ಈ ಫೆಸ್ಟಿವ್ ಸೀಸನ್‌ನಲ್ಲಿ ವೈವಿಧ್ಯಮಯ ಗ್ರ‍್ಯಾಂಡ್ ಬನಾರಸ್ ಸಿಲ್ಕ್ ಸೀರೆಗಳು ಹಂಗಾಮ ಎಬ್ಬಿಸಿವೆ.
ಹೌದು, ಮೊದಲಿನಿಂದಲೂ ಬನಾರಸ್ ಸೀರೆಗಳು ಗ್ರ‍್ಯಾಂಡ್ ಸೀರೆಗಳ ಪಟ್ಟಿಯಲ್ಲಿವೆ. ಈ ಶೈಲಿಯ ಸೀರೆಗಳು ಮೂಲತಃ ಉತ್ತರ ಭಾರತದ ಬನರಾಸ್‌ನದ್ದಾದರೂ ದಕ್ಷಿಣ ಭಾರತದ ಮಹಿಳೆಯರನ್ನು ಮೊದಲಿನಿಂದಲೂ ಆಕರ್ಷಿಸಿವೆ. ಇತ್ತೀಚೆಗೆ ಇವುಗಳ ಹೊಸ ಪ್ರಿಂಟ್ಸ್ ಹಾಗೂ ಹೊಸ ಪಾಸ್ಟೆಲ್ ಶೇಡ್ಸ್‌ಗಳ ಆಗಮನದಿಂದಾಗಿ ಮಹಿಳೆಯರಿಗೆ ಮಾತ್ರವಲ್ಲ, ಕಾಲೇಜು ಹುಡುಗಿಯರಿಗೂ ಪ್ರಿಯವಾಗತೊಡಗಿವೆ. ಪರಿಣಾಮವಾಗಿ ಬನಾರಸ್ ಸಿಲ್ಕ್ ಸೀರೆಗಳು, ಮೊದಲಿಗಿಂತ ಹೆಚ್ಚಾಗಿ ಈ ಜನರೇಷನ್ ಯುವತಿಯರನ್ನ ಆಕರ್ಷಿಸಿವೆ.
Advertisement
View this post on Instagram
Advertisement
ಪ್ರಮುಖವಾಗಿ 4 ಬಗೆಯ ಬನಾರಸ್ ಸೀರೆಗಳನ್ನ ಎವರ್‌ಗ್ರೀನ್ ಸೀರೆಗಳೆಂದು ಕರೆಯಲಾಗುತ್ತದೆ. ಅವುಗಳಲ್ಲಿ ಕತಾನ್, ಜರಿಯ ಕೋರಾ, ಜಾರ್ಜೆಟ್ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ರೇಷ್ಮೆ ದಾರದಿಂದಲೇ ಸಿದ್ಧಪಡಿಸಲಾಗುವ ಬ್ರೋಕೆಡ್, ಗೋಲ್ಡ್ ಹಾಗೂ ಸಿಲ್ವರ್ ಲುಕ್ ನೀಡುವ ಬನಾರಸ್ ಸೀರೆಗಳಂತೂ ಈ ಸೀಸನ್‌ನಲ್ಲಿ ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಬಿಡುಗಡೆಯಾಗುತ್ತಿರುವುದು ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ.
Advertisement
Advertisement
ದಶಕಗಳ ಹಿಂದೆ ಬನಾರಸ್ ಸೀರೆಗಳು ಅತಿ ಹೆಚ್ಚು ಪ್ರಚಲಿತದಲ್ಲಿದ್ದವು. ಆದರೆ, ಹೆಚ್ಚು ವಿನ್ಯಾಸ ಲಭ್ಯವಿರಲಿಲ್ಲ. ಕೇವಲ ಮದುವೆ ಹಾಗೂ ಗ್ರ‍್ಯಾಂಡ್ ಸಮಾರಂಭಗಳಿಗೆ ಮಾತ್ರ ಈ ಸೀರೆಗಳನ್ನು ಕೊಳ್ಳುವ ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು. ಆದರೀಗ ಈ ಜನರೇಷನ್ ಯುವತಿಯರು ಇಂಡೋ-ವೆಸ್ಟರ್ನ್ ಶೈಲಿಯಲ್ಲಿ ಧರಿದುವುದು ಆರಂಭವಾದ ಕಾರಣ ಇವುಗಳ ಕೊಳ್ಳುವವರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಇದನ್ನೂ ಓದಿ:Stree 3: ರಶ್ಮಿಕಾ ಮಂದಣ್ಣಗೆ ವಿಲನ್ ಆದ ಅಕ್ಷಯ್ ಕುಮಾರ್
ಶುದ್ಧ ಬನಾರಸ್ ಸೀರೆಗಳನ್ನು ಆಯ್ಕೆ ಮಾಡುವಾಗ ಸಾಕಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಸಿಲ್ಕ್ ಮಾರ್ಕ್ನಿಂದಿಡಿದು ನಾನಾ ವಿಷಯಗಳನ್ನು ಗಮನಿಸಬೇಕಾಗುತ್ತದೆ. ಇದೀಗ ಕಡಿಮೆ ಬೆಲೆಯ ಬನಾರಸ್ ಸಿಲ್ಕ್ ಸೀರೆಗಳು ಮಾರುಕಟ್ಟೆಯಲ್ಲಿ ದೊರೆಯಲಾರಂಭಿಸಿವೆ. ಹಾಗಾಗಿ ಪರಿಶೀಲಿಸಿ ಖರೀದಿಸುವುದು ಉತ್ತಮ.
ಸೀರೆ ಸ್ವಾರಸ್ಯ ಕುರಿತು ಒಂದಿಷ್ಟು ಟಿಪ್ಸ್:
* ಸ್ಟೈಲಿಶ್ ಹಾಗೂ ಗುಣಮಟ್ಟದ ಸೀರೆ ಆಯ್ಕೆ ಮಾಡಿಕೊಳ್ಳುವುದರೊಂದಿಗೆ ಗ್ಲಾಮರಸ್ ಬ್ಲೌಸ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇದರಿಂದ ಇಂಡೋ-ವೆಸ್ಟರ್ನ್ ಲುಕ್ ನಿಮ್ಮನ್ನು ಇನ್ನಷ್ಟು ಆಕರ್ಷಣೆಗೊಳಿಸುತ್ತದೆ.
* ಸೀರೆಯನ್ನು ಡಿಫರೆಂಟ್ ಡ್ರೇಪ್ (ನೆರಿಗೆ ಹಾಕುವುದು) ಮಾಡಿದಾಗಲೂ ವಿಭಿನ್ನವಾಗಿ ಕಾಣಿಸುತ್ತದೆ.
* ಸ್ಯಾರಿಗೆ ತಕ್ಕಂತೆ ಸಮಕಾಲೀನವಾಗಿ ಹೇರ್‌ಸ್ಟೈಲ್ ಮ್ಯಾಚ್ ಮಾಡಿ ನೋಡುವುದು ಉತ್ತಮ.