲ ಇರಲಿ ಎಂದರು.
ನಟ ಶ್ರೀಮುರಳಿ ಮಾತನಾಡಿ, ಪರಾಕ್(Paraak) ಟೀಸರ್ ನೋಡಿದ್ರೆ ಇದು ಸುಲಭವಾಗಿ ಆದ ಕೆಲಸ ಅಲ್ಲ. ಅದಕ್ಕೆ ಆದ ಶ್ರಮ. ಸಾಕಷ್ಟು ಮೀಟಿಂಗ್ ಆಯ್ತು. ಇದನ್ನು ತೆಗೆಯಲು ಎರಡೂವರೆ ವರ್ಷ ತೆಗೆದುಕೊಂಡೆವು. ಪರಾಕ್ ಸುಲಭವಾಗಿ ಶುರುವಾದ ಸಿನಿಮಾವಲ್ಲ. ಕಥೆಗೆ ಮೂರೂವರೆ ವರ್ಷ ಟೈಮ್ ಕೊಟ್ಟಿದ್ದೇವೆ. ಹೊಸಬರು, ಹೊಸ ಪ್ರೊಡಕ್ಷನ್ ಜೊತೆ ಯಾಕೆ ಸಿನಿಮಾ ಮಾಡಿದ್ದೇನೆ? ಅಂದರೆ ಅವರ ಜೊತೆ ಕೆಲಸ ಮಾಡಲು ನನಗೆ ಕಿಕ್ಕು. ನಾನು ಹೊಸಬರನ್ನು, ಅವರ ಆಲೋಚನೆಯನ್ನು, ಇಷ್ಟಪಡುತ್ತೇನೆ ನಂಬುತ್ತೇನೆ ಎಂದರು. ಇದನ್ನೂ ಓದಿ: ಹಾಲಿವುಡ್‌ಗೆ ಎಂಟ್ರಿ ಕೊಟ್ಟ ದಿಶಾ ಪಟಾನಿ; ಆಸ್ಕರ್ ವಿಜೇತ ನಟನೊಂದಿಗೆ ಸಿನಿಮಾ
![]()
ಪರಾಕ್ ಎಂಬ ಅದ್ಬುತ ಪ್ರಯತ್ನವನ್ನು ಎಲ್ಲರಿಗೂ ನೀಡಬೇಕು ಎಂಬ ಅಸೆ, ಹಠ, ಕಾಳಜಿಯಿಂದ ಮಾಡುತ್ತಿದ್ದೇವೆ. ಈ ಹೊಸತಂಡ ನಮ್ಮ ಚಿತ್ರರಂಗದ ಆಸ್ತಿಗಳು. ಚಿತ್ರದ ಬಗ್ಗೆ ಹೆಚ್ಚಿನದಾಗಿ ಹೇಳಲ್ಲ. ಇನ್ನೂ ಸಿನಿಮಾ ಚಿತ್ರೀಕರಣ ಮಾಡುವುದು ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಚಯನ್ ನಿರ್ದೇಶನದ ಮ್ಯಾರೇಜ್ ಪಾರ್ಟಿ ಫಸ್ಟ್ ಲುಕ್ ರಿಲೀಸ್
