ಬೆಂಗಳೂರು: ಪಿಯುಸಿ ಉಪನ್ಯಾಸಕರು 9, 10ನೇ ತರಗತಿಗೆ ಕಡ್ಡಾಯವಾಗಿ ಪಾಠ ಮಾಡಬೇಕು ಎಂದು ರಾಜ್ಯ ಸರ್ಕಾರ (Karnataka Govt) ಅಧಿಸೂಚನೆ ಹೊರಡಿಸಿದೆ.
2013ರ ನೇಮಕಾತಿ ನಿಯಮವನ್ನು ಸರ್ಕಾರ ತಿದ್ದುಪಡಿಗೊಳಿಸಿದ್ದು, ಈ ವರ್ಷದಿಂದಲೇ ನಿಯಮ ಜಾರಿಯಾಗಲಿದೆ. ಇದರನ್ವಯ ನೇರ ನೇಮಕಾತಿ ಮತ್ತು ಬಡ್ತಿಯಿಂದ ನೇಮಕವಾದ ಉಪನ್ಯಾಸಕರು 9-10 ನೇ ತರಗತಿಗೆ ಪಾಠ ಮಾಡಬೇಕು ಎಂದು ಸರ್ಕಾರ ಆದೇಶಿಸಿದೆ. ಇದನ್ನೂ ಓದಿ: 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಶುರು ಮಾಡಿದ ಸರ್ಕಾರ
ಇನ್ನೂ ರಾಜ್ಯ ಸರ್ಕಾರ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ನೇಮಕಾತಿ ಸಂಬಂಧ ಸರ್ಕಾರ ಕರಡು ಗೆಜೆಟ್ ಅಧಿಸೂಚನೆ ಪ್ರಕಟಿಸಿದ್ದು, ಆಕ್ಷೇಪಣೆಗೆ 15 ದಿನಗಳ ಅವಕಾಶವನ್ನು ನೀಡಿದೆ. ಕಲ್ಯಾಣ ಕರ್ನಾಟಕಕ್ಕೆ 6905 ಹಾಗೂ ಇತರೆ ಜಿಲ್ಲೆಗಳಿಗೆ 8095 ಹುದ್ದೆ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.
